ಮಂಡ್ಯ: ನಾನು ಯಾರನ್ನೂ ಮುಂಬೈನಿಂದ ಮಂಡ್ಯಕ್ಕೆ ಕರೆಸಿಲ್ಲ. ಅಲ್ಲದೇ ನನ್ನ ಸಂಬಂಧಿಯನ್ನೂ ಸಹ ಕರೆಸಲು ಶಿಫಾರಸು ಮಾಡಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಸ್ಪಷ್ಟನೆ ನೀಡಿದರು.
ಇಂದು ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಕೇವಲ ಮಹಾರಾಷ್ಟ್ರದಿಂದ ಜನರು ಬಂದಿಲ್ಲ, 18 ರಾಜ್ಯಗಳಿಂದ ಜಿಲ್ಲೆಗೆ ಜನ ಬಂದಿದ್ದಾರೆ. ಅದರಲ್ಲಿ ಮಹಾರಾಷ್ಟ್ರದಿಂದ ಬಂದವರು ಹೆಚ್ಚಾಗಿದ್ದಾರೆ ಎಂದು ಮಾಹಿತಿ ನೀಡಿದರು. ಮಹಾರಾಷ್ಟ್ರದಿಂದ 1567 ಮಂದಿ, ತಮಿಳುನಾಡಿನಿಂದ 220, ರಾಜಸ್ಥಾನದಿಂದ 25 ಮಂದಿ ಬಂದಿದ್ದು, ಹೀಗೆ ಹಲವು ರಾಜ್ಯಗಳಿಂದ ಜನ ಬಂದಿದ್ದಾರೆ. ಅವರೆಲ್ಲಾ ಕ್ವಾರಂಟೈನ್ ಆಗಿದ್ದಾರೆ ಎಂದು ಮಾಹಿತಿ ನೀಡಿದರು.
ಮೈಶುಗರ್ ಅನುಮಾನ:
ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರ ನಡುವೆ ಹೊಂದಾಣಿಕೆ ಕೊರತೆ ಇದೆ. ಹೀಗಾಗಿ ಸರ್ಕಾರ ಒಂದು ಸೂಕ್ತ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಮೈಶುಗರ್ ಆರಂಭ ಈ ಸಾಲಿನಲ್ಲಿ ಅನುಮಾನ ಎಂದು ಇದೇ ವೇಳೆ ಸಚಿವರು ಸ್ಪಷ್ಟ ಪಡಿಸಿದರು.
ಎಲ್ಲರೂ ಒಂದು ತೀರ್ಮಾನಕ್ಕೆ ಬಂದು ನಿರ್ಧಾರ ತಿಳಿಸಿದರೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಕಾರ್ಖಾನೆಯನ್ನು ಖಾಸಗೀಕರಣ ಮಾಡಲ್ಲ. ಒ ಅಂಡ್ ಎಂ ಆಧಾರದಲ್ಲಿ ನೀಡಲಾಗುವುದು. ಆದರೆ ಎಲ್ಲರ ತೀರ್ಮಾನ ಒಂದೇ ಆಗಬೇಕೆಂದು ಮನವಿ ಮಾಡಿದರು.