ETV Bharat / state

ಸಂತ್ರಸ್ತರಿಗಾಗಿ ಅಕ್ಕಿ ಕೊಟ್ಟ ಜನ : ವಾಹನ ಸೌಲಭ್ಯ ಕಲ್ಪಿಸದೆ ಅಧಿಕಾರಿಗಳ ನಿರ್ಲಕ್ಷ್ಯ

ಮಂಡ್ಯ ತಾಲೂಕಿನ ಮಾಚಹಳ್ಳಿ, ಹುಲಿಕೆರೆ, ಹುಲಿಕೆರೆ ಕೊಪ್ಪಲು ಹಾಗೂ ಗಿಡದದಾಸಹಳ್ಳಿ ಗ್ರಾಮದ ಸುಮಾರು 300 ಕುಟುಂಬಗಳು ತಮ್ಮ ಪಾಲಿನ ಅನ್ನಭಾಗ್ಯ ಅಕ್ಕಿಯನ್ನು ನಿರಾಶ್ರಿತರಿಗೆ ನೀಡಿದ್ದರು. ಆದ್ರೆ ಅದನ್ನು ಪ್ರವಾಹ ಪೀಡಿತ ಸ್ಥಳಗಳಿಗೆ ತಲುಪಿಸಲು ಸಾಧ್ಯವಾಗದೆ ಜಿಲ್ಲಾಡಳಿತದ ಮೊರೆ ಹೋದರು. ಆದ್ರೆ ಅಕ್ಕಿಯನ್ನ ಸಂತ್ರಸ್ತರಿಗೆ ತಲುಪಿಸಬೇಕಾದ ಜಿಲ್ಲಾಡಳಿತ ವಾಹನ ಸೌಲಭ್ಯ ಕಲ್ಪಿಸದೇ ಗೋಡಾನ್‌ನಲ್ಲೇ ಅಕ್ಕಿ ಉಳಿಸಿಕೊಂಡು ನಿರ್ಲಕ್ಷ್ಯ ತೋರಿದೆ.

ಸಂತ್ರಸ್ತರಿಗಾಗಿ ಅಕ್ಕಿ ಕೊಟ್ಟ ಜನ
author img

By

Published : Aug 22, 2019, 6:07 AM IST

ಮಂಡ್ಯ: ಜಿಲ್ಲೆಯ ಜನತೆ ಒಂದೊತ್ತು ಊಟ ಬಿಟ್ಟು ಅಕ್ಕಿಯನ್ನು ಪ್ರವಾಹ ಸಂತ್ರಸ್ತರಿಗೆ ನೀಡಿದರೆ, ಅದನ್ನ ತಲುಪಿಸಬೇಕಾದ ಅಧಿಕಾರಿಗಳು ಮಾತ್ರ ಬೇಜವಾಬ್ದಾರಿ ತೋರಿದ್ದಾರೆ.

ಸಂತ್ರಸ್ತರಿಗಾಗಿ ಅಕ್ಕಿ ಕೊಟ್ಟ ಜನತೆ

ಮಂಡ್ಯ ತಾಲೂಕಿನ ಮಾಚಹಳ್ಳಿ, ಹುಲಿಕೆರೆ, ಹುಲಿಕೆರೆ ಕೊಪ್ಪಲು ಹಾಗೂ ಗಿಡದದಾಸಹಳ್ಳಿ ಗ್ರಾಮದ ಸುಮಾರು 300 ಕುಟುಂಬಗಳು ತಮ್ಮ ಪಾಲಿನ ಅನ್ನಭಾಗ್ಯ ಅಕ್ಕಿಯನ್ನು ನಿರಾಶ್ರಿತರಿಗೆ ನೀಡಿದ್ದರು. ಆದ್ರೆ ಅದನ್ನು ಪ್ರವಾಹ ಪೀಡಿತ ಸ್ಥಳಗಳಿಗೆ ತಲುಪಿಸಲು ಸಾಧ್ಯವಾಗದೆ ಜಿಲ್ಲಾಡಳಿತದ ಮೊರೆ ಹೋದರು. ಆದ್ರೆ ಅಕ್ಕಿಯನ್ನ ಸಂತ್ರಸ್ತರಿಗೆ ತಲುಪಿಸಬೇಕಾದ ಜಿಲ್ಲಾಡಳಿತ ವಾಹನ ಸೌಲಭ್ಯ ಕಲ್ಪಿಸದೇ ಗೋಡಾನ್‌ನಲ್ಲೇ ಅಕ್ಕಿ ಉಳಿಸಿಕೊಂಡು ನಿರ್ಲಕ್ಷ್ಯ ತೋರಿದೆ.

ಸಂತ್ರಸ್ತರಿಗೆ ನೀಡುವ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಯ ಗೋಡಾನ್‌ನಲ್ಲಿ ಇಡಲಾಗಿದೆ‌. ಇನ್ನೆರೆಡು ದಿನಗಳಲ್ಲಿ ಪಡಿತರ ಬರಲಿದ್ದು ಅನಿವಾರ್ಯವಾಗಿ ಸಂಗ್ರಹಿಸಿದ ಅಕ್ಕಿಯನ್ನು ಸ್ಥಳದಿಂದ ತೆಗೆಯಬೇಕಾಗಿದೆ. ಜಿಲ್ಲಾಧಿಕಾರಿಗಳು ಸಂತ್ರಸ್ತರಿಗೆ ಸಹಾಯ ಹಸ್ತ ಚಾಚುವವರ ಸಹಾಯಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ಆದರೆ ಅವರು ವಾಹನ ಸೌಲಭ್ಯ ಕಲ್ಪಿಸುವ ಇರಾದೆಗೆ ಹೋಗದ ಹಿನ್ನೆಲೆ ಗ್ರಾಮಸ್ಥರು ಏನು ಮಾಡಬೇಕು ಎಂಬ ಚಿಂತೆಯಲ್ಲಿದ್ದಾರೆ.

ಇನ್ನಾದರೂ ಜಿಲ್ಲಾಡಳಿತ, ರಾಜ್ಯ ಸರ್ಕಾರ ಪರಿಹಾರ ಸಾಮಾಗ್ರಿಯನ್ನು ತಲುಪಿಸುವ ಕಾರ್ಯ ಮಾಡಲಿ. ಗೋಡಾನ್‌ನಲ್ಲಿರುವ ಅಕ್ಕಿಗಾಗಿ ವಾಹನ ಸೌಲಭ್ಯ ಕಲ್ಪಿಸಿ, ಸಂತ್ರಸ್ತರ ಸಹಾಯಕ್ಕೆ ನಿಲ್ಲಲಿ ಎಂಬುದು ಜನರ ಆಗ್ರಹವಾಗಿದೆ.

Intro:ಮಂಡ್ಯ: ಜನರಿಗೆ ಇರೋ ಹೃದಯ ವೈಶಾಲ್ಯತೆ ಅಧಿಕಾರಿಗಳಿಗೆ ಇಲ್ಲವಾಯಿತು. ಒಂದೊತ್ತು ಊಟ ಬಿಟ್ಟು ಅಕ್ಕಿಯನ್ನು ಪ್ರವಾಹ ಸಂತ್ರಸ್ತರಿಗೆ ನೀಡಿದರೆ ಅಧಿಕಾರಿಗಳು ಮಾಡಿದ್ದು ಏನು ಗೊತ್ತಾ. ಹಾಗಾದರೆ ಈ ಸ್ಟೋರಿ ಹೇಳ್ತೀವಿ ಕೇಳಿ.

Body:ಮಂಡ್ಯ ತಾಲ್ಲೂಕಿನ ಮಾಚಹಳ್ಳಿ, ಹುಲಿಕೆರೆ, ಹುಲಿಕೆರೆ ಕೊಪ್ಪಲು ಹಾಗೂ ಗಿಡದದಾಸಹಳ್ಳಿ ಗ್ರಾಮದ ಅನ್ನಭಾಗ್ಯ ಫಲಾನುಭವಿಗಳು ತಮ್ಮ ಪಾಲಿನ ಅಕ್ಕಿಯನ್ನು ನಿರಾಶ್ರಿತರಿಗೆ ನೀಡಿದರು. ಸುಮಾರು 300 ಕುಟುಂಬಗಳು 100 ಕ್ವಿಂಟಾಲ್ ಅಕ್ಕಿಯನ್ನು ನಿರಾಶ್ರಿತರಿಗಾಗಿ ಏನೋ ನೀಡಿದರು‌. ಆದರೆ ಅದನ್ನು ಪ್ರವಾಹ ಪೀಡಿತ ಸ್ಥಳಗಳಿಗೆ ತಲುಪಿಸಲು ಸಾಧ್ಯವಾಗದೆ ಜಿಲ್ಲಾಡಳಿತದ ಮೊರೆ ಹೋದರು. ಆದರೆ ಆಗಿದ್ದೇ ಬೇರೆ. ನಿರಾಶ್ರಿತರಿಗೆ ಕಳುಹಿಸಬೇಕಾದ ಜಿಲ್ಲಾಡಳಿತ ವಾಹನ ಸೌಲಭ್ಯ ಕಲ್ಪಿಸದೇ ಗೋಡಾನ್‌ನಲ್ಲೇ ಅಕ್ಕಿ ಉಳಿದುಕೊಂಡಿದೆ.

ಬೈಟ್ : ರಾಜು, ಸ್ಥಳೀಯರು. ( ಕಪ್ಪು ತಲೆಕೂದಲು)

ನಿರಾಶ್ರಿತರಿಗೆ ನೀಡುವ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಯ ಗೋಡಾನ್‌ನಲ್ಲಿ ಇಡಲಾಗಿದೆ‌. ಇನ್ನೆರೆಡು ದಿನಗಳಲ್ಲಿ ಪಡಿತರ ಬರಲಿದ್ದು ಅನಿವಾರ್ಯವಾಗಿ ಸಂಗ್ರಹಿಸಿದ ಅಕ್ಕಿಯನ್ನು ಸ್ಥಳದಿಂದ ತೆಗೆಯಬೇಕಾಗಿದೆ. ಜಿಲ್ಲಾಧಿಕಾರಿಗಳು ನಿರಾಶ್ರಿತರಿಗೆ ಸಹಾಯ ಹಸ್ತ ಚಾಚುವವರ ಸಹಾಯಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ಆದರೆ ಅಧಿಕಾರಿ ವಾಹನ ಸೌಲಭ್ಯ ಕಲ್ಪಿಸುವ ಇರಾದೆಗೆ ಹೋಗದ ಹಿನ್ನಲೆ ಗ್ರಾಮಸ್ಥರು ಏನು ಮಾಡಬೇಕು ಎಂಬ ಚಿಂತೆಯಲ್ಲಿದ್ದಾರೆ.

ಬೈಟ್: ಗಣೇಶ್ ಮೂರ್ತಿ, ಸ್ಥಳೀಯರು.

ಇನ್ನಾದರೂ ಜಿಲ್ಲಾಡಳಿತ, ರಾಜ್ಯ ಸರ್ಕಾರ ಪರಿಹಾರ ಸಾಮಾಗ್ರಿಯನ್ನು ತಲುಪಿಸುವ ಕಾರ್ಯ ಮಾಡಲಿ. ಗೋಡಾನ್‌ನಲ್ಲಿರುವ ಅಕ್ಕಿಗಾಗಿ ವಾಹನ ಸೌಲಭ್ಯ ಕಲ್ಪಿಸಿ, ನಿರಾಶ್ರಿತರ ಸಹಾಯಕ್ಕೆ ನಿಲ್ಲಲ್ಲಿ.

ಯತೀಶ್ ಬಾಬು, ಈಟಿವಿ ಭಾರತ್, ಮಂಡ್ಯ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.