ETV Bharat / state

ಶಾಲೆ ಆರಂಭ ಆದಾಗಿನಿಂದ ಈವರೆಗೂ ಕೊರೊನಾ ಕೇಸ್​ ಪತ್ತೆಯಾಗಿಲ್ಲ: ಮಂಡ್ಯ ಡಿಡಿಪಿಐ - mandya corona case

ಎಲ್ಲ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಕೋವಿಡ್​​​​ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಈವರೆಗೆ ನಮ್ಮ ಜಿಲ್ಲೆಯಲ್ಲಿ ಆ ರೀತಿಯ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಯಾವುದೇ ಶಾಲೆ ಕೂಡ ಕೊರೊನಾದಿಂದ ಮುಚ್ಚಿಲ್ಲ ಎಂದು ‌ ಡಿಡಿಪಿಐ ರಘುನಂದನ್ ಮಾಹಿತಿ ನೀಡಿದರು.

no corona case found in mandya : ddpi raghunandan
ಶಾಲೆ ಆರಂಭವಾದಾಗಿನಿಂದ ಈವರೆಗೂ ಕೊರೊನಾ ಕೇಸ್​ ಪತ್ತೆಯಾಗಿಲ್ಲ: ಮಂಡ್ಯ ಡಿಡಿಪಿಐ
author img

By

Published : Jan 8, 2021, 12:42 PM IST

ಮಂಡ್ಯ: ಜಿಲ್ಲೆಯಲ್ಲಿ ಶಾಲೆ ಆರಂಭವಾದಾಗಿನಿಂದ ಈವರೆಗೂ ಯಾವುದೇ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿಲ್ಲ ಎಂದು‌ ಡಿಡಿಪಿಐ ರಘುನಂದನ್ ತಿಳಿಸಿದರು.

ಡಿಡಿಪಿಐ ರಘುನಂದನ್

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಕೋವಿಡ್​​​​ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಈವರೆಗೆ ನಮ್ಮ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಯಾವುದೇ ಶಾಲೆ ಕೂಡ ಕೊರೊನಾದಿಂದ ಮುಚ್ಚಿಲ್ಲ ಎಂದು ಮಾಹಿತಿ ನೀಡಿದರು.

ಈ ಸುದ್ದಿಯನ್ನೂ ಓದಿ: 'ಬೊಂಬಾಯಿ ಮಿಠಾಯಿ ವಿಶ್ವನಾಥ್'​ ರಿಗೆ ವ್ಯಕ್ತಿಗತವಾಗಿ ಜರಿಯುವ ಹಕ್ಕಿದೆಯೇ: ಸಾರಾ ಮಹೇಶ್​ ಆಕ್ರೋಶ

ಮೊದಲನೇ ದಿನದಲ್ಲಿ ಹಾಜರಾತಿ ಕಡಿಮೆ ಇದ್ದು, ಬಳಿಕ ಹೆಚ್ಚಳವಾಗಿದೆ. ಎಸ್​​ಎಸ್​​ಎಲ್​ಸಿ ವಿದ್ಯಾರ್ಥಿಗಳ ಹಾಜರಾತಿ ಶೇ. 85ರಷ್ಟು ಏರಿಕೆಯಾಗಿದೆ. ಎಲ್ಲಾ ಶಾಲಾ - ಕಾಲೇಜಿನಲ್ಲಿ ಕೊರೊನಾ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ ಎಂದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ರೋಗ ಲಕ್ಷಣಗಳು ಕಂಡುಬಂದರೆ ಆ್ಯಂಟಿಜನ್​ ಟೆಸ್ಟ್ ವ್ಯವಸ್ಥೆ ಮಾಡಲಾಗಿದೆ. ಹಾಗೂ ವಿದ್ಯಾರ್ಥಿಗಳಿಗೆ ಕೊರೊನಾ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.