ಮಂಡ್ಯ: ಜಿಲ್ಲೆಯಲ್ಲಿ ಸೋಮವಾರ ಹೊಸದಾಗಿ 1,367 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 933 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 33,717 ಆಗಿದ್ದು, ಇದುವರೆಗೆ 27,122 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ, ಸಕ್ರಿಯ ಪ್ರಕರಣಗಳ ಸಂಖ್ಯೆ 6,373 ಇದೆ. ಸೋಮವಾರ ಅನ್ಯ ಕಾರಣಕ್ಕೆ ಇಬ್ಬರು ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ ಮೃತಪಟ್ಟವರ ಸಂಖ್ಯೆ 220 ಆಗಿದೆ.
ತಾಲೂಕುವಾರು ಪಾಟಿಸಿವ್ ಪ್ರಕರಣಗಳ ವಿವರ:
ಮಂಡ್ಯ 504, ಮದ್ದೂರು 141, ಮಳವಳ್ಳಿ 164, ಪಾಂಡವಪುರ 99, ಶ್ರೀರಂಗಪಟ್ಟಣ 179, ಕೆ.ಅರ್.ಪೇಟೆ 97, ನಾಗಮಂಗಲ 170, ಹೊರ ಜಿಲ್ಲೆಯ 13 ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಒಂದೇ ಕುಟುಂಬದ ಮೂವರನ್ನು ಬಲಿ ಪಡೆದ ಕೊರೊನಾ