ETV Bharat / state

ದೇವೇಗೌಡರ ಕುಟುಂಬದ ವಿರುದ್ಧ ಗುಡುಗಿದ ನಾರಾಯಣಗೌಡ - Narayana Gowda

ರೇವಣ್ಣ ಸತ್ಯ ಹರಿಶ್ಚಂದ್ರನಾ..? ಸರ್ಕಾರ ಉರುಳಲು ಅವರೇ ಕಾರಣ. ಜೆಡಿಎಸ್​ನ 20 ಜನ ಶಾಸಕರು ರಾಜೀನಾಮೆ ಕೊಡಲಿದ್ದಾರೆ ಎಂದು ಜೆಡಿಎಸ್ ಅನರ್ಹ ಶಾಸಕ ನಾರಾಯಣಗೌಡ ಭವಿಷ್ಯ ನುಡಿದರು.

ದೇವೇಗೌಡರ ಕುಟುಂಬದ ವಿರುದ್ಧ ಗುಡುಗಿದ ನಾರಾಯಣಗೌಡ
author img

By

Published : Sep 14, 2019, 7:35 PM IST

ಮಂಡ್ಯ: ಜೆಡಿಎಸ್ ಪಕ್ಷ ದೇವೇಗೌಡರ ಕುಟುಂಬದಿಂದಲೇ ನಾಶವಾಗಲಿದೆ. ಆ ಪಕ್ಷದ ಮತ್ತಷ್ಟು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಅನರ್ಹ ಶಾಸಕ ನಾರಾಯಣಗೌಡ ಗುಡುಗಿದ್ದಾರೆ.

ದೇವೇಗೌಡರ ಕುಟುಂಬದ ವಿರುದ್ಧ ಗುಡುಗಿದ ಅನರ್ಹ ಶಾಸಕ ನಾರಾಯಣಗೌಡ

ಕೆ.ಆರ್.ಪೇಟೆಯ ತಮ್ಮ ನಿವಾಸದಲ್ಲಿ ಈ ಕುರಿತು ಮಾತನಾಡಿದ ಅವರು, ನನಗೆ ಜೆಡಿಎಸ್ ನಾಯಕರ ಮಾತುಗಳು ನೋವು ತರಿಸಿದೆ. ಚುನಾವಣೆಗೆ ಸ್ಪರ್ಧಿಸಲು ಬಿ ಫಾರಂ ಕೊಡುವಾಗ ನನಗೆ ಕೊಟ್ಟ ನೋವು ಅಷ್ಟಿಷ್ಟಲ್ಲ. ದೇವೇಗೌಡರ ಮನೆಯವರು, ಮನೆಯ ಹೆಣ್ಣು ಮಕ್ಕಳು ಕೊಟ್ಟ ಹಿಂಸೆಯನ್ನುಇಡೀ ಕರ್ನಾಟಕ ನೋಡಿದೆ ಎಂದು ಅಸಮಾಧಾನ ತೋಡಿಕೊಂಡರು.

'ಕುಟುಂಬ ಪ್ರೇಮದಿಂದ ಹೊರಬನ್ನಿ,ದೇಶ ಪ್ರೇಮಿಯಾಗಿ'

ದೇವೇಗೌಡರು ಕುಟುಂಬಪ್ರಿಯರು. ಅವರಿಗೆ ಮಕ್ಕಳನ್ನು ನಿಯಂತ್ರಣದಲ್ಲಿಡಲು ಆಗುತ್ತಿಲ್ಲ. ನೀವು ದೇಶ ಪ್ರೇಮಿ ಆಗಬೇಕು, ಕುಟುಂಬ ಪ್ರೇಮದಿಂದ ಹೊರ ಬನ್ನಿ ಎಂದು ದೇವೇಗೌಡರ ವಿರುದ್ಧ ಗುಡುಗಿದ್ರು.

'ರೇವಣ್ಣ ಬಗ್ಗೆ ನಾನು ಬಾಯಿ ಬಿಡಲೇ?'

ಇದೇ ವೇಳೆ ಮಾಜಿ ಸಚಿವ ರೇವಣ್ಣರ ವಿರುದ್ಧವೂ ಅವರು ಆಕ್ರೋಶ ವ್ಯಕ್ತಪಡಿಸಿದ್ರು. ರೇವಣ್ಣಗೆ ನಾಚಿಕೆ ಆಗಬೇಕು. ಹಾಸನದಲ್ಲಿ ನಿಮ್ಮ ಹೋಟೆಲ್‌ಗಾಗಿ ದುಡಿದಿದ್ದೇನೆ. ಹೊಟ್ಟೆ ಬಟ್ಟೆಗಾಗಿ ದೇಶಾಂತರ ಹೋದವನು ನಾನು. ನೀವು ಕರೆದುಕೊಂಡು ಬಂದಿರಿ ಎಂದು ವಾಗ್ದಾಳಿ ಮಾಡಿದರು.

ರೇವಣ್ಣ ಎಂಥ ವ್ಯಕ್ತಿ ಅನ್ನೋದು ಎಲ್ಲರಿಗೂ ಗೊತ್ತು. ನಾನು ಬಾಯಿ ಬಿಡಬೇಕೇ? ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಇಡೀ ಕುಟುಂಬವನ್ನು ದೇವರು ಅಂತ ಪರಿಗಣಿಸ್ತಿದ್ದೆ. ಹಣ ಮಾಡಲು ನಾನು ರಾಜಕಾರಣಕ್ಕೆ ಬಂದಿಲ್ಲ. ತಾಯಿ, ತಂದೆ, ಜನರ ಸೇವೆ ಮಾಡಲು ಬಂದಿದ್ದೇನೆ. ನನ್ ತಾಲೂಕಿಗೆ ಎಷ್ಟು ಕೋಟಿ ಕೊಟ್ಟಿದ್ದೀರಿ? ಯಾಕೆ ಸುಳ್ಳು ಹೇಳುತ್ತೀರಿ. ಕೆಲವೊಂದು ಕಾಮಗಾರಿಯನ್ನು ರೇವಣ್ಣ ಕಿತ್ತುಕೊಂಡರು ಎಂದು ಕಿಡಿಕಾರಿದ್ರು.

'ಕುಮಾರಣ್ಣನ ಸುಳ್ಳು, ನಿಖಿಲ್ ಸೋಲು'

ಕುಮಾರಣ್ಣ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದರಿಂದ ನಮಗೆ ಈ ಗತಿ ಬಂದಿದೆ. ಮಂಡ್ಯದಲ್ಲಿ ನಡೆಸಿದ ಗುದ್ದಲಿ ಪೂಜೆ ಸುಳ್ಳಿನ ಕಂತೆ. ನಮ್ಮನ್ನು ಚೇಂಬರ್‌ನಲ್ಲಿ ಕೂಡಿಸುತ್ತಿರಲಿಲ್ಲ. ಅವರ ಸುಳ್ಳಿನ ಸರಮಾಲೆಯಿಂದಲೇ ನಿಖಿಲ್ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡರು ಎಂದರು.

ಡಿಕೆಶಿ ಬಂಧನಕ್ಕೆ ಯಾರು ಕಾರಣ?

ಡಿಕೆಶಿ ಬಂಧನಕ್ಕೆ ಯಾರು ಕಾರಣ? ಎಂಬುದು ಶೀಘ್ರವೇ ಬಯಲಾಗಲಿದೆ. ಕಬ್ಬಿಣವನ್ನು ಕಬ್ಬಿಣವೇ ಕಟ್ ಮಾಡಿದೆ. ಕಳೆದ 5 ಈ ಕೆಲಸಕ್ಕೆ ವರ್ಷದಿಂದ ಒಳಗೊಳಗೆ ಸಂಚು ನಡೆಯುತ್ತಿತ್ತು. ಈ ಸಮುದಾಯದಲ್ಲಿ ಯಾರೂ ಬೆಳೆಯಬಾರದು ಅಂತ ಸಂಚು ಹೆಣೆಯಲಾಗಿತ್ತುಎಂದವರು ಹೊಸ ಬಾಂಬ್ ಸಿಡಿಸಿದರು.

Intro:ಮಂಡ್ಯ: ಜೆಡಿಎಸ್ ದೇವೇಗೌಡರ ಕುಟುಂಬದಿಂದಲೇ ನಾಶವಾಗಲಿದೆ. ಡಿಕೆಶಿ ಸಂಕಷ್ಟಕ್ಕೆ ಅವರ ಜೊತೆಯಲ್ಲಿ ಇರುವವರೇ ಕಾರಣ. ಶೀಘ್ರವೇ ಸತ್ಯ ಬರಲಿದೆ. ಜೆಡಿಎಸ್‌ನ ಮತ್ತಷ್ಟು ಶಾಸಕರು ಪಕ್ಷದಿಂದ ಹೊರ ಬರಲಿದ್ದಾರೆ. ಕುಟುಂಬದ ಮೇಲೆ ದೇವೇಗೌಡರ ಹಿಡಿತ ಕೈ ತಪ್ಪಿದ್ದು, ಸಮ್ಮಿಶ್ರ ಸರ್ಕಾರ ಬೀಳಲು ರೇವಣ್ಣನೇ ಕಾರಣ ಅಂತ ಜೆಡಿಎಸ್ ಅನರ್ಹ ಶಾಸಕ ನಾರಾಯಣಗೌಡ ಜೆಡಿಎಸ್ ವರಿಷ್ಠರ ಕುಟುಂಬದ ವಿರುದ್ಧ ಗುಡುಗಿದರು.
ಕೆ.ಆರ್.ಪೇಟೆಯ ತಮ್ಮ ನಿವಾಸದಲ್ಲಿ ಏನೆಲ್ಲಾ ಹೇಳಿದರು ಅನ್ನೋದು ಇಲ್ಲಿದೆ ನೋಡಿ.
ಜೆಡಿಎಸ್ ನಾಯಕರ ಮಾತು ನೋವು ತಂದಿದೆ. ಬಿ ಫಾರಂ ಕೊಡುವಾಗ ಕೊಟ್ಟ ನೋವು ಅಷ್ಟಿಷ್ಟಲ್ಲ‌. ದೇವೇಗೌಡರ ಮನೆಯರು, ಮನೆಯ ಹೆಣ್ಣು ಮಕ್ಕಳು ಕೊಟ್ಟ ನೋವನ್ನು ಇಡೀ ಕರ್ನಾಟಕ ನೋಡಿದೆ ಎಂದರು.
ದೇವೇಗೌಡರು ತಮ್ಮ ಕುಟುಂಬದ ಪ್ರಿಯರು. ಅಣ್ಣ ತಮ್ಮಂದಿರು ಪ್ರಿಯರು. ರೇವಣ್ಣಗೆ ನಾಚಿಕೆ ಆಗಬೇಕು. ಹಾಸನದಲ್ಲಿ ನಿಮ್ಮ ಹೋಟೆಲ್‌ಗಾಗಿ ದುಡಿದಿದ್ದೇನೆ. ಹೊಟ್ಟೆ ಬಟ್ಟೆಗಾಗಿ ದೇಶಾಂತರ ಹೋದವನು ನಾನು. ನೀವು ಕರೆದುಕೊಂಡು ಬಂದಿರಿ. ಕೃಷ್ಣರನ್ನು ಜೆಡಿಎಸ್ ಬಿಡಿಸಲು ನನ್ನನ್ನು ಕರೆ ತಂದವರು ನೀವು. ನಿಮ್ಮ ಮೇಲೆ ನಮಗೆ ಈಗಲೂ ಗೌರವವಿದೆ ಎಂದು ನಯವಾಗಿಯೇ ವಾಗ್ದಾಳಿ ಮಾಡಿದರು.
ದೇವೇಗೌಡರು ಪ್ರಧಾನಿ ಆದಾಗ ಲ ಬಾಂಬೆಯಲ್ಲಿ ಸಾವಿರಾರೂ ಕಟೌಟ್ ಹಾಕಿಸಿದೆ. ಪಾದ ಪೂಜೆ ಮಾಡಿದೆ. ನಿಮ್ಮ ವಚನ ಏನು. ಮೋಸ ಮಾಡಿದೆ ಎಂದು ಹೇಳಿಕೊಂಡು ತಿರುಗಾಡ್ತಾ ಇದೀರಾ. ರೇವಣ್ಣ ಬಗ್ಗೆ ಎಲ್ಲರಿಗೂ ಗೊತ್ತು. ನಾನು ಬಾಯಿ ಬಿಡಬೇಕಾ. ಇದ್ನ ಅವರು ಅರ್ಥ ಮಾಡಿಕೊಳ್ಳಬೇಕು. ಇಡೀ ಕುಟುಂಬವನ್ನು ದೇವರು ಅಂತ ರಿಸೀವ್ ಮಾಡ್ತಾ ಇದ್ದೆ. ಹಣ ಮಾಡಲು ರಾಜಕಾರಣಕ್ಕೆ ಬಂದವನಲ್ಲ. ತಾಯಿ, ತಂದೆ, ಜನರ ಸೇವೆ ಮಾಡಲು ಬಂದವನು. ಕಳೆದ ಬಾರಿ ಚುನಾವಣೆ ಬೇಡ ಎಂದು ನಿರ್ಧಾರ ಮಾಡಿದ್ದೆ. ದೇವೇಗೌಡ ರು ಮಕ್ಕಳನ್ನು ಕಂಟ್ರೋಲ್ ಮಾಡಲು ಆಗಲ್ವಾ. ಎಲ್ಲಾ ಕಡೆ ನಾಚಿಕೆ ಆಗುತ್ತೆ. ಒಕ್ಕಲಿಗರ ಜಾತಿಯಲ್ಲಿ ಹುಟ್ಟಬಾರದು ಎಂದು ಹೇಳುತ್ತೀರಿ. ನಾಚಿಕೆ ಆಗಲ್ವಾ. ಯಾರು ನಿಮ್ಮನ್ನು ಬೆಳೆಸಿದ್ದು. ದೇಶ ಪ್ರೇಮಿ ಆಗಿ, ಕುಟುಂಬ ಪ್ರೇಮದಿಂದ ಹೊರ ಬನ್ನಿ ಎಂದು ದೇವೇಗೌಡರಿಗೆ ಸಲಹೆ ನೀಡಿದರು.
ನೀರಾವರಿ ಇಲಾಖೆ ನಿಮ್ ಕಟ್ರೋಲ್‌ನಲ್ಲಿ ಇತ್ತಾ ರೇವಣ್ಣನವರೇ, ನೀವು ಇದ್ದದ್ದು ಲೋಕೋಪಯೋಗಿ ಯಲ್ಲಿ. ಸಿದ್ದರಾಮಯ್ಯ ನಮಗೆ ಹಣ ಕೊಟ್ಟಿದ್ದು. ನಾನು ಡಿಕೆ ಶಿ ಕಾಲ್ ಹಿಡಿದಿರುವೆ. ನೀವು ಹಸ್ತಾಕ್ಷೇಪ ಮಾಡಿದಾಗ ಡಿಕೆಶಿ ಸಚಿವರಾಗಿ ಅಧಿಕಾರ ವಹಿಸಿಕೊಳ್ಳದೆ ಮುನಿಸಿಕೊಂಡಿದ್ದರು. ಆಗ ನಾವು ಮರ್ಯಾದೆ ಉಳಿಸಿದೆವು ಎಂದರು.

ನನ್ ತಾಲೂಕಿಗೆ ಎಷ್ಟು ಕೋಟಿ ಕೊಟ್ಟಿದ್ದೀರಿ. ಯಾಕ್ ಸುಳ್ಳು ಹೇಳುತ್ತೀರಿ. ಕೆಲವೊಂದು ಕಾಮಗಾರಿಯನ್ನು ರೇವಣ್ಣ ಕಿತ್ತುಕೊಂಡರು ಎಂದರು.
ಡಿಕೆಶಿ ಒಳ ಹೋಗಲು ಯಾರು ಕಾರಣ ಎಂಬುದು ಶೀಘ್ರವೇ ಹೊರ ಬರಲಿದೆ. ಕಬ್ಬಿಣವನ್ನು ಕಬ್ಬಿಣವೇ ಕಟ್ ಮಾಡಿರುವುದು. ಕಳೆದ 5 ವರ್ಷದಿಂದ ಸಂಚು ನಡೆಯುತ್ತಿತ್ತು. ಈ ಸಮುದಾಯದಲ್ಲಿ ಯಾರೂ ಬೆಳೆಯಬಾರದು ಅಂತ ಸಂಚು ಇತ್ತು ಹೊಸ ಬಾಂಬ್ ಸಿಡಿಸಿದರು.
ರಾಜ್ಯದ ಕಾಂಟ್ರಕ್ಟರ್‌ಗೆ ಗೊತ್ತು ರೇವಣ್ಣ ಹೇಗೆ ಎಂದು. ನಿಮ್ಮ ಮನೆ ಅನ್ನ ತಿಂದಿರುವೆ. ಸುಳ್ಳು ಹೇಳಿದರೆ ನಿಮ್ಮನ್ನ ಭಗವಂತ ತುಳಿದು ಬಿಡ್ತಾನೆ. ಎಚ್ಚರಿಕೆಯಿಂದ ಇರಿ. ಹೆಣ್ಣುಮಕ್ಕಳ ಕರೆಯಿಂದ ದೇವೇಗೌಡ ರು ಕೆ.ಆರ್.ಪೇಟೆ ಕಾರ್ಯಕ್ರಮ ರದ್ದು ಮಾಡಿದರು. ಈ ವಯಸ್ಸಿನಲ್ಲಿ ಈ ಬುದ್ದಿ ಬರಬಾರದು. ದೇಶ, ರಾಜ್ಯ ಹಾಳ್ ಮಾಡಬೇಡಿ. ಪ್ರಧಾನಿ ಆದಾಗ ಖುಷಿ ಇತ್ತು. ಬಾಂಬೆಯಲ್ಲಿ ಪಾರ್ಟಿ ಮಾಡಿದೆವು. ಅದನ್ನು ಉಳಿಸಿಕೊಳ್ಳಿ. ಮೊಮ್ಮಕಳನ್ನು ರಾಜಕಾರಣಿ ಮಾಡುವ ಆಸೆ ಬಂತು. ದಯವಿಟ್ಟು ಶಾಂತವಾಗಿ ಕೂರಿ. ದೇವರ ಸ್ಥಾನ ಅಲಂಕರಿಸಿ. ಮಕ್ಕಳನ್ನು ಹತೋಟಿಗೆ ಇಡಿ. ಇಲ್ಲವೆಂದರೆ ಇಡೀ ರಾಜ್ಯಕ್ಕೆ ಹೇಳಿಬಿಡಿ. ಮಕ್ಕಳು ಹತೋಟಿಯಲ್ಲಿ ಇಲ್ಲ ಎಂದು ಎಂದರು.
ನೀವು ಹಣ ಕೊಡಲಿಲ್ಲ, ಯಡಿಯೂರಪ್ಪ ನವರಾದರೂ ಕೊಡ್ತಾರೆ.. ರೇವಣ್ಣ ಹೇಳ್ತಾರೆ 202 ಕೋಟಿ ಕೊಟ್ಟೆ ಅಂತ. ಕೊಟ್ಟಿರೋದು 2 ಕೋಟಿ ಮಾತ್ರ ಎಂದರು.
ದೇವೇಗೌಡ ರಿಗೆ ಹುಷಾರ್ ಇಲ್ಲ ಅಂದರೆ ನಾನೇ ನೋಡಲು ಬರ್ತಿನಿ. ನಿಮ್ಮ ಬಗ್ಗೆ ಗೌರವ ಇದೆ. ರೇವಣ್ಣರ ಮಾತು ಕೇಳಿ ದುಡುಕಿ ಇರುವ ಗೌರವ ಕಳೆದುಕೊಳ್ಳಬೇಡಿ. ದೇವೇಗೌಡ ರು ಬೇರೆ ಯಾರನ್ನಾದರೂ ಸಿಎಂ ಮಾಡಬಹುದಿತ್ತು. ಮಕ್ಕಳನ್ನೇ ಮಾಡಬೇಕಿತ್ತಾ ಎಂದು ಪ್ರಶ್ನಿಸಿದರು.
ರೇವಣ್ಣ ಸತ್ಯ ಹರಿಶ್ಚಂದ್ರನಾ. ಸರ್ಕಾರ ಉರುಳಲು ರೇವಣ್ಣ ಕಾರಣ. ಜೆಡಿಎಸ್ ನ 20 ಜನ ರಾಜೀನಾಮೆ ಕೊಡ್ತಾರೆ ಎಂದು ನಾರಾಯಣಗೌಡ ಭವಿಷ್ಯ ನುಡಿದರು.
ಕುಮಾರಣ್ಣ ಸುಳ್ಳು ಹೇಳಿಕೊಂಡು ತಿರುಗಿದ್ದರಿಂದಲೇ ನಮಗೆ ಈ ಗತಿ ಬಂದಿದ್ದು. ಮಂಡ್ಯದಲ್ಲಿ ನಡೆಸಿದ ಗುದ್ದಲಿ ಪೂಜೆ ಸುಳ್ಳಿನದ್ದು. ನಮ್ಮನ್ನು ಚೇಂಬರ್‌ಗೆ ಕೂಡಿಸುತ್ತಿರಲಿಲ್ಲ. ಅವರ ಸುಳ್ಳಿನಿಂದಲೇ ನಿಖಿಲ್ ಸೋಲು ಎಂದರು.Body:ಯತೀಶ್ ಬಾಬುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.