ಮಂಡ್ಯ: ನಿಖಿಲ್ ಕುಮಾರಸ್ವಾಮಿ ಇಂದು ನಗರಕ್ಕೆ ಆಗಮಿಸಿ ಜೆಡಿಎಸ್ ಕಾರ್ಯಕರ್ತರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಪುಟ್ಟ ಮಕ್ಕಳು ಹಿಡಿದು ತಂದ ಪುಸ್ತಕಕ್ಕೆ ಹಸ್ತಾಕ್ಷರ ನೀಡಿ, ಮಕ್ಕಳು ಹಾಗೂ ಕಾರ್ಯಕರ್ತರ ಜೊತೆ ಕುಶಲೋಪರಿ ವಿಚಾರಿಸಿ, ಔಪಚಾರಿಕವಾಗಿ ಮದುವೆಗೆ ಆಗಮಿಸುವಂತೆ ಮನವಿ ಮಾಡಿದರು.
ಏಪ್ರಿಲ್ 10 ರ ವರೆಗೂ ಸಿನಿಮಾದಲ್ಲಿ ತೊಡಗಿಕೊಂಡಿರುತ್ತೇನೆ, ಹಿರಿಯರ ಆಶೀರ್ವಾದ ಅವಶ್ಯಕ ಅದು ನನ್ನ ಹಾಗೂ ಕುಟುಂಬದ ಕನಸು, ಹೀಗಾಗಿ ರಾಮನಗರದ ಬಳಿ ಮದುವೆ ನಡೆಸಲಾಗುತ್ತಿದೆ. ನಾನು ಹಾಗೂ ಭಾವಿ ಪತ್ನಿ ಯಾವುದೇ ಶಾಪಿಂಗ್ ಗೆ ಹೋಗಿಲ್ಲ, ಆಗಾಗ ಭೇಟಿಯಾಗಿ ಬಿಡುವಿನ ವೇಳೆ ಮಾತನಾಡುತ್ತೇವೆ ಎಂದರು.
ಇನ್ನು ರಾಜಕೀಯವಾಗಿ ಮಾತನಾಡಿ, ಜಿಲ್ಲೆಯಲ್ಲಿ ದ್ವೇಷದ ರಾಜಕೀಯ ನಡೆಯುತ್ತಿದೆ. ಅದು ಬೇಡ ರಾಜಕಾರಣ ಮಾಡಬೇಕೆ ಹೊರತು ದ್ವೇಷ ರಾಜಕಾರಣ ಬೇಡ ಎಂದು ಮನವಿ ಮಾಡಿದರು. ದೇವೇಗೌಡರು ಕಾರ್ಯಕರ್ತರಿಗೆ ತೊಂದರೆ ಉಂಟಾದರೆ ಹೋರಾಟ ಮಾಡಿಕೊಂಡು ಬಂದಿದ್ದಾರೆ. ನಾವೂ ಹೋರಾಟ ಮಾಡಲು ಸಿದ್ಧ. ನಮ್ಮ ಕಾರ್ಯಕರ್ತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದರು.