ETV Bharat / state

'ಡ್ಯಾಂ ಬಿರುಕು ಬಿಟ್ಟಿಲ್ಲ ಎಂದರೆ ಸಂತೋಷ; ಸತ್ಯಾಸತ್ಯತೆ ಅರಿಯಲು ಅವಕಾಶ ಮಾಡಿಕೊಡಬೇಕು' - Sumalatha Ambarish News Conference

ಕೆ‌ಆರ್‌ಎಸ್‌ ಡ್ಯಾಂ ಬಿರುಕು ಬಿಟ್ಟಿದೆ ಎಂದು ಹಿಂದೊಮ್ಮೆ ಸಂಸದೆ ಸುಮಲತಾ ಸ್ಪಷ್ಟವಾಗಿ ಹೇಳಿದ್ದರು. ಆದ್ರೀಗ ತಮ್ಮ ಹೇಳಿಕೆ ಸಂಬಂಧ ಅವರು ಹೆಚ್ಚಿನ ವಿವರಣೆ ನೀಡಿದ್ದಾರೆ.

MP Sumalatha Ambarish News Conference in Mandya
ಸಂಸದೆ ಸುಮಲತಾ ಅಂಬರೀಶ್ ಸುದ್ದಿಗೋಷ್ಠಿ
author img

By

Published : Jul 2, 2021, 7:27 PM IST

ಮಂಡ್ಯ: ಕೆ.ಆರ್‌.ಎಸ್‌ ಅಣೆಕಟ್ಟೆ ಬಿರುಕು ಬಿಟ್ಟಿಲ್ಲ ಎಂದರೆ ಸಂತೋಷ. ಆದ್ರೆ ಸತ್ಯಾಸತ್ಯತೆ ಅರಿಯಲು ಅವಕಾಶ ಮಾಡಿಕೊಡಬೇಕು ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಸಂಸದೆ ಸುಮಲತಾ ಅಂಬರೀಶ್ ಸುದ್ದಿಗೋಷ್ಠಿ

ನಗರದಲ್ಲಿ‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ಯಾಂನಲ್ಲಿ ಬಿರುಕು ಇದೆಯೋ, ಇಲ್ವೋ ಎಂಬುದೇ ಪ್ರಶ್ನೆಯಾಗಿದೆ. ಆದರೆ ಹಿಂದೆ ಏನೆಲ್ಲಾ ಆಗಿದೆ ಎಂಬ ದಾಖಲೆ ಇದೆ. ನೂರು ವರ್ಷದ ಹಿಂದಿನ ಡ್ಯಾಂ ಬಲಪಡಿಸಲು ನೋಡಬೇಕು. ಡ್ಯಾಂ ಹತ್ತಿರ ಬಂದು ಅಕ್ರಮ ಗಣಿಗಾರಿಕೆ ಮಾಡಿದ್ರೆ ಹೇಗೆ?. ಡ್ಯಾಂ ಬಗ್ಗೆ ಪ್ರತಿದಿನ ಮಾಹಿತಿ ಪಡೆಯುತ್ತಿರುವುದಲ್ಲದೇ, ಹಲವು ಅಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ಪಡೆಯುತ್ತಿದ್ದೇನೆ ಎಂದರು.

ರಾಜಕಾರಣದ ಮಾತುಗಳಿಗೆ ಉತ್ತರ ಹೇಳಿ ಕೂತರೆ ಅದು ರಾಜಕಾರಣ ಆಗುತ್ತೆ. ನಾನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದರೆ ಕೆಲಸ ನಡೀತಿಲ್ಲ ಎಂದಲ್ಲ. ಡ್ಯಾಂ ಬಿರುಕು ಬಿಟ್ಟಿದೆ ಎಂಬ ನನ್ನ ಹೇಳಿಕೆ ಬಳಿಕ ಹಲವರು ಅವರವರ ಲಾಭ, ನಷ್ಟಕ್ಕೆ ತಕ್ಕಂತೆ ಮಾತನಾಡಿದ್ದಾರೆ ಎಂದು ಹೇಳಿದರು.

KRS ಉಳಿಸುವುದು ನನ್ನ ಉದ್ದೇಶ. ಇನ್ನು ಮುಂದೆ ಡ್ಯಾಂ ಉಳಿಸಿ ಎಂಬ ಹ್ಯಾಶ್‌ಟ್ಯಾಗ್ ಬಳಸುತ್ತೇನೆ ಎಂದರು.

ಇದನ್ನೂ ಓದಿ: ಒಂದು ಕಡೆ ಕೊಟ್ಟು ಇನ್ನೊಂದೆಡೆ ಕಿತ್ಕೊಳ್ಳೋ ಕೆಲಸ ನಾವು ಮಾಡುತ್ತಿಲ್ಲ: ನಿರ್ಮಲಾ ಸೀತಾರಾಮನ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.