ಮಂಡ್ಯ: ಇಲ್ಲಿನ ಮಿಮ್ಸ್ ಆಸ್ಪತ್ರೆ ಸಿಬ್ಬಂದಿ ಕೋವಿಡ್ ಪಾಸಿಟಿವ್ ಬಂದಿದ್ದ ಮಹಿಳೆಗೆ ನೆಗೆಟಿವ್ ಎಂದು ವರದಿ ನೀಡಿ ಎಡವಟ್ಟು ಮಾಡಿಕೊಂಡಿದೆ. ಆಗಸ್ಟ್ 15ರಂದು ಮಹಿಳೆಗೆ ನೆಗೆಟಿವ್ ಎಂದು ವರದಿ ಬಂದಿದ್ದು, ಎರಡು ದಿನದ ಬಳಿಕ ಅಂದರೆ ಏಪ್ರಿಲ್ 17ರಂದು ಪಾಂಡವಪುರ ಆರೋಗ್ಯಾಧಿಕಾರಿ ಕಚೇರಿಯಿಂದ ನೀಡಲಾಗಿದ್ದ ಪರೀಕ್ಷಾ ವರದಿಯಲ್ಲಿ ಮಹಿಳೆಗೆ ಪಾಸಿಟಿವ್ ಆಗಿರುವುದು ದೃಢವಾಗಿದೆ.
ಆದರೆ ಮಿಮ್ಸ್ ಆಸ್ಪತ್ರೆಯಿಂದ ಮಹಿಳೆ ಮೊಬೈಲ್ಗೆ ಸಂದೇಶ ಸಹ ಬಂದಿದ್ದು, ಅದರಲ್ಲೂ ನೆಗೆಟಿವ್ ಎಂದು ನಮೂದಾಗಿತ್ತು. ಆದರೆ ಆರೋಗ್ಯಾಧಿಕಾರಿ ಕಚೇರಿ ಬಿಡುಗಡೆ ಮಾಡುವ ಪಟ್ಟಿಯಲ್ಲಿ ಪಾಸಿಟಿವ್ ಎಂದು ನೀಡಲಾಗಿದೆ.
ಇದರಿಂದ ಮಹಿಳೆ ಮನೆಗೆ ಆಗಮಿಸಿದ ಆರೋಗ್ಯಾಧಿಕಾರಿ ಕಚೇರಿ ಸಿಬ್ಬಂದಿ ನಿಮಗೆ ಸೋಂಕು ದೃಢವಾಗಿದೆ ಎಂದು ತಿಳಿಸಿದ್ದು, ಆಗ ಮಹಿಳೆ ಬಳಿ ಇದ್ದ ನೆಗೆಟಿವ್ ಪತ್ರ ನೀಡಿದ್ದಾರೆ. ಇದು ಗೊಂದಲ ಮೂಡಿಸಿದ್ದು, ಮಿಮ್ಸ್ ಆಸ್ಪತ್ರೆಯ ಎಡವಟ್ಟನಿಂದ ಪಾಸಿಟಿವ್ ಇದ್ದರೂ ನೆಗೆಟಿವ್ ನೀಡಿರುವುದು ಖಾತ್ರಿಯಾಗಿದೆ.
ಆದರೆ ಮಹಿಳೆ ಈ ಕುರಿತು ವಿರೋಧ ವ್ಯಕ್ತಪಡಿಸಿ, ನನಗೆ ಫಲಿತಾಂಶದಲ್ಲಿ ನೆಗೆಟಿವ್ ಬಂದಿದೆ. ಆದ್ರೆ ಅಧಿಕಾರಿಗಳು ಪಾಸಿಟಿವ್ ಎಂದು ಹೇಳಿಕೊಂಡು ಟಾರ್ಚರ್ ನೀಡುತ್ತಿದ್ದಾರೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಡಿಹೆಚ್‌ಒಗೆ ದೂರು ಸಲ್ಲಿಸಲು ಮುಂದಾಗಿದ್ದರು. ಸದ್ಯ ಈಗ ಮಹಿಳೆ ಹೋಮ್ ಐಸೋಲೇಷನ್ಗೆ ಒಳಗಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.