ETV Bharat / state

ಮಂಡ್ಯದಲ್ಲೊಂದು ಭಯಾನಕ ಘಟನೆ : ಮಗಳ ಶವದ ಜೊತೆ 4 ದಿನ ಕಳೆದ ತಾಯಿ! - mother with her daughter corpse

30 ವರ್ಷ ವಯಸ್ಸಿನ ಮೃತ ರೂಪ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಕೆಲ ತಿಂಗಳ ಹಿಂದೆ ಕಾರಣಾಂತರಗಳಿಂದ ಸಸ್ಪೆಂಡ್ ಆಗಿದ್ದರು. ಇತ್ತೀಚಿಗೆ ಮತ್ತೆ ಕೆಲಸಕ್ಕೆ ಬರುವುದಾಗಿ ಪತ್ರ ಬರೆದಿದ್ದರು. ಇನ್ನೂ ಕಳೆದ 10 ವರ್ಷಗಳ ಹಿಂದೆ ವಿವಾಹವಾಗಿದ್ದ ರೂಪ ಕೌಟುಂಬಿಕ ಕಲಹ ಹಿನ್ನೆಲೆ 5 ವರ್ಷಗಳ ಹಿಂದೆ ಗಂಡ, ಇಬ್ಬರು ಮಕ್ಕಳಿಂದ ಪ್ರತ್ಯೇಕವಾಗಿದ್ದಾರೆ. ಗಂಡನಿಂದ ದೂರಾದ ಬಳಿಕ ತಾಯಿ ಮನೆಯಲ್ಲೇ ವಾಸವಿದ್ದರು..

mother spent 4 days with her daughter's corpse in mandya
ಮಗಳ ಶವದ ಜೊತೆ 4 ದಿನ ಕಳೆದ ತಾಯಿ
author img

By

Published : May 31, 2022, 12:47 PM IST

ಮಂಡ್ಯ : ನಾಲ್ಕು ದಿನಗಳಿಂದ ಮಗಳ ಮೃತದೇಹದ ಜೊತೆ ತಾಯಿ ವಾಸವಿದ್ದ ಭಯಾನಕ ಘಟನೆ ನಗರದ ಹಾಲಹಳ್ಳಿ ಕೆರೆಯ ನ್ಯೂ ತಮಿಳು ಕಾಲೋನಿಯಲ್ಲಿ ಸೋಮವಾರ ಬೆಳಕಿಗೆ ಬಂದಿದೆ. 30 ವರ್ಷದ ರೂಪ ಎಂಬುವರು ಮೃತಪಟ್ಟಿದ್ದು, ಮಗಳ ಸಾವಿನ ವಿಚಾರ ಯಾರಿಗೂ ತಿಳಿಸದ ತಾಯಿ ನಾಗಮ್ಮ ಶವದ ಜೊತೆಯೇ ನಾಲ್ಕು ದಿನ ಕಳೆದಿದ್ದಾರೆ.

ನಾಲ್ಕು ದಿನಗಳಿಂದ ಮನೆಯಲ್ಲೇ ಇದ್ದ ಮೃತದೇಹ ಕೊಳೆತು ದುರ್ವಾಸನೆ ಬರಲು ಆರಂಭಿಸಿದೆ. ಆರಂಭದಲ್ಲಿ ಇಲಿ, ಹೆಗ್ಗಣ ಸತ್ತಿರಬಹುದು ಎಂದುಕೊಂಡು ಹುಡುಕಾಡಿದ್ದ ಅಕ್ಕಪಕ್ಕದ ಜನರು ನಾಗಮ್ಮ ಮತ್ತು ರೂಪ ಮನೆಯಿಂದ ಹೊರಬರದೆ ಇದ್ದದ್ದನ್ನು ಗಮನಿಸಿ ಅನುಮಾನಗೊಂಡಿದ್ದಾರೆ.

ಬಳಿಕ ಮಿಕ್ಸಿ ರಿಪೇರಿಗೆಂದು ಬಂದವನನ್ನು ಕರೆದು ನಾಗಮ್ಮ ಅವರ ಮನೆಯ ಬಾಗಿಲು ಹೊಡೆಸಿದ ಸ್ಥಳೀಯರು ಮನೆ ಒಳಗಿನ ದೃಶ್ಯ ನೋಡಿ ಬೆಚ್ಚಿಬಿದ್ದಿದ್ದಾರೆ. ಮೃತಪಟ್ಟ ಮಗಳು ರೂಪಾ ಶವದ ಜೊತೆ ನಾಗಮ್ಮ ಕುಳಿತಿದ್ದಳು. ಆತಂಕದ ನಡುವೆಯೇ ಪೂರ್ವ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ ಸ್ಥಳೀಯರು, ಪೊಲೀಸರ ಸಹಾಯದೊಂದಿಗೆ ಮೃತದೇಹವನ್ನು ಶವಾಗಾರಕ್ಕೆ ರವಾನಿಸಿದ್ದಾರೆ.

30 ವರ್ಷ ವಯಸ್ಸಿನ ಮೃತ ರೂಪ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಕೆಲ ತಿಂಗಳ ಹಿಂದೆ ಕಾರಣಾಂತರಗಳಿಂದ ಸಸ್ಪೆಂಡ್ ಆಗಿದ್ದರು. ಇತ್ತೀಚಿಗೆ ಮತ್ತೆ ಕೆಲಸಕ್ಕೆ ಬರುವುದಾಗಿ ಪತ್ರ ಬರೆದಿದ್ದರು. ಇನ್ನೂ ಕಳೆದ 10 ವರ್ಷಗಳ ಹಿಂದೆ ವಿವಾಹವಾಗಿದ್ದ ರೂಪ ಕೌಟುಂಬಿಕ ಕಲಹ ಹಿನ್ನೆಲೆ 5 ವರ್ಷಗಳ ಹಿಂದೆ ಗಂಡ, ಇಬ್ಬರು ಮಕ್ಕಳಿಂದ ಪ್ರತ್ಯೇಕವಾಗಿದ್ದಾರೆ. ಗಂಡನಿಂದ ದೂರಾದ ಬಳಿಕ ತಾಯಿ ಮನೆಯಲ್ಲೇ ವಾಸವಿದ್ದರು.

ಇದನ್ನೂ ಓದಿ: ರಾಜ್ಯಸಭೆಯಲ್ಲಿ ಜನ ಮೆಚ್ಚುವ ರೀತಿ ಕೆಲಸ ಮಾಡುವೆ: ಜಗ್ಗೇಶ್ ಭರವಸೆ

ಇನ್ನೂ ಕೆಲ ದಿನಗಳಿಂದ ಕುಡಿತದ ಚಟಕ್ಕೆ ತಾಯಿ‌ ಮಗಳಿಬ್ಬರು ಒಳಗಾಗಿದ್ದರಂತೆ. ಪ್ರತಿನಿತ್ಯ ಒಂದಲ್ಲ ಒಂದು ಕಾರಣಕ್ಕೆ ಇಬ್ಬರ ಮಧ್ಯೆ ಜಗಳವಾಗುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಆದ್ರೆ, ನಾಲ್ಕು ದಿನಗಳಿಂದ ಯಾವುದೇ ಮಾತುಕತೆ ಇಲ್ಲದೇ ಇಬ್ಬರೂ ಸಹ ಮನೆಯಿಂದ ಹೊರಬಾರದೆ ಇದ್ದಾಗ ಅಕ್ಕಪಕ್ಕದವರು ಅನುಮಾನಗೊಂಡಿದ್ದಾರೆ.

ದುರ್ವಾಸನೆಗೆ ಬೇಸತ್ತು ಮನೆ ಬಾಗಿಲು ಹೊಡೆದಾಗ ಘಟನೆ ಬೆಳಕಿಗೆ ಬಂದಿದೆ. ಆದ್ರೆ, ರೂಪ ಸಾವಿಗೆ ಕಾರಣ ಮಾತ್ರ ಇನ್ನೂ ತಿಳಿದು ಬಂದಿಲ್ಲ. ಸದ್ಯ ಶವಾಗಾರಕ್ಕೆ ಮೃತದೇಹ ರವಾನೆ ಮಾಡಲಾಗಿದೆ. ಪರೀಕ್ಷೆ ಬಳಿಕ ಸಹಜ ಸಾವೋ ಇಲ್ಲವೋ ಎಂಬ ಸತ್ಯ ಹೊರಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.