ETV Bharat / state

ಐಟಿ ರೇಡ್ ಆತಂಕದಲ್ಲೂ ಸಾವಿನ‌ ಮನೆಗೆ ತೆರಳಿದ ಸಚಿವ - Mandya

ಸಿಎಂ ಕುಮಾರಸ್ವಾಮಿ ಹೇಳಿಕೆ ಬೆನ್ನಲ್ಲೇ ಸಣ್ಣ ನೀರಾವರಿ ಸಚಿವ ಸಿ.ಎಸ್ ಪುಟ್ಟರಾಜು ಸೇರಿದಂತೆ ರಾಜ್ಯದ 10ಕ್ಕೂ ಹೆಚ್ಚು ಕಡೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇದ್ಯಾವುದಕ್ಕೂ ಅಂಜದೇ ಸಚಿವ ಪುಟ್ಟರಾಜು ಮೃತ ವ್ಯಕ್ತಿಯ ಅಂತಿಮ ದರ್ಶನ ಪಡೆಯಲು ತೆರಳಿ ಅಚ್ಚರಿ ಮೂಡಿಸಿದ್ದಾರೆ.

ಕ್ಷೇತ್ರದ ವ್ಯಕ್ತಿಯೊಬ್ಬರ ಅಂತಿಮ ದರ್ಶನ ಪಡೆಯಲು ಬಂದ ಸಚಿವ ಸಿಎಸ್ ಪುಟ್ಟರಾಜು
author img

By

Published : Mar 28, 2019, 3:06 PM IST

ಮಂಡ್ಯ: ರಾಜ್ಯದ ಹಲವೆಡೆ ಇಂದು ಐಟಿ ದಾಳಿ ಮುಂದುವರಿದಿದೆ. ಇತ್ತ ಐಟಿ ಅಧಿಕಾರಿಗಳ ದಾಳಿಯ ಆತಂಕದ ನಡುವೆಯೂ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಕ್ಷೇತ್ರದಲ್ಲಿ ಮೃತಪಟ್ಟ ವ್ಯಕ್ತಿಯ ಅಂತಿಮ ದರ್ಶನ ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಐಟಿ ದಾಳಿ ನಡುವೆಯೂ ಕ್ಷೇತ್ರದಲ್ಲಿ ವ್ಯಕ್ತಿಯ ಅಂತಿಮ ದರ್ಶನ ಪಡೆದ ಸಚಿವ ಪುಟ್ಟರಾಜು

ಪಾಂಡವಪುರ ತಾಲೂಕಿನ ಹಿರಿಮರಳಿ ಗ್ರಾಮದಲ್ಲಿ ಆಪ್ತರೆನ್ನಿಸಿಕೊಂಡಿದ್ದ ವ್ಯಕ್ತಿವೋರ್ವ ಮೃತಪಟ್ಟಿದ್ದರು. ಅವರ ಅಂತಿಮ ದರ್ಶನ ಪಡೆದಿದ್ದಲ್ಲದೆ ಮೃತ ವ್ಯಕ್ತಿಯ ಕುಟುಂಬದವರಿಗೆ ಸಾಂತ್ವನ ತಿಳಿಸಿದರು.

ಇನ್ನು ಇತ್ತ ಐಟಿ ಅಧಿಕಾರಿಗಳು ಸಚಿವರ ಮನೆ ಹಾಗೂ ಅವರ ಅಣ್ಣನ ಮಗ ಅಶೋಕ್ ಮನೆಯಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ ಸಚಿವ ಪುಟ್ಟರಾಜು ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ ಎನ್ನಲಾಗ್ತಿದೆ.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.