ಮಂಡ್ಯ: ಹಲಗೂರು ರಾಮು ಕೊಲೆ ಪ್ರಕರಣ ಸಂಬಂಧ 8 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಗಸ್ಟ್ 7ರಂದು ನಡೆದಿದ್ದ ಬರ್ಬರ ಹತ್ಯೆ ಮಳವಳ್ಳಿ ತಾಲೂಕಿನಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿತ್ತು. ಪ್ರಕರಣ ದಾಖಲು ಮಾಡಿಕೊಂಡಿದ್ದ ಹಲಗೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಆರೋಪಿಗಳಾದ ಪ್ರಮೋದ್, ರಾಹುಲ್ ನಾಯಕ್, ಜನಾರ್ದನ್, ದರ್ಶನ್, ಮುತ್ತುರಾಜು, ಖಾಲಿದ್ ಅಹಮದ್, ಸುಹಾನ್ ಹಾಗೂ ಕೀರ್ತಿ ಎಂಬುವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.
ಭಯ ಹುಟ್ಟಿಸಲು ನಡೆದಿತ್ತು ಕೊಲೆ:
ಬಾರ್‌ವೊಂದರ ಗಲಾಟೆ ಸಂಬಂಧ ರೌಡಿಶೀಟರ್ ಕೀರ್ತಿ ಕುಮ್ಮಕ್ಕಿನ ಮೇರೆಗೆ ರಾಮುವನ್ನು ಹತ್ಯೆ ಮಾಡಲಾಗಿತ್ತು. ಹತ್ಯೆ ಮಾಡಿ ರೌಡಿ ಸಾಮ್ರಾಜ್ಯ ಕಟ್ಟುವ ಕನಸು ಕಂಡಿದ್ದರಂತೆ ಈ ದುಷ್ಕರ್ಮಿಗಳು. ಗಲಾಟೆ ಪ್ರಕರಣವನ್ನೇ ಮುಂದಿಟ್ಟುಕೊಂಡು ಕೀರ್ತಿ ಕುಮ್ಮಕ್ಕಿನ ಮೇರೆಗೆ ಹತ್ಯೆ ನಡೆದಿತ್ತು ಎನ್ನಲಾಗಿದೆ.. ಪ್ರಕರಣ ನಡೆದ 3 ದಿನಗಳಲ್ಲಿಯೇ ಆರೋಪಿಗಳನ್ನು ಪೊಲೀಸರು ಚನ್ನಪಟ್ಟಣದ ಬಸ್ ನಿಲ್ದಾಣದಲ್ಲಿ ಬಂಧಿಸಿದ್ದರು.