ETV Bharat / technology

ಐಫೋನ್​, ಐಪ್ಯಾಡ್​, ಮ್ಯಾಕ್​ ಬಳಕೆದಾರರಿಗೆ ಎಚ್ಚರಿಕೆ ನೀಡಿದ CERT-In

Apple iPhone: iPhone ಮತ್ತು ಇತರ Apple ಸಾಧನ ಬಳಕೆದಾರರಿಗೆ CERT-In ಎಚ್ಚರಿಕೆ ಸಂದೇಶ ರವಾನಿಸಿದೆ.

IPHONES IPADS AND MAC  APPLE PRODUCTS  APPLE
ಆಪಲ್ (Apple)
author img

By ETV Bharat Tech Team

Published : Nov 25, 2024, 1:13 PM IST

Apple iPhone: ಕೇಂದ್ರ ಸರ್ಕಾರದ ಇಂಡಿಯನ್​ ಕಂಪ್ಯೂಟರ್ ಎಮೆರ್ಜೆನ್ಸ್​ ರೆಸ್ಪಾನ್ಸ್​ ಟೀಂ (CERT-In) ಐಫೋನ್​ ಮತ್ತು ಇತರ ಆಪಲ್​ ಸಾಧನ ಬಳಕೆದಾರರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಹಳೆಯ ಸಾಫ್ಟ್‌ವೇರ್ ಆವೃತ್ತಿಗಳನ್ನು ಬಳಸುತ್ತಿರುವ ಸಾಧನಗಳಿಗೆ ವಿಶೇಷವಾಗಿ ಈ ಎಚ್ಚರಿಕೆಯನ್ನು ನೀಡಲಾಗಿದೆ. ವರದಿಯ ಪ್ರಕಾರ, ಈ ಸಾಧನಗಳಲ್ಲಿ ಗಂಭೀರವಾದ ಭದ್ರತಾ ದೋಷಗಳು ಕಂಡುಬಂದಿವೆ. ಇದು ಸೈಬರ್ ಬೆದರಿಕೆಗಳನ್ನು ಉತ್ತೇಜಿಸುತ್ತದೆ.

ಯಾವ ಸಾಧನಗಳಿಗೆ ಎಚ್ಚರಿಕೆ?: ಆಪಲ್​ ಸಾಫ್ಟ್‌ವೇರ್‌ನ ಹಳೆಯ ಆವೃತ್ತಿಯನ್ನು ಆಧರಿಸಿದ ಸಾಧನಗಳಿಗೆ ಈ ಎಚ್ಚರಿಕೆಯನ್ನು ನೀಡಲಾಗಿದೆ. ಅಂದ್ರೆ ಐಫೋನ್​, ಐಪ್ಯಾಡ್​, ಮ್ಯಾಕ್​ ಮತ್ತು ಸಫಾರಿನಂತಹ ಉತ್ಪನ್ನಗಳನ್ನು ಸಹ ಈ ಪಟ್ಟಿಯಲ್ಲಿ ಸೇರಿಸಲಾಗಿದೆ.

iOS: ಆವೃತ್ತಿ 18.1.1 ಗಿಂತ ಹಳೆಯ ಆವೃತ್ತಿಗಳು

iPadOS: ಆವೃತ್ತಿ 17.7.2 ಗಿಂತ ಹಳೆಯ ಆವೃತ್ತಿಗಳು

macOS: ಆವೃತ್ತಿ 15.1.1 ಗಿಂತ ಹಳೆಯ ಆವೃತ್ತಿಗಳು

Safari: ಆವೃತ್ತಿ 18.1.1 ಗಿಂತ ಹಳೆಯ ಆವೃತ್ತಿಗಳು

ನಿಮ್ಮ ಸಾಧನವು ಈ ಯಾವುದೇ ಆವೃತ್ತಿಗಳಲ್ಲಿ ರನ್ ಆಗುತ್ತಿದ್ದರೆ ಅದು ಸೈಬರ್ ಬೆದರಿಕೆಗಳಿಗೆ ಗುರಿಯಾಗಬಹುದಾಗಿದೆ.

ಶೀಘ್ರದಲ್ಲೇ ಅಪ್​ಡೇಟ್​ ಮಾಡಿ: ಹಳೆಯ ಸಾಫ್ಟ್‌ವೇರ್‌ನಲ್ಲಿ ಕೆಲವೊಂದು ನ್ಯೂನತೆಗಳು ಕಂಡುಬಂದಿವೆ. ಸೈಬರ್ ಅಪರಾಧಿಗಳು ಅದರ ಲಾಭವನ್ನು ಪಡೆಯಬಹುದು. ಬಳಕೆದಾರರು ತಕ್ಷಣವೇ ತಮ್ಮ ಸಾಧನಗಳನ್ನು ಇತ್ತೀಚಿನ ಆವೃತ್ತಿಗೆ ಅಪ್​ಡೇಟ್​ ಮಾಡಲು CERT-In ಸಲಹೆ ನೀಡಿದೆ. ನಿಮ್ಮ ಸಾಧನಕ್ಕೆ ಸಾಫ್ಟ್‌ವೇರ್ ಅಪ್​ಡೇಟ್​ ಇನ್ನು ಮುಂದೆ ಲಭ್ಯವಿಲ್ಲದಿದ್ದರೆ ನೀವು ಹೊಸ ಸಾಧನವನ್ನು ಖರೀದಿಸುವುದು ಸೂಕ್ತ.

ಅಪ್​ಡೇಟ್​ ಮಾಡುವುದು ಹೇಗೆ?: ನೀವು ನಿಮ್ಮ ಐಫೋನ್ ಅನ್ನು ಅಪ್​ಡೇಟ್ ಮಾಡಲು ಬಯಸಿದರೆ ಈ ಹಂತಗಳನ್ನು ಅನುಸರಿಸಿ.

Settings: ನಿಮ್ಮ ಐಫೋನ್​ನ ಸೆಟ್ಟಿಂಗ್‌ಗಳ ಅಪ್ಲಿಕೇಶನ್ ಆಯ್ಕೆ ಮಾಡಿ.

General: ಇಲ್ಲಿಂದ General ಆಯ್ಕೆ ಕ್ಲಿಕ್ ಮಾಡಿ.

Software Update: ಈಗ ಸಾಫ್ಟ್‌ವೇರ್ ಅಪ್‌ಡೇಟ್ ಆಯ್ಕೆ ಆಯ್ದುಕೊಳ್ಳಿ.

Download and Install​: ಅಪ್​ಡೇಟ್​ ಲಭ್ಯವಿದ್ದರೆ ಅದನ್ನು ಡೌನ್‌ಲೋಡ್ ಮಾಡಿ ಮತ್ತು ಇನ್​ಸ್ಟಾಲ್​ ಮಾಡಿ. ಈ ರೀತಿಯಲ್ಲಿ ನಿಮ್ಮ ಫೋನ್ ಅಪ್​ಡೇಟ್​ ಆಗುತ್ತದೆ.

ಇದನ್ನೂ ಓದಿ: ಶೀಘ್ರವೇ ಪೊಕೊ ಸೀರಿಸ್​ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.