ETV Bharat / state

ಕರ್ನಾಟಕದ ದುಡ್ಡು ಶ್ರೀಲಂಕಾಗೆ ಹೋಗುತ್ತಿದೆ: ಶಾಸಕ ಸುರೇಶ್ ಗೌಡ - ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ

ಕ್ಯಾಸಿನೋವನ್ನು ಕರ್ನಾಟಕದಲ್ಲೇ ಓಪನ್ ಮಾಡಿ, ನಮ್ಮ ದುಡ್ಡು ನಮ್ಮಲ್ಲೇ ಇರಲಿ ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ಹೊಸ ಬೇಡಿಕೆಯನ್ನು ಸರ್ಕಾರದ ಮುಂದೆ ಇರಿಸಲು ಮುಂದಾಗಿದ್ದಾರೆ.

mla-suresh-gowda-speaks-on-casino
mla-suresh-gowda-speaks-on-casino
author img

By

Published : Sep 16, 2020, 12:25 PM IST

ಮಂಡ್ಯ: ಕರ್ನಾಟಕದ ದುಡ್ಡೆಲ್ಲಾ ಶ್ರೀಲಂಕಾ ಕ್ಯಾಸಿನೋಗೆ ಹೋಗ್ತಿದೆ. ಇಲ್ಲಿ ಯಾರಾದರೂ ಹೆಚ್ಚಿಗೆ ದುಡ್ಡು ಮಾಡಿದ್ದಾರೆ ಅವರೆಲ್ಲರೂ ಅಲ್ಲಿ ದುಡ್ಡು ಕಳೆಯುತ್ತಿದ್ದಾರೆ ಎಂದು ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಹೇಳಿದ್ದಾರೆ.

ಕ್ಯಾಸಿನೋವನ್ನು ಕರ್ನಾಟಕದಲ್ಲೇ ಓಪನ್ ಮಾಡಿ, ನಮ್ಮ ದುಡ್ಡು ನಮ್ಮಲ್ಲೇ ಇರಲಿ ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ಹೊಸ ಬೇಡಿಕೆಯನ್ನು ಸರ್ಕಾರದ ಮುಂದೆ ಇರಿಸಲು ಮುಂದಾಗಿದ್ದಾರೆ.

ಶಾಸಕ ಸುರೇಶ್ ಗೌಡ

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಮೀರಣ್ಣ ಒಬ್ಬರೇ ಅಲ್ಲ, ಒಂದು ಟೀಂ ಕ್ಯಾಸಿನೋಗೆ ಹೋಗುತ್ತೆ. ಎಲ್ಲರ ಪಾಸ್‌ಪೋರ್ಟ್ ತೆಗೆದು ನೋಡಿದ್ರೆ ಎಲ್ಲಾ ಮಾಹಿತಿ ಸಿಕ್ಕಿಬಿಡುತ್ತೆ. ಕ್ಯಾಸಿನೋದಲ್ಲಿ ಎಲ್ಲವೂ ಸಿಗಲಿದೆ. ದುಡ್ಡೊಂದಿದ್ದರೆ ಪ್ರಪಂಚದಲ್ಲಿ ಸಿಗುವ ಎಲ್ಲಾ ವಸ್ತು ಕ್ಯಾಸಿನೋದಲ್ಲಿ ಸಿಗುತ್ತೆ ಎಂದರು.

ರಾಜಕಾರಣಿಗಳು ಡ್ರಗ್ಸ್ ತೆಗೆದುಕೊಳ್ಳುವ ಬಗ್ಗೆ ನನಗೆ ಗೊತ್ತಿಲ್ಲ. ಡ್ರಗ್ಸ್ ದಂಧೆ ಸರ್ಕಾರದ ಸ್ಪಾನ್ಸರ್. ಸರ್ಕಾರ ತನ್ನ ತಪ್ಪುಗಳನ್ನ ಮುಚ್ಚಿಕೊಳ್ಳಲು ಕೆ.ಜಿ., ಡಿ.ಜೆ.ಹಳ್ಳಿ ಅಂತ ಶುರು ಮಾಡಿತು. ಈಗ ಡ್ರಗ್ಸ್​ ವಿಚಾರ ಶುರು ಮಾಡಿದ್ದಾರೆ. ಇವೆಲ್ಲವೂ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮಗಳು ಎಂದರು.

ರಾಜ್ಯದಲ್ಲಿ ಕಷ್ಟಕರ ಸಮಸ್ಯೆಗಳಿವೆ. ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಮಾಡಲಾಗ್ತಿದೆ. ಡ್ರಗ್ಸ್ ದಂಧೆ ಇರೋದು ಪೊಲೀಸರಿಗೆ ಗೊತ್ತಿರಲಿಲ್ಲವಾ?. ನಾವು ಕಾಂಗ್ರೆಸ್ ಪರ ಇದ್ದೇವೆ. ಅವರ ಜತೆ ಸರ್ಕಾರ ಮಾಡಿದ್ದವರು ನಾವ್ಯಾಕೆ ಜಮೀರ್​ ಅವರನ್ನು ಟಾರ್ಗೆಟ್ ಮಾಡ್ತೀವಿ. ಇದೆಲ್ಲಾ ಊಹಾಪೋಹ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.