ETV Bharat / state

ಅಕ್ರಮ ಗಣಿಗಾರಿಕೆ ತಡೆಯುವುದೇ ನನ್ನ ನಿಲುವು: ಸಂಸದೆ ಸುಮಲತಾ ಅಂಬರೀಶ್ - mandya illegal mining related news

ಸಂಸದೆಯಾಗಿ ಪಾರ್ಲಿಮೆಂಟ್ ಪ್ರವೇಶ ಮಾಡಿದ ದಿನದಿಂದ ಅಕ್ರಮ ಗಣಿಗಾರಿಗೆ ತಡೆಯುವುದೇ ನನ್ನ ನಿಲುವಾಗಿತ್ತು. ಹೀಗಾಗಿ ಕೆಆರ್​ಎಸ್ ಡ್ಯಾಂ ಸುರಕ್ಷತೆಗಾಗಿ ಧ್ವನಿ ಎತ್ತಿದ್ದೇನೆ. ಕನ್ನಂಬಾಡಿ ಕಟ್ಟೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ.ನಮ್ಮ ಜಿಲ್ಲೆಗೆ ಅನ್ಯಾಯ ಆಗುತ್ತಿರುವುದನ್ನ ನೋಡುತ್ತಾ ಕೂರಲ್ಲ ಎಂದು ಸುಮಲತಾ ಹೇಳಿದರು.

ಸಂಸದೆ ಸುಮಲತಾ ಅಂಬರೀಶ್
ಸಂಸದೆ ಸುಮಲತಾ ಅಂಬರೀಶ್
author img

By

Published : Feb 22, 2021, 10:19 PM IST

Updated : Feb 22, 2021, 10:48 PM IST

ಮಂಡ್ಯ: ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತುವುದೇ ನನ್ನ ನಿಲುವು ಎಂದು ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ಸಚಿವರೊಂದಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಸದೆಯಾಗಿ ಪಾರ್ಲಿಮೆಂಟ್ ಪ್ರವೇಶ ಮಾಡಿದ ದಿನದಿಂದ ಅಕ್ರಮ ಗಣಿಗಾರಿಗೆ ತಡೆಯುವುದೇ ನನ್ನ ನಿಲುವಾಗಿತ್ತು. ಹೀಗಾಗಿ ಕೆಆರ್​ಎಸ್ ಡ್ಯಾಂ ಸುರಕ್ಷತೆಗಾಗಿ ಧ್ವನಿ ಎತ್ತಿದ್ದೇನೆ. ಕನ್ನಂಬಾಡಿ ಕಟ್ಟೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅಲ್ಲಿ ಬ್ಲಾಸ್ಟ್ ಮಾಡಿದರೆ ಕೆ‌ಆರ್​ಎಸ್‌ಗೆ ತೊಂದರೆಯಾಗುತ್ತದೆ. ಹೀಗಾಗಿ ಗಣಿಗಾರಿಕೆಯನ್ನ ನಿಲ್ಲಿಸಬೇಕು ಎಂದರು.

ಸಂಸದೆ ಸುಮಲತಾ ಅಂಬರೀಶ್

ಒಂದು ವರ್ಷದಿಂದ ಕೊರೊನಾದಿಂದ ನಮ್ಮ ಜಿಲ್ಲೆಗೆ ನಷ್ಟವಾಗಿರುವುದರಿಂದ ಬೇರೆ ಬೇರೆ ಫಂಡ್ಸ್, ಬರ್ತಿಲ್ಲಾ. ಆದ್ದರಿಂದ ನಾವು ಜಿಲ್ಲಾ ಮೈನಿಂಗ್ ಫಂಡ್ ಇದೆ. ರಾಯಲ್ಟಿಯಿಂದ ಅಭಿವೃದ್ಧಿಗೆ ಉಪಯೋಗಿಸಬಹುದು, ರಾಯಲ್ಟಿ ಕಟ್ಟದೆ ತಪ್ಪಿಸಿಕೊಳ್ಳುವ ಕೆಲಸ ಮಾಡಬಾರದು ಎಂದು ಎಚ್ಚರಿಸಿದರು.

ರಾಯಲ್ಟಿ ಕಟ್ಟುವ ವಿಚಾರದಲ್ಲಿ ಗೊಂದಲ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಇದನ್ನ ತಡೆಯುವ ಉದ್ದೇಶ ನನ್ನಲ್ಲಿಲ್ಲ. ಆದರೆ ನಮ್ಮ ಜಿಲ್ಲೆಗೆ ಅನ್ಯಾಯ ಆಗುತ್ತಿರುವುದನ್ನ ನೋಡುತ್ತ ಕೂರಲ್ಲ. ನಮ್ಮ ಜಿಲ್ಲೆಯ ರೈತರು ಭೂಮಿ ಬಿಟ್ಟುಕೊಟ್ಟು ಹೆದ್ದಾರಿ ಕಾಮಗಾರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದ ಅವರು, ಅಂತಹ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಬಾರದು ಎಂದರು.

ಓದಿ:ಅಕ್ರಮ ಗಣಿಗಾರಿಕೆ ಪ್ರದೇಶಗಳಿಗೆ ಸಚಿವ ನಿರಾಣಿ, ಸಂಸದೆ ಸುಮಲತಾ ಭೇಟಿ..

ಅಕ್ರಮ ಗಣಿಗಾರಿಕೆ ಬಗ್ಗೆ ಸಚಿವರಿಗೆ ತಿಳಿಸಿದ್ದೆ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಯಲ್ಟಿ ಕಟ್ಟದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಹೋರಾಟದಲ್ಲಿ ಯಾರು ಏನೇ ಹೇಳಲಿ, ಯಾರೇ ಏನೇ ನನ್ನ ವಿರುದ್ಧ ಮಾತನಾಡಲಿ ನನ್ನ ಹೋರಾಟ ನಿಲ್ಲಲ್ಲಾ ಎಂದು ಅಕ್ರಮ ಗಣಿಗಾರಿಕೆ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ಸಿಡಿದೆದ್ದರು.

Last Updated : Feb 22, 2021, 10:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.