ಮಂಡ್ಯ : ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದು, ಭಾನುವಾರ 338 ಹೊಸ ಪ್ರಕರಣಗಳು ವರದಿಯಾಗಿವೆ. ಓರ್ವ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಸದ್ಯ ಒಟ್ಟು ಸೋಂಕಿತರ ಸಂಖ್ಯೆ 21,983 ಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ 167 ಆಗಿದೆ. ಭಾನುವಾರ 82 ಮಂದಿ ಗುಣಮುಖರಾಗಿದ್ದು, ಈವರೆಗೆ 20,580 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದಾರೆ. ಸದ್ಯ ಒಟ್ಟು 1,236 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ತಾಲೂಕುವಾರು ಪಾಸಿಟಿವ್ ಪ್ರಕರಣಗಳು : ಜಿಲ್ಲಾ ಸರ್ವೇಕ್ಷಣಾಧಿಕಾಗಳ ಮಾಹಿತಿ ಪ್ರಕಾರ, ಮಂಡ್ಯ 157, ಮದ್ದೂರು 52, ಮಳವಳ್ಳಿ 32, ಪಾಂಡವಪುರ 30, ಶ್ರೀರಂಗಪಟ್ಟಣ 29, ಕೆ.ಆರ್.ಪೇಟೆ 3, ನಾಗಮಂಗಲ ತಾಲೂಕಿನಲ್ಲಿ 29 ಮತ್ತು ಹೊರ ಜಿಲ್ಲೆಯಿಂದ ಬಂದ 6 ಪಾಸಿಟಿವ್ ಪ್ರಕರಣಗಳು ಭಾನುವಾರ ದಾಖಲಾಗಿವೆ.
82 ಮಂದಿ ಗುಣಮುಖ : ಮಂಡ್ಯ 31, ಮದ್ದೂರು 4, ಮಳವಳ್ಳಿ 15, ಪಾಂಡವಪುರ 13, ಶ್ರೀರಂಗಪಟ್ಟಣ 1, ನಾಗಮಂಗಲ 11, ಹೊರ ಜಿಲ್ಲೆಯ 7 ಜನರು ಭಾನುವಾರ ಗುಣಮುಖರಾಗಿದ್ದಾರೆ.