ETV Bharat / state

ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧ ಗುರು ಅವರ ಪುಣ್ಯಸ್ಮರಣೆ : ಕಣ್ಣೀರಿಟ್ಟ ಕುಟುಂಬಸ್ಥರು - Mandya soldier Guru

ಗುರು ಹುತಾತ್ಮರಾಗಿ ಎರಡು ವರ್ಷ ಕಳೆದಿದ್ದರೂ ಕುಟುಂಬಸ್ಥರು ಮಾತ್ರ ಯೋಧನ ನೆನಪಲ್ಲೇ ಇದ್ದಾರೆ. ವರ್ಷಕ್ಕೆ 2-3 ಬಾರಿಯಾದರೂ ನನ್ನ ಮಗ ಬಂದು ಹೋಗುತ್ತಿದ್ದ ಎಂದು ತಾಯಿ ಮಗನ ಭಾವಚಿತ್ರದ ಮುಂದೆ ಕಣ್ಣೀರು ಹಾಕಿದ್ರೆ, ಪತ್ನಿ ಕಲಾವತಿ ಗುರು ನನಗೆ ಶಕ್ತಿಯಾಗಿದ್ರು ಎಂದು ಭಾವುಕರಾದರು..

Mandya
ಹುತಾತ್ಮ ಯೋಧ ಗುರು ಅವರ ಪುಣ್ಯಸ್ಮರಣೆ: ಕಣ್ಣೀರಿಟ್ಟ ಕುಟುಂಬಸ್ಥರು
author img

By

Published : Feb 14, 2021, 7:09 PM IST

ಮಂಡ್ಯ: ಪುಲ್ವಾಮ ದಾಳಿಯ ಕರಾಳ ದಿನಕ್ಕೆ ಇಂದು 2 ವರ್ಷ ತುಂಬಿದೆ. ಈ ದಾಳಿಯಲ್ಲಿ ಜಿಲ್ಲೆಯ ವೀರ ಯೋಧ ಗುರು ಹುತಾತ್ಮರಾಗಿದ್ದರು. ಈ ಹಿನ್ನೆಲೆ ಹುತಾತ್ಮ ಯೋಧ ಗುರು ಸಮಾಧಿ ಬಳಿ ಸಂಬಂಧಿಕರು, ಸ್ನೇಹಿತರು 2ನೇ‌ ಪುಣ್ಯಸ್ಮರಣೆ ನೆರವೇರಿಸಿದರು. ಈ ವೇಳೆ ಯೋಧ ಗುರು ನೆನೆದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

ಹುತಾತ್ಮ ಯೋಧ ಗುರು ಅವರ ಪುಣ್ಯಸ್ಮರಣೆ.. ಕಣ್ಣೀರಿಟ್ಟ ಕುಟುಂಬಸ್ಥರು

ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಪುಲ್ವಾಮ ದಾಳಿ ನಡೆದು ಇಂದಿಗೆ 2 ವರ್ಷವಾಗಿದೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ 44 ವೀರಯೋಧರ ಬಲಿದಾನ ನೆನೆಯುವ ಕೆಲಸ ದೇಶಾದ್ಯಂತ ನಡೆಯುತ್ತಿದೆ. ಅಂತೆಯೇ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆಎಂ ದೊಡ್ಡಿ ಬಳಿಯಿರುವ ಗುರು ಸಮಾಧಿಗೆ ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರು ಪೂಜೆ ಸಲ್ಲಿಸಿದ್ದಾರೆ.

ಯೋಧ ಗುರು ಹುತಾತ್ಮರಾದ ಬಳಿಕ ಕುಟುಂಬದಲ್ಲಿ ಕಲಹ ಆರಂಭವಾಗಿದೆ. ಗುರು ತಾಯಿ ಹಾಗೂ ಪತ್ನಿ ಬೇರೆ ಬೇರೆಯಾಗಿದ್ದಾರೆ. ಪುಣ್ಯಸ್ಮರಣೆ ವೇಳೆ ಇಬ್ಬರೂ ಪ್ರತ್ಯೇಕವಾಗಿ ಪೂಜೆ ಸಲ್ಲಿಸಿದ್ದಾರೆ‌. ಗುರು ತಾಯಿ ಚಿಕ್ಕತಾಯಮ್ಮ ಪೂಜೆ ಸಲ್ಲಿಸುವ ವೇಳೆ ಪತ್ನಿ ಕಲಾವತಿ ಸಮಾಧಿ ಹಿಂಭಾಗದಲ್ಲಿ ನಿಂತಿದ್ದರು. ಬಳಿಕ ಸಮಾಧಿ ಮುಂದೆ ತ್ರಿವರ್ಣ ಧ್ವಜ ಹಾಗೂ ಗುರು ಅವರ ಸಮವಸ್ತ್ರ ಇಟ್ಟು ಪೂಜೆ ಸಲ್ಲಿಸಿದ್ದಾರೆ.

ಗುರು ಹುತಾತ್ಮರಾಗಿ ಎರಡು ವರ್ಷ ಕಳೆದಿದ್ದರೂ ಕುಟುಂಬಸ್ಥರು ಮಾತ್ರ ಯೋಧನ ನೆನಪಲ್ಲೇ ಇದ್ದಾರೆ. ವರ್ಷಕ್ಕೆ 2-3 ಬಾರಿಯಾದರೂ ನನ್ನ ಮಗ ಬಂದು ಹೋಗುತ್ತಿದ್ದ ಎಂದು ತಾಯಿ ಮಗನ ಭಾವಚಿತ್ರದ ಮುಂದೆ ಕಣ್ಣೀರು ಹಾಕಿದ್ರೆ, ಪತ್ನಿ ಕಲಾವತಿ ಗುರು ನನಗೆ ಶಕ್ತಿಯಾಗಿದ್ರು ಎಂದು ಭಾವುಕರಾದರು.

ಒಂದು ವರ್ಷದಲ್ಲಿ ಹುತಾತ್ಮ ಗುರು ಅವರ ಸ್ಮಾರಕ ನಿರ್ಮಿಸುವುದಾಗಿ ಹೇಳಿದ್ದ ಸರ್ಕಾರ ತನ್ನ ಮಾತು ಮರೆತಂತಿದೆ. ಜಾಗದ ವಿವಾದ, ಕೋವಿಡ್, ಗ್ರಾಪಂ ಚುನಾವಣೆ ಕಾರಣದಿಂದಾಗಿ ಎರಡು ವರ್ಷವಾದರೂ ಸ್ಮಾರಕ ನಿರ್ಮಾಣಕ್ಕೆ ಚಾಲನೆ ದೊರಕಿಲ್ಲ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧನಿಗೆ ಅಗೌರವ ತೋರಲಾಗುತ್ತಿದೆ ಎಂದು ಸ್ಥಳೀಯರು ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಕುಟುಂಬ ಕಲಹ ಒಂದೆಡೆಯಾದರೆ ಸ್ಮಾರಕ ನಿರ್ಮಾಣವಾಗದ ಕೊರಗು ಮತ್ತೊಂದೆಡೆ. ಜಿಲ್ಲಾಡಳಿತ ಕೂಡಲೇ ಕ್ರಮವಹಿಸಿ ಸ್ಮಾರಕ ನಿರ್ಮಾಣ ಮಾಡುವ ಮೂಲಕ ಹುತಾತ್ಮ ಯೋಧನಿಗೆ ಗೌರವ ಸಮರ್ಪಿಸಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.