ETV Bharat / state

ಗೂಡ್ಸ್ ಆಟೋ ಚಾಲಕನ ಕೊಲೆ ಪ್ರಕರಣ: ಸಣ್ಣ ಸುಳಿವು ಸಿಗದಂತೆ ಹತ್ಯೆ ಮಾಡಿದ್ದ ಹಂತಕ ಕೊನೆಗೂ ಖಾಕಿ ಬಲೆಗೆ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಬಳಿ ಗೂಡ್ಸ್ ಆಟೋ ಚಾಲಕ ಕೊಲೆ ಮಾಡಿದ್ದ ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ.

Mandya police arrested accused who murdered goods auto driver
ಗೂಡ್ಸ್ ಆಟೋ ಚಾಲಕನ ಕೊಲೆ ಪ್ರಕರಣ ಆರೋಪಿ ಬಂಧನ
author img

By

Published : Feb 11, 2022, 6:09 PM IST

Updated : Feb 11, 2022, 6:51 PM IST

ಮಂಡ್ಯ: ಒಂದು ಇಯರ್ ಫೋನ್, 25 ಗ್ರಾಂ ಬೆಳ್ಳಿ ಖಡ್ಗದ ಆಸೆಗೆ ಶ್ರೀರಂಗಪಟ್ಟಣದಲ್ಲಿ ಎರಡು ತಿಂಗಳ ಹಿಂದೆ ನಡೆದಿದ್ದ ಗೂಡ್ಸ್ ಆಟೋ ಚಾಲಕನ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಡಿಸೆಂಬರ್ .6ರ ಮಧ್ಯರಾತ್ರಿ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಬಳಿ ಗೂಡ್ಸ್ ಆಟೋ ಚಾಲಕ ಗಜೇಂದ್ರ(25) ಎಂಬುವವರನ್ನು ಹಂತಕ ಹತ್ಯೆ ಮಾಡಿದ್ದನು. ತನಿಖೆ ನಡೆಸಿದ ಪೊಲೀದರು ಹಂತಕ ಸೈಯದ್ ರಫೀಕ್​ನನ್ನು ಕಂಬಿ ಹಿಂದೆ ಕಳುಹಿಸಿದ್ದಾರೆ.

ಸಿಸಿಟಿವಿಯಲ್ಲಿ ಹಂತಕನ ಕೈ ಚಳಕ ಸೆರೆ

ನಡೆದಿದ್ದೇನು?: ಆಟೋ ಚಾಲಕ ಗಜೇಂದ್ರ ಹೊಸಪೇಟೆ ತಾಲೂಕಿನ ಕುಂಬಾರಹಳ್ಳಿಯ ಗ್ರಾಮದವನು. ಹೊಸಪೇಟೆಯಿಂದ ಮೈಸೂರಿಗೆ ತರಕಾರಿ ಸಾಗಿಸುತ್ತಿದ್ದನು. ಅಂದು ಮೈಸೂರಿಗೆ ತೆರಳುವಾಗ ನಿದ್ದೆ ಬಂದ ಕಾರಣ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿ ಬಳಿ ಗೂಡ್ಸ್ ವಾಹನ ನಿಲ್ಲಿಸಿ ನಿದ್ರೆ ಮಾಡುತ್ತಿರುತ್ತಾನೆ. ಈ ವೇಳೆ, ಸೈಯದ್ ರಫೀಕ್ ಆಟೋ ಗಾಜು ಒಡೆದು ಗಂಜೇಂದ್ರನನ್ನು ಮಚ್ಚಿನಿಂದ ಕೊಚ್ಟಿ ಕೊಲೆ ಮಾಡಿದ್ದಾನೆ.

ನಂತರ ಗಜೇಂದ್ರನ ಮೈ ಮೇಲೆ ಇದ್ದ 25 ಗ್ರಾಂ ಬೆಳ್ಳಿ ಖಡ್ಗ ಹಾಗೂ 200 ರೂ. ಮೌಲ್ಯದ ಹೆಡ್ ಫೋನ್ ದೋಚಿ ಪರಾರಿಯಾಗಿದ್ದಾನೆ. ಕೊಲೆಗೆ ಸಂಬಂಧಿಸಿದಂತೆ ಸಣ್ಣ ಸುಳಿವನ್ನು ಆರೋಪಿ ಬಿಟ್ಟಿರಲಿಲ್ಲ. ಈ ಹಿನ್ನೆಲೆ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸವಾಲಾಗಿತ್ತು.

ಹಂತಕನಿಗಾಗಿ ಶೋಧ: ಕೃತ್ಯ ನಡಿದಿದ್ದ ಸ್ಥಳದಿಂದ ಸುಮಾರು 1 ಕಿ.ಮೀ ದೂರದಲ್ಲಿದ್ದ ಸಿಸಿಟಿವಿ ದೃಶ್ಯ ಆಧರಿಸಿ ಹಂತಕನಿಗಾಗಿ ಪೊಲೀಸರು ಶೋಧ ನಡೆಸಿದ್ದರು. ಕೊಲೆಯಾದ ರಾತ್ರಿ ಅದೇ ಸಮಯದಲ್ಲಿ ಬಾಬುರಾಯನಕೊಪ್ಪಲು ಗ್ರಾಮ ರಸ್ತೆಯಲ್ಲಿ ಒಬ್ಬ ವ್ಯಕ್ತಿ ನಡೆದುಕೊಂಡು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅನುಮಾನಗೊಂಡ ಪೊಲೀಸರು ಆತ ಯಾರು ಎಂದು ಪತ್ತೆ ಮಾಡಲು ಮುಂದಾಗಿದ್ದರು.

ತನಿಖೆ ಕೈಗೊಂಡ ಪೊಲೀಸರು ಸೈಯ್ಯದ್ ರಫಿ ಎಲ್ಲಿದ್ದಾನೆ ಎಂದು ಹುಡುಕುವಷ್ಟರಲ್ಲಿ ಆತ ಸರಗಳ್ಳತನ ಮಾಡಿ ರಾಮನಗರ ಜೈಲು ಸೇರಿದ್ದಾನೆ ಎಂದು ತಿಳಿಯುತ್ತದೆ. ಮಂಡ್ಯ ಪೊಲೀಸರು ರಾಮನಗರಕ್ಕೆ ತೆರಳಿ ವಿಶೇಷ ಅನುಮತಿ ಪಡೆದು ರಫಿಯನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಆತ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಸೈಯದ್ ರಫಿ ಒಬ್ಬ ಸೈಕೋ: ಕೊಲೆ ಮಾಡಿರುವ ಸೈಯ್ಯದ್ ರಫಿ ಸೈಕೋ ಆಗಿದ್ದು, ಈ ಹಿಂದೆ ಹಲವು ಅಪರಾಧ ಕೃತ್ಯಗಳನ್ನು ನಡೆಸುವುದರ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತವಾಗಿ ವರ್ತನೆ ಮಾಡಿರುತ್ತಾನೆ. ಶ್ರೀರಂಗಪಟ್ಟಣದ ಬಳಿ ಕೊಲೆ ಮಾಡಿದ ಮರುದಿನವೇ ರಫಿ ರಾಮನಗರದಲ್ಲಿ ರಸ್ತೆಯಲ್ಲಿ ಮಚ್ಚು ಹಿಡಿದು ಓಡಾಡಿರುತ್ತಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೈಕೋ ಮನಸ್ಥಿತಿ ಹೊಂದಿದ್ದ ಸಯ್ಯದ್ ರಫಿ, ಸರಗಳ್ಳತನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಮಗನಿಗಾಗಿ ಪ್ರಾಣತ್ಯಾಗ ಮಾಡಿದ ತಂದೆ.. ವಿಹಾರ ತಂದ ವಿಷಾದದ ಘಟನೆ

Last Updated : Feb 11, 2022, 6:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.