ETV Bharat / state

ಮುಚ್ಚಿದ ಲಕೋಟೆಯಲ್ಲಿ ಮಂಡ್ಯ ಮನ್​ಮುಲ್​ ಚುನಾವಣೆ ಫಲಿತಾಂಶ : ಹೆಚ್ಚಿದ ಕುತೂಹಲ!!

ಕುತೂಹಲ ಮೂಡಿಸಿದ್ದ ಮಂಡ್ಯ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಪ್ರಕರಣ ಹೈಕೋರ್ಟ್‌ನಲ್ಲಿ ಇರುವುದರಿಂದ ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶ ಸುರಕ್ಷಿತವಾಗಿ ಉಳಿದುಕೊಂಡಿದೆ. ಹೈ ಕೋರ್ಟ್ ತೀರ್ಮಾನಕ್ಕೆ ಅನುಗುಣವಾಗಿ ಫಲಿತಾಂಶ ಪ್ರಕಟವಾಗಲಿದ್ದು, ಜೆಡಿಎಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಚುನಾವಣೆ ಈ ಹಿನ್ನೆಲೆಯಲ್ಲಿ ಭಾರೀ ಮಹತ್ವ ಪಡೆದುಕೊಂಡಿದೆ. ‌

ಮುಚ್ಚಿದ ಲಕೋಟೆಯಲ್ಲಿ ಮಂಡ್ಯ ಮನ್​ಮುಲ್​ ಚುನಾವಣೆ ಫಲಿತಾಂಶ ಭದ್ರ
author img

By

Published : Sep 23, 2019, 7:55 PM IST

ಮಂಡ್ಯ: ತೀವ್ರ ಕುತೂಹಲ ಮೂಡಿಸಿದ್ದ ಮಂಡ್ಯ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಪ್ರಕರಣ ಹೈಕೋರ್ಟ್‌ನಲ್ಲಿ ಇರುವುದರಿಂದ ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶ ಸುರಕ್ಷಿತವಾಗಿ ಉಳಿದುಕೊಂಡಿದೆ. ಹೈಕೋರ್ಟ್ ತೀರ್ಮಾನಕ್ಕೆ ಅನುಗುಣವಾಗಿ ಫಲಿತಾಂಶ ಪ್ರಕಟವಾಗಲಿದ್ದು, ಜೆಡಿಎಸ್‌ಗೆ ಪ್ರತಿಷ್ಠೆಯ ಸ್ಥಾನ ಕೈ ತಪ್ಪುವ ಸಾಧ್ಯತೆ ಹೆಚ್ಚಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ‌

ಮುಚ್ಚಿದ ಲಕೋಟೆಯಲ್ಲಿ ಮಂಡ್ಯ ಮನ್​ಮುಲ್​ ಚುನಾವಣೆ ಫಲಿತಾಂಶ ಭದ್ರ

ಮನ್‌ಮುಲ್ ಅಧಿಕಾರ ಹಿಡಿಯಲು ಜಿಲ್ಲೆಯ ಎಲ್ಲ ಜೆಡಿಎಸ್ ಶಾಸಕರು ಒಗ್ಗಟ್ಟು ಪ್ರದರ್ಶನ ಮಾಡಿದರು. ಆದರೆ, ಸರ್ಕಾರಿ ಮತಗಳು, ಜೆಡಿಎಸ್ ಸದಸ್ಯನೊಬ್ಬ ಬಿಜೆಪಿ ಸೇರಿದ್ದು ಹಾಗೂ ಕಾಂಗ್ರೆಸ್ ಬೆಂಬಲಿತರು ಬಿಜೆಪಿ ಬೆಂಬಲಿಗನ ಜೊತೆ ಕಾಣಿಸಿಕೊಂಡಿದ್ದು, ಫಲಿತಾಂಶದ ಕುರಿತು ಕುತೂಹಲ ಹೆಚ್ಚಿಸಿದೆ. ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಮಳವಳ್ಳಿ ವಿಶ್ವನಾಥ್ ನಾಮಪತ್ರ ಸಲ್ಲಿಸಿದರೆ, ಬಿಜೆಪಿ ಬೆಂಬಲಿತರಾಗಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ ಎಸ್‌.ಪಿ.ಸ್ವಾಮಿ ನಾಮಪತ್ರ ಸಲ್ಲಿದ್ದರು. ಚುನಾವಣೆ ಅಖಾಡದಲ್ಲಿ ಜೆಡಿಎಸ್‌ನ ಎಲ್ಲಾ 5 ಮಂದಿ ಶಾಸಕರು ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಅಲ್ಲದೇ ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಸ್‌.ಪಿ.ಸ್ವಾಮಿ ಜೊತೆ ಜಿಲ್ಲೆಯ ಪ್ರಮುಖ ಬಿಜೆಪಿ ಮುಖಂಡರು ಆಗಮಿಸಿ ಬೆಂಬಲ ಸೂಚಿಸಿದರು. ಬಿಜೆಪಿಯ ಎರಡೂ ಮತಗಳು ತಮ್ಮ ಬೆಂಬಲಿತ ಅಭ್ಯರ್ಥಿ ಪರ ಹಾಕಿಸಲು ಹರಸಾಹಸ ಪಟ್ಟರು. ಇನ್ನು ನಿರ್ದೇಶಕರಾದ ನೆಲ್ಲಿಗೆರೆ ಬಾಲಕೃಷ್ಣ, ಹೆಚ್.ಟಿ. ಮಂಜುನಾಥ್ ಆಯ್ಕೆ ಕುರಿತು ಪ್ರಕರಣ ಹೈ ಕೋರ್ಟ್‌ನಲ್ಲಿ ಇರುವುದರಿಂದ ಫಲಿತಾಂಶ ಪ್ರಕಟವಾಗಲಿಲ್ಲ. ಒಟ್ಟಿನಲ್ಲಿ ಸದ್ಯ ಎಲ್ಲರ ಚಿತ್ತ ಮಂಡ್ಯ ಹಾಲು ಒಕ್ಕೂಟದ ಅಧ್ಯಕ್ಷ ಗಾದಿಯತ್ತ ನೆಟ್ಟಿದೆ.

Intro:ಮಂಡ್ಯ: ಕುತೂಹಲ ಮೂಡಿಸಿದ್ದ ಮಂಡ್ಯ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ. ಆದರೆ ಪ್ರಕರಣ ಕೋರ್ಟ್‌ನಲ್ಲಿ ಇರೋದರಿಂದ ಸೀಲ್ಡ್ ಕವರ್‌ನಲ್ಲಿ ಫಲಿತಾಂಶ ಸೇಫ್ ಆಗಿ ಉಳಿದುಕೊಂಡಿದೆ. ಹೈ ಕೋರ್ಟ್ ತೀರ್ಮಾನಕ್ಕೆ ಅನುಗುಣವಾಗಿ ಫಲಿತಾಂಶ ಪ್ರಕಟವಾಗಲಿದ್ದು, ಜೆಡಿಎಸ್‌ಗೆ ಪ್ರತಿಷ್ಠೆಯ ಸ್ಥಾನ ಕೈ ತಪ್ಪುವ ಸಾಧ್ಯತೆ ಹೆಚ್ಚಾಗಿದೆ‌.

Body:ಮನ್‌ಮುಲ್ ಅಧಿಕಾರ ಹಿಡಿಯಲು ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರು ಒಗ್ಗಟ್ಟು ಪ್ರದರ್ಶನ ಮಾಡಿದರು. ಆದರೆ ಸರ್ಕಾರಿ ಮತಗಳು, ಜೆಡಿಎಸ್ ಸದಸ್ಯನೊಬ್ಬ ಬಿಜೆಪಿ ಸೇರಿದ್ದು ಹಾಗೂ ಕಾಂಗ್ರೆಸ್ ಬೆಂಬಲಿತರು ಬಿಜೆಪಿ ಬೆಂಬಲಿಗನ ಜೊತೆ ಕಾಣಿಸಿಕೊಂಡಿದ್ದು ಫಲಿತಾಂಶ ಕುತೂಹಲ ಮೂಡಿಸಿದೆ. ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಮಳವಳ್ಳಿ ವಿಶ್ವನಾಥ್ ನಾಮಪತ್ರ ಸಲ್ಲಿಸಿದರೆ, ಬಿಜೆಪಿ ಬೆಂಬಲಿತರಾಗಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ ಎಸ್‌.ಪಿ ಸ್ವಾಮಿ ಚುನಾವಣಾಧಿಕಾರಿ ಬಳಿ ನಾಮಪತ್ರ ಸಲ್ಲಿದ್ದರು. ಚುನಾವಣೆ ಅಖಾಡದಲ್ಲಿ ಜೆಡಿಎಸ್‌ನ ಎಲ್ಲಾ ಐದು ಮಂದಿ ಜೆಡಿಎಸ್ ಶಾಸಕರು ಕಾಣಿಸಿಕೊಂಡಿದ್ದು ವಿಶೇಷ. ಅಲ್ಲದೆ ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೈಟ್: ಸಿ.ಎಸ್. ಪುಟ್ಟರಾಜು, ಮಾಜಿ ಸಚಿವ.

ಇನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಸ್‌.ಪಿ ಸ್ವಾಮಿ ಜೊತೆ ಜಿಲ್ಲೆಯ ಪ್ರಮುಖ ಬಿಜೆಪಿ ಮುಖಂಡರು ಆಗಮಿಸಿ ಬೆಂಬಲ ಸೂಚಿಸಿದ್ದರು. ಬಿಜೆಪಿಯ ಎರಡೂ ಮತಗಳು ತಮ್ಮ ಬೆಂಬಲಿತ ಅಭ್ಯರ್ಥಿ ಪರ ಹಾಕಿಸಲು ಹರಸಾಹಸ ಪಟ್ಟರು. ಮಧ್ಯಾಹ್ನ ಮತದಾನ ನಡೆದಿದ್ದು, ಫಲಿತಾಂಶ ನಾಳೆ ಬರುವ ಸಾಧ್ಯತೆ ಇದೆ. ಇನ್ನು ನಿರ್ದೇಶಕರಾದ ನೆಲ್ಲಿಗೆರೆ ಬಾಲಕೃಷ್ಣ, ಎಚ್.ಟಿ. ಮಂಜುನಾಥ್ ಆಯ್ಕೆ ಕುರಿತು ಪ್ರಕರಣ ಕೋರ್ಟ್‌ನಲ್ಲಿ ಇರೋದರಿಂದ ಫಲಿತಾಂಶ ಪ್ರಕಟವಾಗಲಿಲ್ಲ.

ಬೈಟ್: ಎಸ್.ಪಿ ಸ್ವಾಮಿ, ಅಧ್ಯಕ್ಷ ಸ್ಥಾನದ ಸ್ಪರ್ಧಿ.

ಅಂದೂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಫಲಿತಾಂಶ ಕೋರ್ಟ್ ತೀರ್ಮಾನದ ನಂತರ ಹೊರ ಬರಲಿದೆ. ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಚಿತ್ತ ಕೋರ್ಟ್ ತೀರ್ಪಿನತ್ತ ಇದೆ.

ಯತೀಶ್ ಬಾಬು, ಮಂಡ್ಯ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.