ಮಂಡ್ಯ: ದಕ್ಷಿಣದ ಗಂಗೆ ಕಾವೇರಿ. ಇಲ್ಲಿ ಮಿಂದರೆ ಎಲ್ಲಾ ಪಾಪ ಕರ್ಮಗಳು ತೊಳೆದು ಹೋಗುತ್ತವೆ ಎಂಬ ನಂಬಿಕೆ ಇದೆ. ಈ ಕಾರಣಕ್ಕಾಗಿಯೇ ಕಾವೇರಿಗೆ ಅಸ್ಥಿ ವಿಸರ್ಜನೆ ಮಾಡಲಾಗುತ್ತೆ. ಇಂದು ಪಿತೃಪಕ್ಷವಾದ್ದರಿಂದ ಕಾವೇರಿ ತೀರದಲ್ಲಿ ತರ್ಪಣ ಬಿಡಲು ಜನ ಸಮೂಹವೇ ನೆರೆದಿತ್ತು.
ಪಿತೃಪಕ್ಷದ ಪೂಜೆಗಾಗಿ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಜನರು ಶ್ರೀರಂಗಪಟ್ಟಣಕ್ಕೆ ಆಗಮಿಸಿ, ಅಗಲಿದ ತಮ್ಮ ಹಿರಿಯರಿಗೆ ತರ್ಪಣ ಬಿಟ್ಟು ಸದ್ಗತಿಗಾಗಿ ಪ್ರಾರ್ಥಿಸಿದರು.
ಮಹಾಲಯ ಅಮವಾಸ್ಯೆ ಕಾರಣದಿಂದ ಕಾವೇರಿ ನದಿ ದಂಡೆಯ ಪ್ರದೇಶಗಳಾದ ಸ್ನಾನಘಟ್ಟ, ಪಶ್ವಿಮ ವಾಹಿನಿ, ಘೋಸಾಯ್ ಘಾಟ್, ಸಂಗಮ್‌ನಲ್ಲಿ ಜನರು ಪಿತೃ ಪೂಜೆ ಮಾಡಿದರು.