ಮಂಡ್ಯ : ರಾಜ್ಯ ಸಾರಿಗೆ ಸಂಸ್ಥೆಯ ಬಸ್ನಿಂದ ಆಯತಪ್ಪಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿಯಲ್ಲಿ ಸೋಮವಾರ ಸಂಭವಿಸಿತು. ಬಸ್ ಜಕ್ಕನಹಳ್ಳಿಯಿಂದ ಮಂಡ್ಯ ಕಡೆಗೆ ತೆರಳುತ್ತಿದ್ದ ವೇಳೆ ಅವಘಡ ಉಂಟಾಗಿದೆ.
ಹರಕನಹಳ್ಳಿ ಗ್ರಾಮದ ಚೆಲುವೇಗೌಡ ಮೃತರು. ಬಸ್ ರಷ್ ಆಗಿತ್ತು. ಕೆಳಗೆ ಹೇಗೆ ಬಿದ್ದರೆಂಬ ಬಗ್ಗೆ ಮಾಹಿತಿ ದೊರೆತಿಲ್ಲ. ಚಾಲಕ ತಕ್ಷಣ ಬಸ್ ನಿಲ್ಲಿಸಿದರು ಎಂದು ಪ್ರತ್ಯಕ್ಷದರ್ಶಿ ಮಹಿಳೆ ಹೇಳಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಜನರು ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದರು.
ಶಕ್ತಿ ಯೋಜನೆ ಫಜೀತಿ : ಬಸ್ ರಷ್ ಇದ್ದಿದ್ದರಿಂದ ಬಾಗಿಲು ಕಿತ್ತುಬಂದ ಘಟನೆ ಮಂಡ್ಯದ ಮಳವಳ್ಳಿಯಲ್ಲಿ ಇತ್ತೀಚೆಗೆ ನಡೆದಿತ್ತು. ಬಸ್ ಹತ್ತುವ ಮೂಲಕ ನೂಕುನುಗ್ಗಲಾಗಿದ್ದೇ ಘಟನೆಗೆ ಕಾರಣವಾಗಿತ್ತು. ಚಾಮರಾಜನಗರದ ಕೊಳ್ಳೇಗಾಲದಲ್ಲಿಯೂ ಸಹ ಕೆಲವೆಡೆ ಜನರು ಬಸ್ ಏರುವ ಭರದಲ್ಲಿ ಬಾಗಿಲುಗಳು ಕಿತ್ತುಬಂದಿದ್ದವು.
ಕೆಎಸ್ಆರ್ಟಿಸಿ ಬಸ್ ಡಿಕ್ಕಿ ; ಬಾಲಕ ಸಾವು : ಜೂನ್ 15 ರಂದು ಸೈಕಲ್ನಲ್ಲಿ ತೆರಳುತ್ತಿದ್ದ ಬಾಲಕನಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಳವಳ್ಳಿ ಪಟ್ಟಣದ ಕನಕಪುರ ರಸ್ತೆಯಲ್ಲಿ ನಡೆದಿತ್ತು. ಮಳವಳ್ಳಿಯ ವಿನುಶ್ ಗೌಡ(10) ಮೃತ ಬಾಲಕ. ಬಸ್ ಚಾಲಕನ ಅಜಾಗರೂಕ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿತ್ತು. ಇನ್ನು ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಪೊಲೀಸರು ನೀಡಿ ಪರಿಶೀಲನೆ ನಡೆಸಿದ್ದು, ಮಳವಳ್ಳಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ಯದ ನಶೆಯಲ್ಲಿ ಕಾರು ಡಿಕ್ಕಿ : ಪಾರ್ಟಿ ನಂತರ ಸ್ನೇಹಿತರು ಮದ್ಯಪಾನದ ಅಮಲಿನಲ್ಲೇ ಅಜಾಗರೂಕತೆಯಿಂದ ಕಾರಿನಲ್ಲಿ ಚಾಲನೆ ಮಾಡಿದ್ದಕ್ಕೆ ಅಮಾಯಕ ಫುಡ್ ಡೆಲಿವರಿ ಬಾಯ್ ಬಲಿಯಾಗಿದ್ದರು. ಭಾನುವಾರ ತಡರಾತ್ರಿ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಆರ್.ಆರ್. ನಗರ ಮೆಟ್ರೋ ನಿಲ್ದಾಣದ ಬಳಿ ಘಟನೆ ನಡೆದಿದೆ. ಜೊಮ್ಯಾಟೊದಲ್ಲಿ ಫುಡ್ ಡೆಲಿವರಿ ಮಾಡಿಕೊಂಡಿದ್ದ ಹೆಚ್.ಡಿ. ಕೋಟೆ ಮೂಲದ ಪ್ರಸನ್ನ ಕುಮಾರ್ ಮೃತ ದುರ್ದೈವಿ.
ಇದನ್ನೂ ಓದಿ : ಯುವಕರಿಂದ ಸರ್ಕಾರಿ ಬಸ್ ತಡೆದು ಗಲಾಟೆ ಪ್ರಕರಣ.. ಧರ್ಮಸ್ಥಳ ಪೊಲೀಸರಿಂದ ಮೂವರ ಬಂಧನ
ನಶೆಯಲ್ಲಿದ್ದ ಸ್ನೇಹಿತರು ಅಜಾಗರೂಕತೆಯಿಂದ ಕಾರನ್ನು ಓಡಿಸಿ ಬೈಕ್ನಲ್ಲಿ ಹೋಗುತ್ತಿದ್ದ ಪ್ರಸನ್ನ ಕುಮಾರ್ಗೆ ಡಿಕ್ಕಿ ಹೊಡೆದಿದ್ದರು. ಅಪಘಾತದ ನಂತರ ರಕ್ತದ ಮಡುವಿನಲ್ಲಿ ಬಿದ್ದವನನ್ನು ಬಿಟ್ಟು ಪರಾರಿಯಾಗುತ್ತಿದ್ದ ನಾಲ್ವರ ಪೈಕಿ ಚಾಲಕ ವಿನಾಯಕ್ ಎಂಬಾತನನ್ನು ಸ್ಥಳಿಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ : ಸ್ನೇಹಿತರ ಜಾಲಿ ರೈಡ್ಗೆ ಫುಡ್ ಡೆಲಿವರಿ ಬಾಯ್ ಬಲಿ.. ಅಪಘಾತ ಎಸಗಿ ಮೃತದೇಹ 100 ಮೀಟರ್ ಎಳೆದೊಯ್ದರು!