ಮಂಡ್ಯ: ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಮೈಶುಗರ್ ಕಾರ್ಖಾನೆಗೆ ಇಂದು ಮರು ಚಾಲನೆ ನೀಡಲಾಯಿತು. ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ, ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ ಕೆ ಸಿ ನಾರಾಯಣ ಗೌಡ ಕಾರ್ಖಾನೆಯ ಬಾಯ್ಲರ್ಗಳಿಗೆ ಪೂಜೆ ಸಲ್ಲಿಸಿ, ಅಗ್ನಿ ಸ್ಪರ್ಶ ಮಾಡುವ ಮೂಲಕ ಚಾಲನೆ ನೀಡಿದರು.
ಸಚಿವ ಕೆ ಗೋಪಾಲಯ್ಯ ಮಾತನಾಡಿ, ಮೈಶುಗರ್ ಕಾರ್ಖಾನೆ ಪ್ರಾರಂಭವಾಗಬೇಕು ಎಂಬುದು ರೈತರ ಆಶಯವಾಗಿತ್ತು. ಇಂದು ಪೂಜೆ ಸಲ್ಲಿಸಿ ಬಾಯ್ಲರ್ಗೆ ಅಗ್ನಿ ಸ್ಪರ್ಶ ಮಾಡಲಾಗಿದೆ. ಮುಂದಿನ ದಿನದಲ್ಲಿ ಮುಖ್ಯಮಂತ್ರಿಗಳು ಕಾರ್ಖಾನೆಯನ್ನು ಉದ್ಘಾಟಿಸಲಿದ್ದಾರೆ. ಅವರಿಗೆ ಜಿಲ್ಲೆಯ ರೈತರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಇದನ್ನೂ ಓದಿ: ಆದಷ್ಟು ಬೇಗ ಮೈಶುಗರ್ ಕಾರ್ಖಾನೆ ರೀ ಓಪನ್ ಮಾಡಿ : ಸಿಎಂಗೆ ಸಂಸದೆ ಸುಮಲತಾ ಮನವಿ
ಸಂಸದೆ ಸುಮಲತಾ ಪ್ರತಿಕ್ರಿಯಿಸಿ, ಇಂದು ನನಗೆ ಆಗುತ್ತಿರುವ ಸಂತೋಷ ಯಾವತ್ತೂ ಆಗಿಲ್ಲ. ನಾನು ಸಂಸದೆಯಾಗಿ 3 ವರ್ಷಗಳು ಕಳೆದಿವೆ. ಚುನಾವಣೆಯ ವೇಳೆಯಲ್ಲಿ ಮಂಡ್ಯದ ರೈತರಿಗೆ ಮೈಶುಗರ್ ಕಾರ್ಖಾನೆ ಚಾಲನೆ ಮಾಡೇ ಮಾಡಿಸುತ್ತೇನೆಂದು ವಾಗ್ದಾನ ಕೊಟ್ಟಿದ್ದೆ. ಅದು ಇಂದು ಈಡೇರಿದೆ. ನನಗೆ ಸರ್ಕಾರದಿಂದ ಸಾಕಷ್ಟು ಸಹಕಾರ ಸಿಕ್ಕಿದೆ. ಅಂಬರೀಶ್ ಅವರ ಕನಸು ಇದಾಗಿತ್ತು. ಎಷ್ಟೋ ವರ್ಷಗಳ ಹೋರಾಟದ ಫಲವಿದು ಎಂದು ಹೇಳಿದರು.