ETV Bharat / state

ಗ್ರಾಮದೊಳಗೆ ಕ್ವಾರಂಟೈನ್ ಕೇಂದ್ರ ಬೇಡ್ವೇ ಬೇಡ: ಸಚಿವರ ಜೊತೆ ಗ್ರಾಮಸ್ಥರ ಜಟಾಪಟಿ - ಶಾಸಕ ಸುರೇಶ್ ಗೌಡ

ಮುಂಬೈ ಸೇರಿದಂತೆ ವಿವಿಧ ಪ್ರದೇಶಗಳಿಂದ ನಾಗಮಂಗಲ, ಕೆ.ಆರ್.ಪೇಟೆಗೆ ಆಗಮಿಸಿದವರನ್ನ ಕ್ವಾರಂಟೈನ್ ಮಾಡಲು ಕದಬಹಳ್ಳಿ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಆಯ್ಕೆ ಮಾಡಲಾಗಿತ್ತು. ಶಾಲೆ ವೀಕ್ಷಣೆಗೆ ಬಂದ ಸಚಿವ ನಾರಾಯಣಗೌಡರ ಜೊತೆ ಮಾತಿನ ಚಕಮಕಿ ನಡೆಸಿದ ಸ್ಥಳೀಯರು, ಕ್ವಾರಂಟೈನ್ ಕೇಂದ್ರ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದರು.

Opposition to the Quarantine Center within the Village:  Villagers takeover with the Minister
ಗ್ರಾಮದೊಳಗೆ ಕ್ವಾರಂಟೈನ್ ಕೇಂದ್ರಕ್ಕೆ ವಿರೋಧ: ಸಚಿವರ ಜೊತೆ ಗ್ರಾಮಸ್ಥರ ಜಟಾಪಟಿಗ್ರಾಮದೊಳಗೆ ಕ್ವಾರಂಟೈನ್ ಕೇಂದ್ರಕ್ಕೆ ವಿರೋಧ: ಸಚಿವರ ಜೊತೆ ಗ್ರಾಮಸ್ಥರ ಜಟಾಪಟಿ
author img

By

Published : May 5, 2020, 6:35 PM IST

ಮಂಡ್ಯ: ತಮ್ಮ ಗ್ರಾಮದಲ್ಲಿ ಹಾಸ್ಟೆಲ್ ಕ್ವಾರಂಟೈನ್ ಕೇಂದ್ರ ಆರಂಭ ಮಾಡುವುದೇ ಬೇಡ ಎಂದು ಸ್ಥಳೀಯ ಶಾಸಕ ಸೇರಿದಂತೆ ಗ್ರಾಮಸ್ಥರು ಸಚಿವ ನಾರಾಯಣಗೌಡರ ಜೊತೆ ವಾಗ್ವಾದಕ್ಕಿಳಿದ ಘಟನೆ ನಡೆದಿದೆ. ಇಲ್ಲಿನ ನಾಗಮಂಗಲ ತಾಲೂಕಿನ ಕದಬಹಳ್ಳಿ ಬಳಿ ಕ್ವಾರಂಟೈನ್ ಮಾಡಲು ಶಾಲೆ ವೀಕ್ಷಣೆಗೆ ಆಗಮಿಸಿದ್ದ ಸಚಿವ ನಾರಾಯಣ ಗೌಡ ಹಾಗೂ ಇಲ್ಲಿನ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ.

ಮುಂಬೈ ಸೇರಿದಂತೆ ವಿವಿಧ ಪ್ರದೇಶಗಳಿಂದ ನಾಗಮಂಗಲ, ಕೆ.ಆರ್.ಪೇಟೆಗೆ ಆಗಮಿಸಿದ್ದವರನ್ನು ಕ್ವಾರಂಟೈನ್ ಮಾಡಲು ಕದಬಹಳ್ಳಿ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯನ್ನು ಆಯ್ಕೆ ಮಾಡಲಾಗಿತ್ತು. ಶಾಲೆ ವೀಕ್ಷಣೆಗೆ ಬಂದ ಸಚಿವ ನಾರಾಯಣಗೌಡರ ಜೊತೆ ಮಾತಿನ ಚಕಮಕಿ ನಡೆಸಿದ ಸ್ಥಳೀಯರು, ಕ್ವಾರಂಟೈನ್ ಕೇಂದ್ರ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದರು.

ಗ್ರಾಮದೊಳಗೆ ಕ್ವಾರಂಟೈನ್ ಕೇಂದ್ರಕ್ಕೆ ವಿರೋಧ: ಸಚಿವರ ಜೊತೆ ಗ್ರಾಮಸ್ಥರ ಜಟಾಪಟಿ

ಗ್ರಾಮದಲ್ಲಿನ ಎಲ್ಲ ಪಕ್ಷದ ಮುಖಂಡರು, ಗ್ರಾಮಸ್ಥರು ಸೇರಿದಂತೆ ಸ್ಥಳೀಯ ಜೆಡಿಎಸ್ ಶಾಸಕ ಸುರೇಶ್ ಗೌಡ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಗ್ರಾಮದ ಹೊರ ವಲಯದಲ್ಲಿನ ಹಾಸ್ಟೆಲ್​ಗಳನ್ನು ಆಯ್ಕೆ ಮಾಡುವಂತೆ ಆಗ್ರಹಿಸಿದರು. ಇಲ್ಲಿ ಸರ್ಕಾರಿ ಶಾಲೆಯೂ ಇದೆ, ಸಂತೆಯೂ ನಡೆಯುತ್ತದೆ. ಹೀಗಾಗಿ ಕ್ವಾರಂಟೈನ್ ಕೇಂದ್ರ ಬೇಡವೆಂದು ಪಟ್ಟು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಸಚಿವ ನಾರಾಯಣಗೌಡರ ಜೊತೆ ಮಾತಿನ ಚಕಮಕಿ ನಡೆಸಿದ ಗ್ರಾಮಸ್ಥರು, ಇಲ್ಲಿ ಬೇಡವೇ ಬೇಡ ಎಂದು ಪಟ್ಟು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ನಮ್ಮ ತಾಲೂಕಿನವರನ್ನು ಮಾತ್ರ ಇಲ್ಲಿ ಇಡಿ, ಬೇರೆಯವರು ಬೇಡ ಎಂದು ಪಟ್ಟು ಹಿಡಿದು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.