ETV Bharat / state

ಮಂಡ್ಯ: ಹತ್ಯೆಯಾದ ಅರ್ಚಕರ ಕುಟುಂಬಕ್ಕೆ ಪರಿಹಾರ ವಿತರಿಸಿದ ಸಚಿವ ಪೂಜಾರಿ

ನಿನ್ನೆ ನಡೆದ ದುರಂತ ನಾಗರಿಕ ಸಮಾಜ ತಲೆ ತಗ್ಗಿಸುವ ದುರಂತ. ಹತ್ಯೆ ಮಾಡಿರುವ ಆರೋಪಿಗಳು ಎಲ್ಲೇ ಇದ್ರೂ ಕೂಡ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತೆ. ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧವಾಗಿ ಕೆಲಸ ಮಾಡ್ತಿದೆ ಎಂದು ಮಂಡ್ಯ ಜಿಲ್ಲೆಯ ಮೂವರು ಅರ್ಚಕರ ಹತ್ಯೆ ಕುರಿತು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿದರು.

mujahideen-minister-kota-poojary
ಮುಜರಾಯಿ ಸಚಿವ ಕೋಟಾ ಪೂಜಾರಿ.
author img

By

Published : Sep 12, 2020, 2:50 PM IST

ಮಂಡ್ಯ: ಜಿಲ್ಲೆಯ ಮೂವರು ಅರ್ಚಕರ ಹತ್ಯೆ ನಡೆದ ದೇವಾಲಯಕ್ಕಿಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮುಜಾರಾಯಿ ಕಮೀಷನರ್ ರೋಹಿಣಿ ಸಿಂಧೂರಿ, ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಭೇಟಿ ನೀಡಿ ಮೃತರ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣೆ ಮಾಡಿದರು. ತಲಾ 5 ಲಕ್ಷ ರೂಪಾಯಿಗಳ ಚೆಕ್ ವಿತರಣೆ ಮಾಡಿ, ಘಟನೆ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದರು.

ನಂತರ ಮಾತನಾಡಿದ ಸಚಿವರು, ನಿನ್ನೆ ನಡೆದ ದುರಂತ ನಾಗರಿಕ ಸಮಾಜ ತಲೆತಗ್ಗಿಸುವಂತದ್ದಾಗಿದೆ. ಹತ್ಯೆ ಮಾಡಿರುವ ಆರೋಪಿಗಳು ಎಲ್ಲೇ ಇದ್ರೂ ಕೂಡ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತೆ. ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧವಾಗಿ ಕೆಲಸ ಮಾಡ್ತಿದೆ ಎಂದರು. ಸಂತ್ರಸ್ತ ಕುಟುಂಬಕ್ಕೆ ಸಿಎಂ 5 ಲಕ್ಷ ಪರಿಹಾರ ನೀಡಿದ್ದಾರೆ. ಕುಟುಂಬಕ್ಕೆ ಈಗಾಗಲೇ ಪರಿಹಾರವನ್ನ ಹಸ್ತಾಂತರ ಮಾಡಿದ್ದೇವೆ. ಸರ್ಕಾರದಿಂದ ಏನೇನು ನೆರವು ಕೊಡಬೇಕೆಂದು ತೀರ್ಮಾನ ಮಾಡಲಾಗಿದೆ. ಕಠಿಣ ಪರಿಸ್ಥಿತಿಯಲ್ಲಿ ಕೂಡ ಹತ್ಯೆ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ ಎಂದರು.

ಇಲ್ಲಿರುವ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಸಾರ್ವಜನಿಕರು ಹೇಳಿದ್ದಾರೆ. ಕಮೀಷನರ್ ರೋಹಿಣಿ ಸಿಂಧೂರಿಗೆ ಸೂಚನೆ ನೀಡಿದ್ದೇನೆ. ತಕ್ಷಣ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ಕೊಡಲಾಗಿದೆ. ತಿಂಗಳಲ್ಲಿ ಹುಂಡಿಗಳನ್ನ ತೆಗೆಯುವುದಕ್ಕೆ ಆದೇಶ ಕೊಟ್ಟಿದ್ದೇವೆ. ಇನ್ನು ಮುಂದೆ ತಿಂಗಳಿಗೆ ಹುಂಡಿ ಹಣ ತೆಗೆಯುವಂತೆ ಬೇಕಾಗುವ ಕ್ರಮ ವಹಿಸಲಾಗುವುದು ಎಂದರು.

ದೇವಾಲಯದ ಮೂರು ಹುಂಡಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಪೊಲೀಸ್ ಇಲಾಖೆ ತನಿಖೆ ಮಾಡಿದೆ. ಏನೇ ಆಗಿದ್ರೂ ಅದು ನಮ್ಮ ಸಿಬ್ಬಂದಿಯ ಬೇಜವಾಬ್ದಾರಿಯಾಗಿರುತ್ತದೆ. ತನಿಖೆ ಬಳಿಕ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದು ಭರವಸೆ ನೀಡಿದರು.

ಸಚಿವ ನಾರಾಯಣ ಗೌಡ ಮಾತನಾಡಿ, ಎಸ್ಪಿ ಅವರ ನೇತೃತ್ವದಲ್ಲಿ ಈ ಪ್ರಕರಣದಲ್ಲಿ ಸೀಕ್ರೆಟ್ ಆಪರೇಷನ್ ಆಗ್ತಿದೆ. ಶೀಘ್ರವೇ ಒಂದೆರಡು ದಿನಗಳಲ್ಲಿ ಅದನ್ನು ಹೊರಗಡೆ ತರ್ತಾರೆ‌‌‌‌. ಈ ಕುರಿತಾಗಿ ಪ್ರಯತ್ನಗಳು ನಡೀತಾ ಇದ್ದು, ಇದರಲ್ಲಿ ಯಶಸ್ವಿಯಾಗ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಜರಾಯಿ ಇಲಾಖೆ ಸಚಿವರು ಸಿಎಂರಿಂದ ಅನುಮತಿ ಪಡೆದು ಮೃತ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಕೊಡಿಸ್ತಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಮತ್ತು ಅವರ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ. ಮೃತ ಕುಟುಂಬದ ಮಕ್ಕಳ ವಿದ್ಯಾಭ್ಯಾಸ ಮತ್ತು ಉದ್ಯೋಗ ಕೊಡಿಸುವ ಹೊರೆ ನಾನು ಹೊರುತ್ತೇನೆ. ಇದರ ಜೊತೆಗೆ ನಾನು ಮತ್ತು ನಮ್ಮ ಸರ್ಕಾರ ಆ ಕುಟುಂಬದ ಜೊತೆಗಿರುತ್ತೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.