ETV Bharat / state

corona scare : ಮಂಡ್ಯದಲ್ಲಿ 1-7ನೇ ತರಗತಿಯ  ಶಾಲೆಗಳು 1 ವಾರ ಬಂದ್.. ಜಿಲ್ಲಾಧಿಕಾರಿ ಅಶ್ವತಿ ಆದೇಶ - 1 week schools stop in Mandya

corona scare : ಮಂಡ್ಯ ಜಿಲ್ಲೆಯಾದ್ಯಂತ ಈಗಾಗಲೇ ಕೊರೊನಾ ಕಾಣಿಸಿಕೊಂಡ ಹತ್ತಕ್ಕೂ ಅಧಿಕ ಶಾಲೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ರಜಾ ದಿನಗಳಲ್ಲಿ ಆನ್​ಲೈನ್ ತರಗತಿ ನಡೆಸಲು ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ..

mandya-district
ಶಾಲೆಗಳು 1 ವಾರ ಬಂದ್
author img

By

Published : Jan 14, 2022, 11:56 AM IST

ಮಂಡ್ಯ : ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ಕಾರಣ 1 ರಿಂದ 7ನೇ ತರಗತಿವರೆಗಿನ ಎಲ್ಲಾ ಶಾಲೆಗಳಿಗೆ ಒಂದು ವಾರ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಕೊರೊನಾ ಪ್ರಕರಣ ಹೆಚ್ಚಳದ ಜೊತೆಗೆ ಶಾಲಾ ಮಕ್ಕಳಲ್ಲಿ ಕೊರೊನಾ ಅಧಿಕವಾಗಿ ವ್ಯಾಪಿಸಿದ ಕಾರಣ ಜಿಲ್ಲೆಯಾದ್ಯಂತ ಜ.17ರಿಂದ 22ರವರೆಗೆ ಒಂದು ವಾರ ಶಾಲೆಗಳನ್ನ ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಅಶ್ವತಿ ಆದೇಶಿಸಿದ್ದಾರೆ.

ಶಾಲೆ ಬಂದ್​ ಮಾಡಿ ಜಿಲ್ಲಾಡಳಿತ ಹೊರಡಿಸಿದ ಆದೇಶ

ಸೋಮವಾರದಿಂದ 1 ರಿಂದ 7ರವರೆಗೆ ಭೌತಿಕ ತರಗತಿಗಳನ್ನ ನಡೆಸದಂತೆ ಈ ಆದೇಶದಲ್ಲಿ ತಿಳಿಸಲಾಗಿದೆ. ಸರ್ಕಾರಿ, ಖಾಸಗಿ, ಅನುದಾನಿತ, ವಸತಿ ಶಾಲೆಗಳು ಒಳಗೊಂಡಂತೆ 1 ರಿಂದ 7ನೇ ತರಗತಿವರೆಗಿನ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳನ್ನೂ ಸಹ ಬಂದ್ ಮಾಡುವಂತೆ ಸೂಚಿಸಲಾಗಿದೆ.

ಜಿಲ್ಲಾದ್ಯಂತ ಈಗಾಗಲೇ ಕೊರೊನಾ ಕಾಣಿಸಿ ಹತ್ತಕ್ಕೂ ಅಧಿಕ ಶಾಲೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ರಜಾ ದಿನಗಳಲ್ಲಿ ಆನ್​ಲೈನ್ ತರಗತಿಗಳನ್ನ ನಡೆಸಲು ಶಿಕ್ಷಣ ಇಲಾಖೆಗೆ ಸೂಚಿಸಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಲಾಕ್ ಡೌನ್ ಇಲ್ಲ, ಕಠಿಣ ನಿಯಮ ಮುಂದುವರಿಕೆ: ಆರಗ ಜ್ಞಾನೇಂದ್ರ ಸ್ಪಷ್ಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.