ಮಂಡ್ಯ : ಜಿಲ್ಲೆಯಲ್ಲಿ ಬಿಜೆಪಿಗೆ ಒಳ್ಳೆಯ ವಾತಾವರಣ ಕಂಡು ಬರುತ್ತಿದೆ. ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸೋದೇ ನನ್ನ ಅಜೆಂಡಾ. ಬಿಜೆಪಿಗೆ ನನ್ನ ಬೆಂಬಲ ಸೂಚಿಸಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ಮೇಲುಕೋಟೆ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿರುವ ದರ್ಶನ್ ಪುಟ್ಟಣ್ಣಯ್ಯ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ. ಅವರಿಗೆ ಒಳ್ಳೆಯದಾಗಲಿ. ಕುಮಾರಸ್ವಾಮಿ ಅವರೊಬ್ಬ ದುರಾಹಂಕಾರಿ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಕಾಂಗ್ರೆಸ್ಗೆ ಧಮ್ ಇದ್ರೆ ಲಿಂಗಾಯತ ಸಿಎಂ ಘೋಷಿಸಲಿ: ಸಂಸದ ಜಿ.ಎಂ.ಸಿದ್ದೇಶ್ವರ್
ಮಂಡ್ಯದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸುಮಲತಾ, ಮುಂದಿನ ವಾರ ಅಭಿಷೇಕ್ ಅಂಬರೀಶ್ ಚುನಾವಣೆ ಪ್ರಚಾರಕ್ಕೆ ಬರುತ್ತಾರೆ. ಬಿಜೆಪಿಗೆ ಜನರ ಬೆಂಬಲ ಸಾಕಷ್ಟು ವ್ಯಕ್ತವಾಗುತ್ತಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ ಎದ್ದರುವುದು ಬಿಜೆಪಿಗೆ ಪ್ಲಸ್ ಆಗುತ್ತದೆ ಎಂದು ಹೇಳಿದರು. ಇನ್ನು, ಮಂಡ್ಯ ಕ್ಷೇತ್ರ ಜೆಡಿಎಸ್ ಭದ್ರಕೋಟೆ ಎಂಬ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ದೊಡ್ಡ ದೊಡ್ಡ ಸಾಮಾಜ್ಯವೇ ಮುಳುಗಿಹೋಗಿದೆ. ಭದ್ರಕೋಟೆ ಅನ್ನೋದು ಹಾಸ್ಯಾಸ್ಪದ. ನಾವು ಮಾಡಿದ ಅಭಿವೃದ್ಧಿ ಮಾತ್ರ ಶಾಶ್ವತ ಎಂದು ಸುಮಲತಾ ತಿರುಗೇಟು ನೀಡಿದರು.
ಇದನ್ನೂ ಓದಿ : ನಾಮಪತ್ರ ತಿರಸ್ಕಾರ ಮಾಡಿಸುವ ಕುತಂತ್ರ ನಡೆದಿದೆ ಎಂಬ ಡಿಕೆ ಸುರೇಶ್ ಹೇಳಿಕೆಗೆ ಸಿಎಂ ತಿರುಗೇಟು
ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂಗೆ ಕಳೆದ ಬಾರಿ ಮೋಸವಾಗಿದ್ದು, ಜನರು ಈ ಬಾರಿ ಅಶೋಕ್ ಜಯರಾಂಗೆ ಆಶೀರ್ವಾದ ಮಾಡುತ್ತಾರೆ. ನಮ್ಮ ಟಾರ್ಗೆಟ್ ಇಲ್ಲಿಯ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ಹೋಗಲಾಡಿಸುವುದಾಗಿದ್ದು, ಶ್ರೀರಂಗಪಟ್ಟಣ- ಪಾಂಡವಪುರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಶಾಸಕ ಪುಟ್ಟರಾಜು ಮೇಲೆ ಸಿಬಿಐ ಕೇಸ್ ಇದೆ. ಈ ಅವಕಾಶಕ್ಕೆ ಜನರು ಕಾಯುತ್ತಿದ್ದು ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ ಎಂದರು.
ಕುಮಾರಸ್ವಾಮಿ ಹೇಳಿಕೆ ವಿಚಾರ: ಅವರು ಫೈಟ್ ಮಾಡುತ್ತಿರೋದು ಯಾರಿಗೆ? ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ. ಅದರೆ ಎರಡೂ ಪಕ್ಷಗಳನ್ನು ಬಿಟ್ಟು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಅವರೇ ಹೇಳುತ್ತಾರೆ ಸುಮಾಲತಾ ಬಗ್ಗೆ ಮಾತನಾಡಲ್ಲ ಅಂತ. ಆದರೂ ನನ್ನ ಬಗ್ಗೆ ಮಾತನಾಡದೆ ಸುಮ್ಮನಿರುವುದಿಲ್ಲ ಎಂದು ಹೇಳಿದರು.
ಅಂಬರೀಶ್‌ರಿಂದ ಏನೂ ಅನುಕೂಲ ಆಗಿಲ್ಲ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಅಂಬರೀಶ್ ಬಗ್ಗೆ ಮಂಡ್ಯ ಜನರಿಗೆ ಗೊತ್ತು. ಮಂಡ್ಯದಲ್ಲಿ ಏಳಕ್ಕೆ ಏಳೂ ಸೀಟು ಜೆಡಿಎಸ್ ಗೆಲ್ಲೋಕೆ ಅಂಬರೀಶ್ ಕಾರಣ. ಸಿಎಂ ಆಗೋಕೂ ಅವರೇ ಕಾರಣ. ಹೀಗಾಗಿ ಮನೆಗೆ ಬಂದು ಊಟ ಮಾಡಿ ಅಂಬರೀಶ್ಗೆ ಧನ್ಯವಾದ ಹೇಳಿದ್ದರು. ಅಂಬರೀಶ್ ಬಗ್ಗೆ ಮಾತನಾಡುವುದು ದುರಹಂಕಾರದ ಮಾತು ಎಂದು ಸುಮಲತಾ ಹೇಳಿದರು.
ಇದನ್ನೂ ಓದಿ : 'ಚು.ಆಯೋಗದ ಮೇಲೆ ನಂಬಿಕೆಯಿಲ್ಲದೇ ಸಹೋದರನಿಂದಲೇ ಡಿಕೆಶಿ ನಾಮಪತ್ರ ಸಲ್ಲಿಕೆ'