ETV Bharat / state

ಮಂಡ್ಯದಲ್ಲಿ 1,110 ಜನರಿಗೆ ಕೋವಿಡ್ ಪಾಸಿಟಿವ್ : 11 ಮಂದಿ ಮಹಾಮಾರಿಗೆ ಬಲಿ

ಮಂಡ್ಯ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಜಿಲ್ಲಾಡಳಿತ ಆತಂಕ ವ್ಯಕ್ತಪಡಿಸಿದೆ. ಶುಕ್ರವಾರ ಹೊಸದಾಗಿ ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದರೆ, 11 ಜನ ಸಾವನ್ನಪ್ಪಿದ್ದಾರೆ.

Mandya District Covid Update
ಮಂಡ್ಯ ಕೋವಿಡ್ ಕೇಸ್
author img

By

Published : May 8, 2021, 6:36 AM IST

ಮಂಡ್ಯ : ಜಿಲ್ಲೆಯಲ್ಲಿ ಶುಕ್ರವಾರ ಹೊಸದಾಗಿ 1,110 ಜನರಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದು, 11 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 39,255 ಕ್ಕೆ ಏರಿಕೆ ಆಗಿದ್ದು, ಶುಕ್ರವಾರ 1,384 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೆ ಒಟ್ಟು 30,863 ಮಂದಿ ಚೇತರಿಸಿಗೊಂಡಿದ್ದಾರೆ.

ಸದ್ಯ, 8,132 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ 258 ಸೋಂಕಿನಿಂದ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚಳವಾಗಿರುವುದರಿಂದ ಜಿಲ್ಲಾಡಳಿತಕ್ಕೆ ಆತಂಕ ಶುರುವಾಗಿದೆ.

Mandya District Covid Update
ಆರೋಗ್ಯ ಇಲಾಖೆಯ ಹೆಲ್ತ್​ ಬುಲೆಟಿನ್

ತಾಲೂಕುವಾರು ದಾಖಲಾದ ಹೊಸ ಪ್ರಕರಣಗಳು :
ಮಂಡ್ಯ 308, ಮದ್ದೂರು 176, ಮಳವಳ್ಳಿ 105, ಪಾಂಡವಪುರ 120, ಶ್ರೀರಂಗಪಟ್ಟಣ 172, ಕೆ.ಆರ್. ಪೇಟೆ 124, ನಾಗಮಂಗಲ 96, ಹೊರ ಜಿಲ್ಲೆಯ 9 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದಿದೆ.

ಓದಿ : ಒಂದೇ ಗ್ರಾಮದಲ್ಲಿ 62ಕ್ಕೂ ಹೆಚ್ಚು ಜನರಿಗೆ ಕೊರೊನಾ: ಸೋಂಕಿತರೆಲ್ಲರೂ ವಲಸೆ ಕಾರ್ಮಿಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.