ETV Bharat / state

ಮಂಡ್ಯದಲ್ಲಿ PAYCS ಅಭಿಯಾನ; ಕೃಷಿ ಸಚಿವರ ವಿರುದ್ದ ಬಿಜೆಪಿ ಆಕ್ರೋಶ

ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ದ ಪ್ರತಿಭಟನೆ ನಡೆಸಿದರು.

ಮಂಡ್ಯದಲ್ಲಿ ಪೇ ಸಿಎಸ್ ಅಭಿಯಾನ
ಮಂಡ್ಯದಲ್ಲಿ ಪೇ ಸಿಎಸ್ ಅಭಿಯಾನ
author img

By

Published : Aug 10, 2023, 5:21 PM IST

Updated : Aug 10, 2023, 6:11 PM IST

ಮಂಡ್ಯ : ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ, ಸಂಜಯ್ ವೃತ್ತದಲ್ಲಿ ಇಂದು ಪೇ ಸಿಎಸ್ ಪೋಸ್ಟರ್ ಅಭಿಯಾನ ಶುರುಮಾಡಿದ್ದು, ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕೃಷಿ ಇಲಾಖೆ ಅಧಿಕಾರಿಗಳಿಂದ ಸಚಿವರು ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಕ್ಯೂಆರ್ ಕೋಡ್​ ಇರುವ ಪೇ ಸಿಎಸ್​ ಪೋಸ್ಟರ್​ನಲ್ಲಿ, "6 ರಿಂದ 8 ಲಕ್ಷ ರೂ ಇಲ್ಲಿ ಪಡೆಯಲಾಗುತ್ತದೆ. ಟ್ಯಾಗ್‍ಲೈನ್‍ನಲ್ಲಿ ಕ್ಯೂಆರ್​ ಕೋಡ್​ ಸ್ಕ್ಯಾನ್ ಮಾಡಿ ಚಲುವರಾಯಸ್ವಾಮಿ ಭ್ರಷ್ಟಾಚಾರ ಹೊರಬರುತ್ತೆ ನೋಡಿ" ಎಂದು ಬರೆಯಲಾಗಿದೆ.

ಸ್ಥಳಕ್ಕೆ ಬಂದ ಪೊಲೀಸರು ಅಲ್ಲಲ್ಲಿ ಅಂಟಿಸಿದ್ದ ಪೋಸ್ಟರ್​ಗಳನ್ನು ಕಿತ್ತು ಹಾಕಿದರು. ಪೊಲೀಸರ ನಡೆಗೆ ಬಿಜೆಪಿ ಕಾರ್ಯಕರ್ತರು ಈ ವೇಳೆ ವಿರೋಧ ವ್ಯಕ್ತಪಡಿಸಿದರು. ಬಳಿಕ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡರು.

ಬಿಜೆಪಿ ಕಾರ್ಯಕರ್ತ ಮಂಜುನಾಥ್ ಮಾತನಾಡಿ​, "ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್​ ಕುತಂತ್ರ ಮಾಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮುಖಾಂತರ ಕಮಿಷನ್​ ಆರೋಪ ಮಾಡಿತ್ತು. ನಂತರ ಪೇ ಸಿಎಂ ಎಂದು ಎಲ್ಲೆಡೆ ಪೋಸ್ಟರ್​ ಅಂಟಿಸಿದ್ದರು. ಆದರೆ, ಇಂದು ಅವರದೇ ಪಕ್ಷದ ಕೃಷಿ ಸಚಿವ ಚಲುವರಾಯಸ್ವಾಮಿ ಮೇಲೆ ಲಂಚದ ಆರೋಪವಿದೆ. ಸ್ವತಃ ಕೃಷಿ ಇಲಾಖೆ ಅಧಿಕಾರಿಗಳೇ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ" ಎಂದು ಹೇಳಿದರು.

ಮಂಡ್ಯದಲ್ಲಿ ನಡೆದ ಈ ಪೇ ಸಿಎಸ್ ಪೋಸ್ಟರ್ ಅಭಿಯಾನದ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇದರಿಂದ ನನಗೆ ಪ್ರಚಾರ ಕೊಡುತ್ತಿದ್ದಾರೆ, ಕೊಡಲಿ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪೇಸಿಎಂ ಅಂತಾ 40% ಕಮಿಷನ್​ ಕುರಿತು ಬಿಜೆಪಿ ಬಗ್ಗೆ ಆಂದೋಲನ ನಡೀತು. ಇದೀಗ 5 ಗ್ಯಾರಂಟಿ ನೋಡಿ ಜೆಡಿಎಸ್, ಬಿಜೆಪಿಗೆ ನಿರಾಸೆ ಆಗಿದೆ. ಕಾಂಗ್ರೆಸ್​ 135 ಸೀಟು ಗೆದ್ದಿರೋದನ್ನು ನೋಡಿ ಅವರು ಗಾಬರಿ ಆಗಿದ್ದಾರೆ. ಲೋಕಸಭೆ ಎಲೆಕ್ಷನ್ ಎದುರಿಸೋಕೆ ಅವರಿಗೆ ಭಯವಾಗಿದೆ ಎಂದು ಎರಡೂ ಪಕ್ಷದ ನಾಯಕರ ಕಾಲೆಳೆದರು.

ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಫೇಕ್ ಲೆಟರ್ ಎಂದು ಗವರ್ನರ್ ಆಫೀಸ್​ನವರೇ ಹೇಳಿದ್ದಾರೆ. ಆ ಲೆಟರ್ ಇಟ್ಕೊಂಡು ಪೇ ಸಿಎಸ್ ಅಂದ್ರೆ ಏನು ಪ್ರಯೋಜನ? ನನಗೆ ಪ್ರಚಾರ ಕೊಡ್ತಿದ್ದಾರೆ, ಕೊಡಲಿ. ಮಂಡ್ಯ ಜಿಲ್ಲೆಯಲ್ಲಿ 2018ರ ಸಂದರ್ಭದಲ್ಲಿ 7 ಜನ ಶಾಸಕರು, ಮೂವರು ಎಂಎಲ್​ಸಿ ಎಲ್ಲಾ ಸೇರಿ ಹತ್ತು ಮಂದಿ ಜೆಡಿಎಸ್​ನಲ್ಲಿದ್ದರು. ಆದರೇ ಇದೀಗ 6 ಶಾಸಕರು, 3 ಎಂಎಲ್​ಸಿಗಳು ಕಾಂಗ್ರೆಸ್​ನವರಿದ್ದಾರೆ. ಜೆಡಿಎಸ್​ ಒಂದು ಕಡೆ ಇರುವುದರಿಂದ ಪಾಪ ಅವರಿಗೆ ಏನಾಗಬೇಡ ಹೇಳಿ? ನಾವು ಕರೆಕ್ಟ್ ಆಗಿದ್ರೆ, ನಾವೇಕೆ ಆತಂಕ ಪಡಬೇಕು ಎಂದು ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ : ಕೃಷಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು ಪ್ರಕರಣ: ಮಂಡ್ಯಕ್ಕೆ CID ಅಧಿಕಾರಿಗಳ ಭೇಟಿ, ಪರಿಶೀಲನೆ

Last Updated : Aug 10, 2023, 6:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.