ETV Bharat / state

ಮಂದಿರ,ಮಸೀದಿ,ಚರ್ಚ್‌ಗಳು ನಾಳೆಯಿಂದ ಓಪನ್.. ಭಕ್ತರಿಗಾಗಿ ಆಡಳಿತ ಮಂಡಳಿಯಿಂದ ಎಲ್ಲ ಸಿದ್ಧತೆ - ದೇವಾಲಯದಲ್ಲಿ ದೇವರ ದರ್ಶನಕ್ಕೆ ಸಕಲ ಸಿದ್ಧತೆ

ಶ್ರೀರಂಗಪಟ್ಟಣದ ನಿಮಿಷಾಂಭ ಹಾಗೂ ಶ್ರೀರಂಗನಾಥ ದೇವಾಲಯದಲ್ಲಿ ದೇವರ ದರ್ಶನಕ್ಕೆ ಸಕಲ ಸಿದ್ಧತೆ ಮಾಡಿರುವ ಆಡಳಿತ ಮಂಡಳಿ, ಭಕ್ತರ ನಡುವೆ ಅಂತರ ಕಾಯ್ದುಕೊಳ್ಳಲು ವೃತ್ತಗಳನ್ನು ನಿರ್ಮಾಣ ಮಾಡಿದೆ.

mandya mass prayer, the governing body in anticipation devotees
ಸಾಮೂಹಿಕ ಪ್ರಾರ್ಥನೆಗೆ ಗುಡಿ ಗೋಪುರಗಳಿಗೆ ಅಂತಿಮ ಟಚ್, ಭಕ್ತರ ನಿರೀಕ್ಷೆಯಲ್ಲಿ ಆಡಳಿತ ಮಂಡಳಿ
author img

By

Published : Jun 7, 2020, 8:45 PM IST

ಮಂಡ್ಯ : ಸರ್ಕಾರ ದೇವಸ್ಥಾನ, ಚರ್ಚ್ ಹಾಗೂ ಮಸೀದಿಯಲ್ಲಿ ಪ್ರಾರ್ಥನೆಗೆ ಅವಕಾಶ ಕೊಟ್ಟಿರುವ ಹಿನ್ನೆಲೆ ಜಿಲ್ಲೆಯ ಎಲ್ಲಾ ಕಡೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಜರ್ ಬಳಕೆಗೆ ರೂಪುರೇಷೆ ಸಿದ್ಧ ಮಾಡಲಾಗುತ್ತಿದೆ.

ಇತಿಹಾಸ ಪ್ರಸಿದ್ಧ ಮೇಲುಕೋಟೆ ಚೆಲುವ ನಾರಾಯಣ ಹಾಗೂ ಯೋಗ ನರಸಿಂಹಸ್ವಾಮಿ ದೇವಾಲಯಗಳಲ್ಲಿ ಭಕ್ತರಿಗಾಗಿ ಸಿದ್ಧತೆ ಮಾಡಲಾಗುತ್ತಿದೆ. ದೇವಸ್ಥಾನದ ಸಿಬ್ಬಂದಿಗೆ ತರಬೇತಿ ಹಾಗೂ ಮಾಹಿತಿ ನೀಡಿ ಭಕ್ತರಿಗೆ ತೊಂದರೆ ಆಗದಂತೆ ಸೌಲಭ್ಯ ಒದಗಿಸಲು ಮಾಹಿತಿ ನೀಡಲಾಗುತ್ತಿದೆ. ಶ್ರೀರಂಗಪಟ್ಟಣದ ನಿಮಿಷಾಂಭ ಹಾಗೂ ಶ್ರೀರಂಗನಾಥ ದೇವಾಲಯದಲ್ಲಿ ದೇವರ ದರ್ಶನಕ್ಕೆ ಸಕಲ ಸಿದ್ಧತೆ ಮಾಡಿರುವ ಆಡಳಿತ ಮಂಡಳಿ, ಭಕ್ತರ ನಡುವೆ ಅಂತರ ಕಾಯ್ದುಕೊಳ್ಳಲು ವೃತ್ತಗಳನ್ನು ನಿರ್ಮಾಣ ಮಾಡಿದೆ.

ಇದರ ಜೊತೆಗೆ ದೇವಾಲಯದ ಆವರಣವನ್ನ ಶುಚಿತ್ವ ಮಾಡಲಾಗುತ್ತಿದೆ. ದೇವಾಲಯಗಳ ಜೊತೆಗೆ ಜಿಲ್ಲೆಯ ಮಸೀದಿ ಹಾಗೂ ಚರ್ಚ್‌ಗಳಲ್ಲೂ ಪ್ರಾರ್ಥನೆಗೆ ಪೂರ್ವ ಸಿದ್ಧತೆ ಮಾಡಲಾಗುತ್ತಿದೆ. ಸಾಮಾಜಿಕ ಅಂತರಕ್ಕಾಗಿ ಚೌಕಾಕಾರದಲ್ಲಿ ಗುರುತು ಮಾಡಲಾಗಿದೆ. ಆ ಪ್ರದೇಶದಲ್ಲೇ ಪ್ರಾರ್ಥನೆ ಸಲ್ಲಿಸುವಂತೆ ಮನವಿ ಮಾಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.