ETV Bharat / state

ಮಂಡ್ಯದಲ್ಲಿ ಸಚಿವ ಸಿ.ಪಿ. ಯೋಗೇಶ್ವರ್ ಸಭೆ; ಸ್ಥಳೀಯ ಶಾಸಕರಿಗೇ ಆಹ್ವಾ‌ನ ನೀಡಿಲ್ಲವಂತೆ!

author img

By

Published : Mar 13, 2021, 2:06 PM IST

ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ಸ್ಥಳೀಯ ಶಾಸಕರಿಗೆ ಆಹ್ವಾ‌ನ ನೀಡದೆ ಸಭೆ ನಡೆಸಲಿದ್ದಾರೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದ್ದಾರೆ.

Minister C.P. Yogeshwar
ಸಚಿವ ಸಿ.ಪಿ. ಯೋಗೇಶ್ವರ್

ಮಂಡ್ಯ: ಮಾದರಿ KRS ಅಭಿವೃದ್ಧಿ ಯೋಜನೆಗೆ ಅಧಿಕಾರಿಗಳೊಂದಿಗೆ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಸಭೆ ನಡೆಸಲಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ KRS ಯೋಜನೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಆರಂಭಿಸಲು ಉದ್ದೇಶಿಸಿದ್ದ ಡಿಸ್ನಿಲ್ಯಾಂಡ್ ಯೋಜನೆಗೆ ರೈತ ಸಂಘ ಸೇರಿದಂತೆ ಹಲವು ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿಗೆ ಬಿಜೆಪಿ ಸರ್ಕಾರವೂ ಆಸಕ್ತಿ ತೋರಿದ್ದು, ಈ ಕುರಿತಾಗಿ ಇಂದು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದೆ.

ಶಾಸಕ ರವೀಂದ್ರ ಶ್ರೀಕಂಠಯ್ಯ ಎಚ್ಚರಿಕೆ:

ಕಾರೇಕುರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ಸ್ಥಳೀಯ ಶಾಸಕರಿಗೆ ಆಹ್ವಾ‌ನ ನೀಡದೆ ಸಭೆ ನಡೆಸಲಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಚಿವ ಸಿ.ಪಿ.ಯೋಗೀಶ್ವರ್ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ಈ ಯೋಜನೆ ಸಂಬಂಧ ಕೆಲವರು ಸ್ಪೀಡ್ ಇದ್ದಾರೆ. ಯಾರ್ಯಾರು ಯಾವ ಸ್ಪೀಡ್​​​ನಲ್ಲಿದ್ದಾರೋ ಅವರೆಲ್ಲಾ ಇರಲಿ ಎಂದು ಹೇಳಿದರು.

ಇದನ್ನೂ ಓದಿ: ಕೈ ನಾಯಕರು ಶಿವಮೊಗ್ಗ ಜಿಲ್ಲೆ ಪಾಕಿಸ್ತಾನ ಮಾಡಲು ಹೊರಟಿದ್ದಾರೆ: ಸಚಿವ ಶ್ರೀ ರಾಮುಲು ಆರೋಪ

KRS ಭಾಗದ ಜನರಿಗೆ ಅನುಕೂಲ ಮಾಡಿಕೊಟ್ರೆ ನನ್ನ ಬೆಂಬಲ ಅವರಿಗೆ ಇರಲಿದೆ. ಜನರಿಗೆ ಅನುಕೂಲ ಮಾಡಿ ಯೋಜನೆ ಮಾಡಬೇಕು, ಬೇರೆ ಉದ್ದೇಶಗಳಿಗೆ ಟೇಕ್ ಆಫ್ ಮಾಡ್ತೀನಿ ಅಂದ್ರೆ ಅದು ಅಷ್ಟು ಸುಲಭದ ಮಾತಲ್ಲ ಎಂದು ಸಚಿವ ಸಿ.ಪಿ. ಯೋಗೇಶ್ವರ್​ಗೆ ಎಚ್ಚರಿಕೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.