ETV Bharat / state

ಸಚಿವ ನಾರಾಯಣಗೌಡ ಒಬ್ಬ ಅವಿವೇಕಿ: ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ - ಶಾಸಕ ರವೀಂದ್ರ ಶ್ರೀಕಂಠಯ್ಯ

ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಅಧಿಕಾರಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಅಂತ ನನಗೆ ಕಲಿಸಿಕೊಡಲು ಬರ್ತಾರೆ. ನನ್ನ ಕುಟುಂಬದಲ್ಲಿ ಮೂರು ಜನ ಶಾಸಕರಾಗಿದ್ದಾರೆ. ನಮ್ಮ ತಾತ 1952ರಲ್ಲಿ ಎಂ​ಎಲ್​ಎ ಆಗಿದ್ದು. ಬಹುಶಃ ನಾರಾಯಣಗೌಡ್ರು ಆಗ ಹುಟ್ಟಿರಲಿಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಸಚಿವ ನಾರಾಯಣಗೌಡ ವಿರುದ್ಧ ವ್ಯಂಗ್ಯವಾಡಿದರು.

Minister Narayana Gowda is an idiot raveendra said
ಶಾಸಕ ರವೀಂದ್ರ ಶ್ರೀಕಂಠಯ್ಯ
author img

By

Published : Apr 20, 2021, 7:30 PM IST

ಮಂಡ್ಯ: ನಾರಾಯಣಗೌಡ ಒಬ್ಬ ಅವಿವೇಕಿ. ನನಗೆ ಅಧಿಕಾರಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎಂದು ತಿಳಿಸಲು ಬರ್ತಾನೆ ಎಂದು ಶ್ರೀರಂಗಪಟ್ಟಣದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಸಚಿವ ನಾರಾಯಣಗೌಡ ವಿರುದ್ಧ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಮಂತ್ರಿಗಳಿಗೆ ಅಧಿಕಾರಿಗಳ ಜೊತೆ ನಡೆದುಕೊಳ್ಳಬೇಕು ಅಂತ ಗೊತ್ತಿಲ್ಲ. ಅವರಿಗೆ ವಾರ್ನ್ ಮಾಡಿ ಹೊಗ್ತಾರೆ. ಅವರು ಶಾಸಕರಾಗಿದ್ದಾಗ ಅಧಿಕಾರಿಗಳ ಬಳಿ ಅವಿವೇಕಿಯಂತೆ ವರ್ತಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಚಿವ ನಾರಾಯಣಗೌಡ ವಿರುದ್ಧ ಗುಡುಗಿದ ಶಾಸಕ ರವೀಂದ್ರ ಶ್ರೀಕಂಠಯ್ಯ

ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಅಧಿಕಾರಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಅಂತ ನನಗೆ ಕಲಿಸಿಕೊಡಲು ಬರ್ತಾರೆ. ನನ್ನ ಕುಟುಂಬದಲ್ಲಿ ಮೂರು ಜನ ಶಾಸಕರಾಗಿದ್ದಾರೆ. ನಮ್ಮ ತಾತ 1952ರಲ್ಲಿ ಎಂ​ಎಲ್​ಎ ಆಗಿದ್ದು. ಬಹುಶಃ ನಾರಾಯಣಗೌಡ್ರು ಆಗ ಹುಟ್ಟಿರಲಿಲ್ಲ ಎಂದು ವ್ಯಂಗ್ಯವಾಡಿದರು.

ನಮ್ಮದು ಸಾರ್ವಜನಿಕರ ಬಾಳಿಗಾಗಿ ಬದುಕಿದ ಕುಟುಂಬ: ನಮ್ಮದು ಸಾರ್ವಜನಿಕ ಬದುಕಿಗೆ ಕೊಟ್ಟು ರಾಜಕಾರಣ ಮಾಡಿರೋ ಕುಟುಂಬ. ಸ್ಕೂಲ್, ಆಸ್ಪತ್ರೆಗಳಿಗೆ ದಾನ ಮಾಡಿದಂತ ಕುಟುಂಬ ನಮ್ಮದು. ನಮಗೆ ರಾಜಕಾರಣ ಹೇಳಿಕೊಡುವ ಪ್ರಯತ್ನ ನಾರಾಯಣಗೌಡ ಮಾಡ್ತಿದ್ದಾರೆ ಎಂದರು.

ಇಂಜಿನಿಯರ್​ ಕತ್ತಿಗೆ ಕೈ ಹಾಕಿದ್ದ ನಾರಾಯಣಗೌಡ: ನಾರಾಯಣಗೌಡ್ರ ರೆಕಾರ್ಡ್ ವೈಟ್ ಅನ್ಕೊಂಡಿದ್ದೆ, ಅವರದ್ದು ಯಾವುದೇ ಪ್ರಕರಣಗಳು ಇಲ್ಲ ಅಂತ ತಿಳಿದಿದ್ದೆ. ಆದ್ರೆ ಅತನಿಗೆ ಅಧಿಕಾರಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುವುದೇ ಗೊತ್ತಿಲ್ಲ, ನನಗೆ ಹೇಳೋಕೆ ಬರ್ತಾರೆ. ಒಬ್ಬ ಇಂಜಿನಿಯರ್ ಕತ್ತಿಗೆ ಕೈ ಹಾಕಿ ಹಲ್ಲೆ ಮಾಡ್ತಾರೆ ಎಂದು ವಿಡಿಯೋ ಒಂದನ್ನು ಪ್ರದರ್ಶನ ಮಾಡಿದ್ರು.

ನಾರಾಯಣಗೌಡ ತಹಶೀಲ್ದಾರ್​ಗೆ ಕೆಟ್ಟ ಪದ ಬಳಸಿದ್ದಾರೆ: ತಹಶೀಲ್ದಾರ್ ರತ್ನಮ್ಮ ಎಂಬುವವರಿಗೆ ನಾರಾಯಣಗೌಡ ಸಭೆಯೊಂದರಲ್ಲಿ ಕೆಲವು ಪದ ಬಳಸಿದ್ದಾರೆ. ಸಮಾಜದಲ್ಲಿ ಮಾತನಾಡಬೇಕಾದ್ರೆ ಯಾರ ವಿಚಾರ ಮಾತನಾಡ್ತಿದ್ದೀರಿ ಎಂಬುದನ್ನು ತಿಳಿದು ಗಂಭೀರವಾಗಿ ಮಾತನಾಡಬೇಕು ಎಂದು ತಿವಿದರು.

ಕೆಡಿಪಿ ಸಭೆಯಲ್ಲಿ ಉತ್ತರ ನೀಡುವೆ: ಕೆಡಿಪಿ ಸಭೆ ಹತ್ತಿರ ಬಂದಿದೆ. ಉತ್ತರ ಕೊಡುವದು ಬಹಳ ಇದೆ. ಸಭೆಗೆ ಸಭ್ಯವಾಗಿ ಬರಬೇಕು, ಬಂದು ರೌಡಿ ಥರ ಮಾಡಿದ್ರೆ ಅದನ್ನೆಲ್ಲ ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳೋಕೆ ಆಗೋದಿಲ್ಲ ಎಂದು ಗುಡುಗಿದರು.

ಮುಖ್ಯಮಂತ್ರಿ ‌ಒಳ್ಳೆಯವರು: ನೀವು ಹೊಸದಾಗಿ ಏನೂ ಮಾಡಿಲ್ಲ, ಮುಖ್ಯಮಂತ್ರಿ ಒಳ್ಳೆಯವರಿದ್ದಾರೆ. ಅವರನ್ನು ಬಳಸಿಕೊಳ್ಳುವ ಗುಣ ನಿಮ್ಮಲ್ಲಿ ಇಲ್ಲ. ನಿಮಗೆ ಮಾನಸಿಕ ಒತ್ತಡ ಜಾಸ್ತಿಯಾಗಿದೆ. ಅದಕ್ಕೆ ಎನು ಕಾರಣ ಅಂತಾ ಮಾಧ್ಯಮದವರು ತೋರಿಸ್ತಾರೆ, ನಾನು ಹೇಳಬೇಕಾಗಿಲ್ಲ. ನೀವು ರವೀಂದ್ರ ಶ್ರೀಕಂಠಯ್ಯ ಬಗ್ಗೆ ಮಾತನಾಡುವುದಾದರೆ ಸ್ವಲ್ಪ ವಿವೇಕದಲ್ಲಿ ಮಾತನಾಡಬೇಕು ಎಂದು ಸಚಿವರ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.