ETV Bharat / state

ಕೆಆರ್​ಎಸ್​ಗೆ ಕಾದಿದೆ ಆಪತ್ತು.. ಮೈಸೂರು ಎಂಜಿನಿಯರ್‌ಗಳ ವರದಿ ಏನ್​ ಹೇಳುತ್ತೆ!? - KRS dam

ಪ್ರಸ್ತುತ ಕೆಆರ್​ಎಸ್ ಅಣೆಕಟ್ಟೆ ತುಂಬಿದೆ. ಹೀಗಾಗಿ ಜಿಲ್ಲಾಡಳಿತ ತಾತ್ಕಾಲಿಕವಾಗಿ ಕಲ್ಲುಗಣಿಗಾರಿಕೆ ಹಾಗೂ ಸ್ಫೋಟಕ ಬಳಕೆಗೆ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಆದರೆ, ಮುಂದಿನ ದಿನಗಳಲ್ಲಿ ಅಣೆಕಟ್ಟೆಯ ಭದ್ರತೆಯ ದೃಷ್ಟಿ ಏನು ಎಂಬ ಚಿಂತೆ ಎದುರಾಗಿದೆ.

ಕೆಆರ್​ಎಸ್​ಗೆ ಕಾದಿದೆ ಆಪತ್ತು
author img

By

Published : Sep 6, 2019, 4:54 PM IST

ಮಂಡ್ಯ: ಕೆಆರ್​ಎಸ್​ನಲ್ಲಿ ಆಗುತ್ತಿರುವ ಶಬ್ಧದ ಬಗ್ಗೆ ಭೂಮಾಪನ ಕೇಂದ್ರ ಅಧ್ಯಯನ ಪ್ರಾರ್ಥಮಿಕ ವರದಿ ನೀಡಿದೆ. ಇದು ಜಿಲ್ಲೆಯ ರೈತರಲ್ಲಿ ಭಯ ಹುಟ್ಟಿಸಿದೆ. ಈ ವರದಿಗೆ ಮೈಸೂರು ಎಂಜಿನಿಯರ್ಸ್ ತಂಡ ಅನುಮೋದನೆ ನೀಡಿದೆ.

ವರದಿ ಬಗ್ಗೆ ಎಚ್ಚೆತ್ತುಕೊಳ್ಳದೆ ಇದ್ದರೆ ಮುಂದೊಂದು ದಿನ ಕೆಆರ್​ಎಸ್ ಅಣೆಕಟ್ಟೆ ಅಪಾಯಕ್ಕೆ ಸಿಲುಕುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದೆ. 80 ವರ್ಷಗಳ ಹಳೆಯದಾದ ಚಿರುಕಿ ಗಾರೆಯಿಂದಷ್ಟೇ ನಿರ್ಮಾಣವಾಗಿರುವ ಈ ಅಣೆಕಟ್ಟೆ ಬಗ್ಗೆ ಅಂಪೂರ್ಣ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಬೇಕಾದ ಅನಿವಾರ್ಯತೆ ಈಗ ರಾಜ್ಯ ಸರ್ಕಾರದ ಮೇಲಿದೆ.

2018ರ ಸೆಪ್ಟಂಬರ್ 25ರಂದು ರಾಜ್ಯ ಭೂಕಂಪ ಮಾಪನ ಸಂಸ್ಥೆ ವರದಿ ನೀಡಿತ್ತು. ವರದಿಯ ಪ್ರಕಾರ ಅಣೆಕಟ್ಟೆಯ ಸುತ್ತ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧ ಮಾಡಿದರೆ ಉತ್ತಮ, ಇಲ್ಲವಾದರೆ ಅಣೆಕಟ್ಟೆಗೆ ಅಪಾಯ ಎಂಬುದು ಆ ವರದಿಯ ಸಾರಾಂಶ. ಈ ಸಾರಾಂಶವನ್ನೇ ಮುಂದಿಟ್ಟುಕೊಂಡು ಮೈಸೂರು ಎಂಜಿನಿಯರ್ಸ್ ತಂಡ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.

ಕೆಆರ್​ಎಸ್​ಗೆ ಕಾದಿದೆ ಆಪತ್ತು..

ಪ್ರಸ್ತುತ ಕೆಆರ್​ಎಸ್ ಅಣೆಕಟ್ಟೆ ತುಂಬಿದೆ. ಹೀಗಾಗಿ ಜಿಲ್ಲಾಡಳಿತ ತಾತ್ಕಾಲಿಕವಾಗಿ ಕಲ್ಲುಗಣಿಗಾರಿಕೆ ಹಾಗೂ ಸ್ಫೋಟಕ ಬಳಕೆಗೆ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಆದರೆ, ಮುಂದಿನ ದಿನಗಳಲ್ಲಿ ಅಣೆಕಟ್ಟೆಯ ಭದ್ರತೆಯ ಬಗ್ಗೆ ಚಿಂತೆ ಎದುರಾಗಿದೆ. ಬೇಬಿಬೆಟ್ಟ, ಚಿನಕುರುಳಿ ಹಾಗೂ ರಾಗಿಮುದ್ದನಹಳ್ಳಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಹಾಗೂ ರಿಗ್ ಬೋರ್ ಬ್ಲಾಸ್ಟ್‌ನಿಂದ ಪ್ರಮುಖವಾಗಿ ಅಣೆಕಟ್ಟೆಗೆ ಅಪಾಯದೆ. ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಅಣೆಕಟ್ಟೆಯ ಭದ್ರತೆ ಕುರಿತು ತನಿಖಾ ವರದಿ ಮಾಡಿಸುವ ಬಗ್ಗೆ ಹೇಳಲಾಗಿತ್ತು. ಆದರೆ, ಇನ್ನೂ ತನಿಖಾ ತಂಡವೇ ಅಣೆಕಟ್ಟೆಗೆ ಭೇಟಿ ನೀಡಿಲ್ಲ.

ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಬ್ರೇಕ್ :
ಕಳೆದ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕೆಆರ್​ಎಸ್ ಬಳಿ ಸಿಡ್ನಿಲ್ಯಾಂಡ್ ನಿರ್ಮಾಣಕ್ಕೆ ಯೋಜನೆ ರೂಪಿಸಿತ್ತು. ಇದಕ್ಕೆ ಪ್ರತಿರೋಧವೂ ಎದುರಾಗಿತ್ತು. ಜೊತೆಗೆ ಕಾವೇರಿ ಮಾತೆಯ ಬೃಹತ್ ಪುತ್ಥಳಿ ನಿರ್ಮಾಣದಿಂದ ಅಣೆಕಟ್ಟೆಗೆ ಅಪಾಯ ಎಂಬ ವಾದವೂ ಬಂದಿತ್ತು. ವಾದದ ಹಿನ್ನೆಲೆಯಲ್ಲಿ ವಾಸ್ತವ ಚಿತ್ರಣಕ್ಕಾಗಿ ತಂಡ ರಚನೆಗೆ ಸರ್ಕಾರ ಮುಂದಾಗಿತ್ತು. ಆದರೆ, ಈವರೆಗೂ ತಂಡದ ವರದಿಯೇ ಸಿದ್ಧವಾಗಿಲ್ಲ. ಇನ್ನು ಸರ್ಕಾರದ ಬದಲಾವಣೆ ಹಾಗೂ ಭೂಕಂಪನ ಕೇಂದ್ರದ ವರದಿ, ಮೈಸೂರು ಎಂಜಿನಿಯರ್​ಗಳ ವರದಿ, ಸಿಡ್ನಿಲ್ಯಾಂಡ್ ಮಾದರಿ ಜೊತೆಗೆ ಕಾವೇರಿ ಮಾತೆಯ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಬ್ರೇಕ್ ಹಾಕುವ ಸಾಧ್ಯತೆ ಇದೆ.

Intro:ಮಂಡ್ಯ: ಇತ್ತೀಚೆಗೆ ಕೆ.ಆರ್.ಎಸ್ ಗೆ ಅಪಾಯ ಕಾದಿದೆ ಎಂಬ ಮಾತುಗಳು ಕೇಳೀ ಬಂದಿವೆ.  ಹಾಗಾದರೆ ನಿಜವಾಗಲೂ ಅಣೆಕಟ್ಟೆಗೆ ಅಪಾಯ ಇದೆಯಾ. ಸಮೀಪದ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲುಗಣಿಯ ಸ್ಫೋಟದಿಂದ ಕಂಕಟ ಎದುರಾಗಿದೆಯಾ. ಹಾಗಾದರೆ ಅಣೆಕಟ್ಟೆಯ ಆಯಸ್ಸು ಎಷ್ಟು. ಯಾತಕ್ಕಾಗಿ ಗಣಿಗಾರಿಕೆಯನ್ನು ನಿಷೇಧ ಮಾಡಬೇಕು. ಈ ವರದಿ ಎಚ್.ಡಿ.ಕೆಯ ಕನಸಿನ ಕೂಸು ಡಿಸ್ನಿಲ್ಯಾಂಡ್ ಮಾದರಿಯ ಮನರಂಜನಾ ಪಾರ್ಕ್ ನಿರ್ಮಾಣಕ್ಕೂ ಹಿನ್ನೆಡೆ ತರಲಿದೆಯಾ, ಕಾವೇರಿ ಪ್ರತಿಮೆ ನಿರ್ಮಾಣ ಸಾಧ್ಯವಾ ಎಂಬುದರ ಸಂಪೂರ್ಣ ವರದಿ ಇಲ್ಲಿದೆ ನೋಡಿ.

ಕೆ.ಆರ್.ಎಸ್ ಗಢಗಢ. ಭೂಮಾಪನ ಕೇಂದ್ರ ಅಧ್ಯಯನ ವರದಿ ಜಿಲ್ಲೆಯ ರೈತರಲ್ಲೂ ಭಯ ಹುಟ್ಟಿಸಿದೆ. ಈ ವರದಿಯನ್ನೇ ಮೈಸೂರು ಎಂಜಿನಿಯರ್ಸ್ ತಂಡವೂ ಅನುಮೋದನೆ ನೀಡಿದೆ. ವರದಿ ಬಗ್ಗೆ ಎಚ್ಚೆತ್ತುಕೊಳ್ಳದೇ ಇದ್ದರೆ ಮುಂದೊಂದು ದಿನ ಕೆ.ಆರ್.ಎಸ್ ಅಣೆಕಟ್ಟೆ ಅಪಾಯಕ್ಕೆ ಸಿಲೋಕದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದೆ. 80 ವರ್ಷಗಳ ಹಳೆಯದಾದ, ಚಿರುಕಿ ಗಾರೆಯಿಂದಷ್ಟೇ ನಿರ್ಮಾಣವಾಗಿರುವ ಅಣೆಕಟ್ಟೆ ಬಗ್ಗೆ ಅಧ್ಯಯನವನ್ನೂ ನಡೆಸಿ ಸಮಗ್ರ ವರದಿ ಸಿದ್ಧಪಡಿಸಬೇಕಾದ  ಅನಿವಾರ್ಯತೆಯೂ ಈಗ ರಾಜ್ಯ ಸರ್ಕಾರದ ಮೇಲೆ ಬಿದ್ದಿದೆ.

ಹೌದು, ಇದು ಮೈಸೂರು ಎಂಜಿನಿಯರ್ಸ್ ತಂಡ ಹೇಳುತ್ತಿರುವ ಮಾತು. 2018ರ ಸೆಪ್ಟಂಬರ್ 25 ರಂದು ರಾಜ್ಯ ಭೂಕಂಪ ಮಾಪನ ಸಂಸ್ಥೆ ವರದಿ ನೀಡಿತ್ತು. ವರದಿಯ ಪ್ರಕಾರ ಅಣೆಕಟ್ಟೆಯ ಸುತ್ತ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧ ಮಾಡಿದರೆ ಉತ್ತಮ, ಇಲ್ಲವಾದರೇ ಅಣೆಕಟ್ಟೆಗೆ ಅಪಾಯ ಎಂಬುದು ಆ ವರದಿಯ ಸಾರಾಂಶ. ಈ ಸಾರಾಂಶವನ್ನೇ ಮುಂದಿಟ್ಟುಕೊಂಡು ಮೈಸೂರು ಎಂಜಿನಿಯರ್ಸ್ ತಂಡ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ವರದಿಯ ಅಧ್ಯಯನದ ಜೊತೆಗೆ ಕಟ್ಟೆಯ ವಾಸ್ತವತೆಯನ್ನು ಅಧ್ಯಯನ ಮಾಡಿ ವರದಿ ಮಾಡಿದ್ದು, ವರದಿಯಲ್ಲಿ ಅಣೆಕಟ್ಟೆಯ ಆಯಸ್ಸಿನ ಬಗ್ಗೆ ಅಧ್ಯಯನ ಮಾಡಬೇಕು ಹಾಗೂ 25 ಕಿಲೋ ಮೀಟರ್ ಸುತ್ತಳತೆಯಲ್ಲಿ ಗಣಿಗಾರಿಕೆ ಹಾಗೂ ಸ್ಫೋಟಕ ನಿಷೇಧ ಮಾಡಬೇಕು ಎಂಬುದು.

ಬೈಟ್; ಲಕ್ಷ್ಮಣ್, ಎಂಜಿನಿಯರ್.

ಈಗ ಕೆ.ಆರ್.ಎಸ್ ಅಣೆಕಟ್ಟೆ ತುಂಬಿದೆ. ಹೀಗಾಗಿ ಜಿಲ್ಲಾಡಳಿತ ತಾತ್ಕಾಲಿಕವಾಗಿ ಕಲ್ಲುಗಣಿಗಾರಿಕೆ ಹಾಗೂ ಸ್ಫೋಟಕ ಬಳಕೆಗೆ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಆದರೆ ಮುಂದಿನ ದಿನಗಳಲ್ಲಿ ಅಣೆಕಟ್ಟೆಯ ಭದ್ರತೆಯ ದೃಷ್ಟಿ ಏನು ಎಂಬ ಚಿಂತೆ ಎದುರಾಗಿದೆ. ಪ್ರಮುಖವಾಗಿ ಅಣೆಕಟ್ಟೆಗೆ ಅಪಾಯವಿರುವುದು ಬೇಬಿ ಬೆಟ್ಟ, ಚಿನಕುರುಳಿ ಹಾಗೂ ರಾಗಿಮುದ್ದನಹಳ್ಳಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಹಾಗೂ ರಿಗ್ ಬೋರ್ ಬ್ಲಾಸ್ಟ್ ನಿಂದ ಮಾತ್ರ. ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಅಣೆಕಟ್ಟೆಯ ಭದ್ರತೆ ಕುರಿತು ತನಿಖಾ ವರದಿ ಮಾಡಿಸುವ ಬಗ್ಗೆ ಹೇಳಲಾಗಿತ್ತು. ಆದರೆ ಇನ್ನೂ ತನಿಖಾ ತಂಡವೇ ಅಣೆಕಟ್ಟೆಗೆ ಭೇಟಿ ನೀಡಿಲ್ಲ.

ಪ್ಲೋ. . .

ಗ್ರಾಫಿಕ್ಸ್ ಇನ್…

ಈಡೇರುತ್ತಾ ಕಾವೇರಿ ಮಾತೆಯ ಪುತ್ಥಳಿ ನಿರ್ಮಾಣದ ಕನಸು…

ಗ್ರಾಫಿಕ್ಸ್ ಔಟ್...

ಕಳೆದ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕೆ.ಆರ್.ಎಸ್ ಬಳಿ ಡಿಸ್ನಿಲ್ಯಾಂಡ್ ನಿರ್ಮಾಣಕ್ಕೆ ಯೋಜನೆ ರೂಪಿಸಿತ್ತು. ಇದಕ್ಕೆ ಪ್ರತಿರೋಧವೂ ಎದುರಾಗಿತ್ತು. ಜೊತೆಗೆ ಕಾವೇರಿ ಮಾತೆಯ ಬೃಹತ್ ಪುತ್ಥಳಿ ನಿರ್ಮಾಣದಿಂದ ಅಣೆಕಟ್ಟೆಗೆ ಅಪಾಯ ಎಂಬ ವಾದವೂ ಬಂದಿತ್ತು. ವಾದದ ಹಿನ್ನೆಲೆಯಲ್ಲಿ ವಾಸ್ತವ ಚಿತ್ರಣಕ್ಕಾಗಿ ತಂಡ ರಚನೆಗೆ ಸರ್ಕಾರ ಮುಂದಾಗಿತ್ತು. ಆದರೆ ಇದುವರೆಗೂ ತಂಡದ ವರದಿಯೇ ಸಿದ್ಧವಾಗಿಲ್ಲ. ಇನ್ನು ಸರ್ಕಾರದ ಬದಲಾವಣೆ ಹಾಗೂ ಭೂಕಂಪನ ಕೇಂದ್ರದ ವರದಿ, ಮೈಸೂರು ಎಂಜಿನಿಯರ್ ಗಳ ವರದಿ ಡಿಸ್ನಿಲ್ಯಾಂಡ್ ಮಾದರಿ ಜೊತೆಗೆ ಕಾವೇರಿ ಮಾತೆಯ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಬ್ರೇಕ್ ಹಾಕುವ ಸಾಧ್ಯತೆ ಇದೆ.

ಈ ಎರಡು ವರದಿಗಳು ಕೆ.ಆರ್.ಎಸ್ ಅಣೆಕಟ್ಟೆಯ ಆಯಸ್ಸಿನ ಬಗ್ಗೆ ಅನುಮಾನ ಮೂಡಿಸುತ್ತಿವೆ. ಹೀಗಾಗಿ ಜಿಲ್ಲಾಡಳಿತ ತಾತ್ಕಾಲಿಕವಾಗಿ ಗಣಿಗಾರಿಕೆಗೆ ಬ್ರೇಕ್ ಹಾಕಿ ಶೀಲ್ ಮಾಡಿದೆ. ಆದರೆ ಮುಂದೆ ಏನು ಎಂಬ ಪ್ರಶ್ನೆ ಜಿಲ್ಲೆಯಲ್ಲಿ ಎದ್ದಿದ್ದು, ಇದಕ್ಕೆ ರಾಜ್ಯ ಸರ್ಕಾರವೇ ಉತ್ತರ ನೀಡಬೇಕಾಗಿದೆ.

ಯತೀಶ್ ಬಾಬು, ಮಂಡ್ಯ.

(ಗಮನಕ್ಕೆ: ವರದಿಗಳು ವಾಟ್ಸ್ ಆಪ್ ನಲ್ಲಿ ಬಂದಿವೆ.)

Body:ಯತೀಶ್ ಬಾಬುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.