ETV Bharat / state

ಮಂಡ್ಯ ಜೆಡಿಎಸ್​ನಲ್ಲಿ ಅಸಮಾಧಾನದ ಹೊಗೆ..​ ತೆನೆ ಇಳಿಸುವ ಮುನ್ಸೂಚನೆ ನೀಡಿದ್ರಾ ಶಾಸಕ ಎಂ. ಶ್ರೀನಿವಾಸ್?

ಮಂಡ್ಯದ ಕರ್ನಾಟಕ ಸಂಘದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಶಾಸಕ ಎಂ. ಶ್ರೀನಿವಾಸ್ ಅವರು ಸ್ವಪಕ್ಷದ ಜಿಲ್ಲಾಧ್ಯಕ್ಷ ಡಿ. ರಮೇಶ್ ಅವರ ಕಾರ್ಯವೈಖರಿ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ.

mandya JDS program
ಮಂಡ್ಯದ ಕರ್ನಾಟಕ ಸಂಘದಲ್ಲಿ ನಡೆದ ಜೆಡಿಎಸ್ ಸಭೆ
author img

By

Published : Oct 12, 2021, 12:43 PM IST

Updated : Oct 12, 2021, 12:57 PM IST

ಮಂಡ್ಯ: ಜೆಡಿಎಸ್ ಭದ್ರಕೋಟೆ ಎನಿಸಿರುವ ಮಂಡ್ಯದಲ್ಲಿ ಇದೀಗ ಬಿರುಕು ಮೂಡುವ ಅನುಮಾನ ಕಾಣುತ್ತಿದೆ. ಏಳಕ್ಕೆ ಏಳು ಸ್ಥಾನಗಳನ್ನು ಗೆದ್ದಿದ್ದ ಜೆಡಿಎಸ್‌ನಿಂದ ಓರ್ವ ಶಾಸಕ ಈಗಾಗಲೇ ತೆನೆ ತೊರೆದು ಕಮಲ ಹಿಡಿದಿದ್ದಾರೆ. ಇದೀಗ ಜೆಡಿಎಸ್ ಶಾಸಕ ಸಹ ಸ್ವಪಕ್ಷದವರ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಜೆಡಿಎಸ್ ಭದ್ರಕೋಟೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಕೆ.ಆರ್‌. ಪೇಟೆಯ ಕೆ.ಸಿ. ನಾರಾಯಣಗೌಡ ಅವರು ಮಾಜಿ ಸಿಎಂ ಕುಮಾರಸ್ವಾಮಿಗೆ ಶಾಕ್‌ ನೀಡಿದ್ದರು. ಇದೀಗ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಶ್ರೀನಿವಾಸ್ ತಮ್ಮ ಮನಸ್ಸಿನ ಕೆಲ ನೋವನ್ನು ಬಹಿರಂಗ ಸಭೆಯಲ್ಲಿ ಹೊರ ಹಾಕುವ ಮೂಲಕ ತೆನೆ ಕೆಳಗಿಳಿಸುವ ಮುನ್ಸೂಚನೆ ನೀಡಿದ್ರಾ ಎಂಬ ಅನುಮಾನ ಮೂಡಿದೆ.

ಮಂಡ್ಯದ ಕರ್ನಾಟಕ ಸಂಘದಲ್ಲಿ ನಡೆದ ಜೆಡಿಎಸ್ ಸಭೆ

ಸ್ವಪಕ್ಷದ ಜಿಲ್ಲಾಧ್ಯಕ್ಷರ ಬಗ್ಗೆ ಅಸಮಾಧಾನ:

ಇತ್ತೀಚೆಗೆ ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು, ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಅವರು ಜೆಡಿಎಸ್ ಅಭ್ಯರ್ಥಿಗಳಿಗೆ ಮಿಷನ್-123 ಹಾಗೂ ಪಂಚರತ್ನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡುವ ಮೂಲಕ ಮುಂಬರುವ ಚುನಾವಣೆಯ ಅಭ್ಯರ್ಥಿಗಳನ್ನು ಗುರುತಿಸಲು ಮೆಂಬರ್​ಶಿಫ್ ಟಾಸ್ಕ್ ನೀಡಿದ್ದಾರೆ. ಆದ್ರೆ ಮಂಡ್ಯದಲ್ಲಿ ಜಿಲ್ಲಾಧ್ಯಕ್ಷರು ಸರಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿಲ್ಲ. ಯಾವ ಸಭೆಗಳಿಗೂ ಸರಿಯಾಗಿ ಹಾಜರಾಗುವುದಿಲ್ಲ. ಆತನ ಬಗ್ಗೆ ‌ನನಗೆ ತುಂಬಾ ನೋವಿದೆ. ಆದ್ರೆ ನಾನು ಯಾರ ಬಳಿಯೂ ಹೇಳಿಕೊಂಡಿಲ್ಲ ಎಂದು ಜಿಲ್ಲಾಧ್ಯಕ್ಷ ಡಿ. ರಮೇಶ್ ಬಗ್ಗೆ ಮಂಡ್ಯದ ಕರ್ನಾಟಕ ಸಂಘದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಬೇಸರ ಹೊರಹಾಕಿದರು.

ಇದನ್ನೂ ಓದಿ: ಬದುಕಿಗೆ ಆಸರೆಯಾದ ಸ್ವ-ಸಹಾಯ ಸಂಘಗಳು.. ಬಾಗಲಕೋಟೆಯ ಗ್ರಾಮೀಣ ಮಹಿಳೆಯರೀಗ ಸಬಲೆಯರು

ಜಿಲ್ಲೆಗೆ ಜೆಡಿಎಸ್ ಮುಖಂಡರು ಬಂದ್ರೆ ಇಲ್ಲಿ ಸೂಕ್ತ ಕಚೇರಿ ಇಲ್ಲ. ಬೇರೆ ಪಕ್ಷದವರು ಜಿಲ್ಲೆಗೆ ಬಂದ್ರೆ ತಮ್ಮ ಕಚೇರಿಗೆ ಹೋಗಿ ಬರುತ್ತಾರೆ. ಆದ್ರೆ ನಮ್ಮ ಪಕ್ಷದವರು ಬಂದ್ರೆ ಐಬಿಗೆ ಹೋಗುತ್ತಾರೆ. ಇವರೆಂತಾ ಜಿಲ್ಲಾಧ್ಯಕ್ಷರು? ಎಂದ ಶ್ರೀನಿವಾಸ್​, ಮಂಡ್ಯ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯಿಂದ ವಂಚಿತವಾಗಿದೆ. ಇನ್ನೂ ದೊಡ್ಡ ಹಳ್ಳಿಯಂತೆಯೇ ಇದೆ. ಈ ಬಗ್ಗೆ ಗೌಡರಿಗೆ ಸುದೀರ್ಘ ಪತ್ರ ಬರೆಯುವುದಾಗಿ ಹೇಳಿದರು.

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಮಾಡಿ:

ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ತಗ್ಗಳ್ಳಿ ವೆಂಕಟೇಶ್ ಮಾತನಾಡಿ, ಕೆರಗೋಡಿನಲ್ಲಿ ಶಾಸಕರನ್ನ ಬಿಟ್ಟು ಸದಸ್ಯತ್ವ ಸಭೆ ನಡೆಸಬೇಕಿತ್ತಾ‌? ಇದು ಮಂಡ್ಯ ಕ್ಷೇತ್ರದ ಜನತೆಗೆ ಮಾಡಿದ ಅವಮಾನ. ಪಕ್ಷ ಅಂದ್ರೆ ಒಬ್ರೇನಾ? ಮೊದಲು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಮಾಡಿ ಎಂದು ಪಟ್ಟು ಹಿಡಿಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

Last Updated : Oct 12, 2021, 12:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.