ETV Bharat / state

ಮಾನವೀಯತೆ ಮರೆತ ಸಿಬ್ಬಂದಿ: ಆಸ್ಪತ್ರೆ ಬಾಗಿಲಲ್ಲೇ ಮಹಿಳೆಗೆ ಹೆರಿಗೆ, ಮಗು ಸಾವು

ಮಂಡ್ಯದ ಮಿಮ್ಸ್ ಅಸ್ಪತ್ರೆಯ ಬಾಗಿಲಲ್ಲೇ ಮಹಿಳೆಗೆ ಹೆರಿಗೆಯಾದ ಘಟನೆ ನಡೆದಿದ್ದು, ಆಸ್ಪತ್ರೆ ಸಿಬ್ಬಂದಿ ವಿರುದ್ಧ ನಿರ್ಲಕ್ಷ್ಯ ಆರೋಪ ಕೇಳಿ ಬಂದಿದೆ.

author img

By

Published : May 26, 2021, 1:03 PM IST

Updated : May 26, 2021, 1:20 PM IST

Newborn baby died due to negligence of hospital staff
ಆಸ್ಪತ್ರೆ ಬಾಗಿಗಲ್ಲೇ ಮಹಿಳೆಗೆ ಹೆರಿಗೆ

ಮಂಡ್ಯ: ಆಸ್ಪತ್ರೆ ಸಿಬ್ಬಂದಿ ಅಡ್ಮಿಟ್ ಮಾಡಿಕೊಳ್ಳಲು ಹಿಂದೇಟು ಹಾಕಿದ ಹಿನ್ನೆಲೆ ಆಸ್ಪತ್ರೆಯ ಬಾಗಿಲಲ್ಲೇ ಮಹಿಳೆಗೆ ಹೆರಿಗೆಯಾಗಿ ಮಗು ಮೃತಪಟ್ಟ ಮನಕಲಕುವ ಘಟನೆ ಮಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

Newborn baby died due to negligence of hospital staff
ಆಸ್ಪತ್ರೆ ಬಾಗಿಲಲ್ಲೇ ಮೃತಪಟ್ಟಿರುವ ನವಜಾತ ಶಿಶು

ನಿನ್ನೆ ಹೆರಿಗೆಗಾಗಿ ಬಂದಿದ್ದ ಸೋನು ಎಂಬ ಮಹಿಳೆಯನ್ನು ಕೋವಿಡ್ ರಿಪೋರ್ಟ್ ಇಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಗೆ ಸೇರಿಸಿಕೊಳ್ಳಲು ಸಿಬ್ಬಂದಿ ಹಿಂದೇಟು ಹಾಕಿದ್ದರು ಎನ್ನಲಾಗಿದೆ. ಇಂದೂ ಕೂಡ ಗರ್ಭಿಣಿಯನ್ನು ಕರೆದುಕೊಂಡು ಬಂದ ಮನೆಯವರು 2 ಗಂಟೆ ಕಾದರೂ ಆಸ್ಪತ್ರೆ ಸಿಬ್ಬಂದಿ ಮಾತ್ರ ಅಡ್ಮಿಟ್ ಮಾಡಿಕೊಂಡಿಲ್ಲ. ಪರಿಣಾಮ ಆಸ್ಪತ್ರೆ ಬಾಗಿಲಲ್ಲೇ ಹೆರಿಗೆ ನೋವಿನಿಂದ ಒದ್ದಾಡಿದ ಮಹಿಳೆ ಮಗುವಿಗೆ ಜನ್ಮ ನೀಡಿದ್ದರು. ಆದರೆ, ಹೆರಿಗೆಯಾದ ತಕ್ಷಣ ಮಗು ಮೃತಪಟ್ಟಿದೆ.

ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮೃತ ಮಗುವಿನ ತಂದೆ

ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಮಗು ಮೃತಪಟ್ಟಿರುವುದಾಗಿ ಮಹಿಳೆಯ ಪತಿ ಇಸ್ಮಾಯಿಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Last Updated : May 26, 2021, 1:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.