ಮಂಡ್ಯ: ಕೆಲದಿನಗಳ ಕಾಲ ತಣ್ಣಗಿದ್ದ ಸಂಸದೆ ಸುಮಲತಾ ಮತ್ತು ಮಂಡ್ಯ ಜೆಡಿಎಸ್ 'ದಳಪತಿ'ಗಳ ಶೀತಲ ಸಮರ ಮತ್ತೆ ಮುನ್ನೆಲೆಗೆ ಬಂದಿದೆ. ಸಂಸದೆ ಸುಮಲತಾಗೆ ಮಂಡ್ಯ ಸಂಸ್ಕೃತಿ ಗೊತ್ತಿಲ್ಲ ಎನ್ನುವ ಮೂಲಕ ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಹರಿಹಾಯ್ದಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಪಿ.ಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಗಣಿಗಾರಿಕೆ ಸ್ಥಗಿತದ ಹೋರಾಟ ವಿಚಾರದಲ್ಲಿ ಸಂಸದೆಗೆ ಮಂಡ್ಯ ಸಂಸ್ಕೃತಿ ಗೊತ್ತಿಲ್ಲ ಎಂದರು.
ಜಿಲ್ಲೆಯಲ್ಲಿ ನೂರಾರು ವರ್ಷಗಳಿಂದ ಕಲ್ಲು ಗಣಿಗಾರಿಕೆ ನಡೀತಾ ಬರ್ತಿದೆ. ಅವರ ಈ ಹೋರಾಟದಿಂದ ಜಿಲ್ಲೆಯ ಸರ್ಕಾರಿ ಅಭಿವೃದ್ದಿ ಕುಂಠಿತವಾಗುತ್ತಿದೆ. ಯಾವುದೇ ಅಭಿವೃದ್ಧಿ ಕಾಮಗಾರಿಗೆ ಕಲ್ಲು ಮಣ್ಣು, ಮರಳು ಸಿಗುತ್ತಿಲ್ಲ. ಇದು ತುಘಲಕ್ ಸಂಸ್ಕೃತಿ ಎಂದು ಕಿಡಿಕಾರಿದರು.
ಗಣಿಗಾರಿಕೆ ಅಕ್ರಮವಾಗಿದ್ರೆ ಸರ್ಕಾರ ಅವುಗಳನ್ನು ರಾಜಧನ ಇಲ್ಲವೇ ದಂಡ ಕಟ್ಟಿಸಿಕೊಂಡು ಸಕ್ರಮ ಮಾಡಿಸಿಕೊಡಲಿ ಎಂದು ಸರ್ಕಾರವನ್ನು ಒತ್ತಾಯಿಸಿದರು.
ಇದನ್ನೂ ಓದಿ : ಸಂಪುಟದಿಂದ ಕೈಬಿಟ್ಟಿದ್ದಕ್ಕೆ ಸಿಎಂ ಮುಂದೆ ಬೇಸರ ವ್ಯಕ್ತಪಡಿಸಿದ ಸುರೇಶ್ ಕುಮಾರ್