ಮಂಡ್ಯ: ಪಾದಯಾತ್ರೆ, ಬಂದ್ನಿಂದ ಆಗಿರುವ ಉಪಯೋಗ ತೋರಿಸಿ. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕಾಂಗ್ರೆಸ್ ನಾಯಕರ ಪಾದಯಾತ್ರೆ ವಿಚಾರ ಇದು ಅವರ ಪಕ್ಷದ ನಿರ್ಧಾರ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರಿಗೆ ಮಾತನಾಡಿದ ಅವರು, ಇವರಿಗೆ ಪಾದಯಾತ್ರೆ, ಬಂದ್ ನಿಂದ ಆಗಿರುವ ಉಪಯೋಗ ತೋರಿಸಿ. ರಾಜಕಾರಣದಲ್ಲಿ ಒಂದೊಂದು ಮುಂಮೆಂಟ್ಸ್ ನೋಡಿದ್ರೆ ನಿಜವಾದ ಹೋರಾಟ ಎಲ್ಲಿಂದ ಬರಬೇಕು.
ಡಿಸಿಶನ್ ಮೇಕರ್ ಯಾರು ಅಂತನು ಯೋಚನೆ ಮಾಡಬೇಕು. ಅವರು ಒಳ್ಳೆಯ ಉದ್ದೇಶ ಇಟ್ಟುಕೊಂಡು ಪಾದಯಾತ್ರೆ ಮಾಡ್ತಿರಬಹುದು ಒಳ್ಳೆಯದಾಗಲಿ. ಮೇಕೆದಾಟು ಯೋಜನೆ ಆಗಬೇಕು ಅನ್ನುವುದೇ ನಮ್ಮ ಒತ್ತಾಯ. ಯಾರಿಂದ ಆಗುತ್ತೆ, ಅನ್ನೊದಲ್ಲ ಮುಖ್ಯ, ಆಗಬೇಕು ಅಷ್ಟೆ ಎಂದರು.
ಎಂಇಎಸ್ ಹಾಗೂ ಶಿವಸೇನೆ ಸಂಘಟನೆಯ ಪುಂಡಾಟಿಕೆ ವಿಚಾರ ಮಾತನಾಡಿ, ಈ ಸಂಘಟನೆಗಳನ್ನ ನಿಷೇಧ ಮಾಡಬೇಕು ಎಂದರು. ಇನ್ನು ಮೈಶುಗರ್ ಪ್ರಾರಂಭದ ವಿಚಾರವಾಗಿ ಪ್ರತಿಕ್ರಿಯಿಸಿದ ಸುಮಲತಾ, ಮೈಶುಗರ್ ಕಾರ್ಖಾನೆ ಯಾವುದೋ ಒಂದು ಮಾಡೆಲ್ನಲ್ಲಿ ಫಸ್ಟ್ ಒಪನ್ ಮಾಡಿ.
ಇವರು ತೆಗೆದುಕೊಳ್ಳುವ ನಿರ್ಧಾರದಿಂದ ಮೈಶುಗರ್ ಪ್ರಾರಂಭ ಮಾಡುವುದನ್ನ ತಡ ಮಾಡುತ್ತಾರೆ. ಪ್ರತಿಭಟನೆ ಮಾಡಿದವರೆಲ್ಲ ಎಲ್ಲಿದ್ದಾರೆ, ಸುಮ್ಮನೆ ಇದ್ದಾರಾ.
ಸಿಎಂ ಬಳಿ ಇದರ ಬಗ್ಗೆ ಮಾತನಾಡಿದ್ದೇನೆ. ಅಧಿವೇಶನ ಮುಗಿಸಿ ಮಾತನಾಡೋಣಾ ಅಂತ ಹೇಳಿದ್ದಾರೆ. ಸರ್ಕಾರವೇ ಮೈಶುಗರ್ ನಡೆಸಲಿ, ಅಡ್ಡಿ ಇಲ್ಲ. ಸರ್ಕಾರವೇ ಸಕ್ರಮವಾಗಿ ನಡೆಸೊದಾದ್ರೆ ಸಂತೋಷ. ಆದ್ರೆ ಅದು ಯಾವಾಗ ಅನ್ನುವ ಒಂದು ಕ್ಲಿಯಾರಿಟಿ ನನಗೆ ಬೇಕು ಎಂದರು.