ETV Bharat / state

ಮಂಡ್ಯ ಕಳ್ಳತನ ಪ್ರಕರಣ: ನಾಲ್ವರ ಬಂಧನ, 26 ಬೈಕ್​ ವಶಕ್ಕೆ ಪಡೆದ ಪೊಲೀಸರು

ಮಂಡ್ಯ ಜಿಲ್ಲೆಯ ನಾನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

Mandya theft case
ಮಂಡ್ಯ ಕಳ್ಳತನ ಪ್ರಕರಣ
author img

By

Published : Jan 17, 2021, 10:15 AM IST

Updated : Jan 17, 2021, 10:08 PM IST

ಮಂಡ್ಯ: ಜಿಲ್ಲೆಯ ನಾನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಬೈಕ್ ಕಳ್ಳತನ ಪ್ರಕರಣ ಭೇದಿಸಿರುವ ಮಂಡ್ಯ ಪೂರ್ವ ಠಾಣೆ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 7.25 ಲಕ್ಷ ಮೌಲ್ಯದ 26 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಮಳವಳ್ಳಿ ತಾಲೂಕಿನ ಹಿಟ್ಟನಹಳ್ಳಿಕೊಪ್ಪಲು ಗ್ರಾಮದ ಶರತ್ (20), ಮಂಡ್ಯ ನಗರದ ಬೀಡಿ ಕಾರ್ಮಿಕರ ಕಾಲೊನಿಯ ಎಸ್.ಸಫಿವುಲ್ಲಾ (32), ರಿಯಾಜ್ ಅಲಿ (19) ಮಂಡ್ಯ ತಾಲೂಕಿನ ಹೊಳಲು ಗ್ರಾಮದ ಹೆಚ್‌.ಎಸ್‌ ಸಂತೋಷ್ (30) ಬಂಧಿತ ಆರೋಪಿಗಳು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧನಂಜಯ್ ಮಾಹಿತಿ ನೀಡಿದರು.

ಆರೋಪಿಗಳ ವಿರುದ್ಧ ಮೈಸೂರು ಜಿಲ್ಲೆಯ ತಿ.ನರಸೀಪುರ, ಬನ್ನೂರು, ಮಂಡ್ಯ ಜಿಲ್ಲೆಯ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನದ 12 ಪ್ರಕರಣಗಳು ದಾಖಲಾಗಿವೆ. ಇನ್ನುಳಿದ ಬೈಕ್‌ಗಳ ವಿವರ ಪಡೆದು ಮಾಹಿತಿ ನೀಡಲಾಗುವುದು ಎಂದರು.

ಮಂಡ್ಯ ಕಳ್ಳತನ ಪ್ರಕರಣ: ನಾಲ್ವರ ಬಂಧನ, 26 ಬೈಕ್​ ವಶಕ್ಕೆ ಪಡೆದ ಪೊಲೀಸರು

ಘಟನೆ ವಿವರ:

ಜ.11ರಂದು ಬೆಳಗ್ಗೆ 5ಗಂಟೆ ಸಮಯದಲ್ಲಿ ಮಂಡ್ಯ ನಗರದ ಸ್ವರ್ಣಸಂದ್ರದ ಪೆಟ್ರೋಲ್ ಬಂಕ್ ಬಳಿ ಬೆಂಗಳೂರು ರಸ್ತೆಯಿಂದ ಗುತ್ತಲು ರಸ್ತೆ ಕಡೆಗೆ ಬೈಕ್‌ನಲ್ಲಿ ಮೂವರು ಅನುಮಾನಾಸ್ಪದವಾಗಿ ರೀತಿಯಲ್ಲಿ ತಿರುಗಾಡುತ್ತಿದ್ದರು. ಗಸ್ತಿನಲ್ಲಿದ್ದ ಪೊಲೀಸರಾದ ವಿ.ಗಿರೀಶ್, ಆನಂದ್ ಅವರನ್ನು ವಿಚಾರಿಸಿದಾಗ ಬೈಕ್‌ನ ದಾಖಲಾತಿ, ಸಮಂಜಸ ಉತ್ತರ ನೀಡದ ಕಾರಣ ಠಾಣೆಗೆ ಕರೆದುಕೊಂಡು ವಿಚಾರಣೆ ನಡೆಸಿದಾಗ ಪ್ರಕರಣದಲ್ಲಿ ಮತ್ತೊಬ್ಬ ಭಾಗಿಯಾಗಿರುವ ವಿಷಯ ಗೊತ್ತಾಗಿದೆ.

ಈ ಕಾರ್ಯಾಚರಣೆಯಲ್ಲಿ ಮಂಡ್ಯ ಉಪವಿಭಾಗದ ಡಿವೈಎಸ್‌ಪಿ ಎಲ್.ನವೀನ್‌ಕುಮಾರ್, ಮಂಡ್ಯ ನಗರ ವೃತ್ತದ ಸಿಪಿಐ ಕೆ.ಸಂತೋಷ್ ಅವರ ನೇತೃತ್ವದಲ್ಲಿ ಪೂರ್ವ ಠಾಣೆ ಪಿಎಸ್‌ಐ ಶರತ್ ಇತರರು ಭಾಗಿಯಾಗಿದ್ದು ಇವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರುಶುರಾಮ ಅವರು ಅಭಿನಂದನೆ ತಿಳಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.

Last Updated : Jan 17, 2021, 10:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.