ಮಂಡ್ಯ: ಫೇಸ್ಬುಕ್ ಫ್ರೆಂಡ್ ಭೇಟಿ ಮಾಡಲು ಹೋದ ಮಂಡ್ಯದ ಮದ್ದೂರು ಯುವಕನಿಗೆ ಅದೃಷ್ಟ ಖುಲಾಯಿಸಿದ್ದು, ಕೇರಳದ ಲಾಟರಿಯಲ್ಲಿ ಒಂದು ಕೋಟಿ ರೂಪಾಯಿ ಬಂಪರ್ ಬಹುಮಾನ ಗೆಲ್ಲುವ ಮೂಲಕ ಕೋಟ್ಯಧಿಪತಿಯಾಗಿದ್ದಾನೆ.
ಮದ್ದೂರು ತಾಲೂಕಿನ ಸೋಮನಹಳ್ಳಿಯ ಉದ್ಯಮಿಯ ಪುತ್ರ ಸೋಹನ್ ಬಲರಾಮ್ ಒಂದು ಕೋಟಿ ರೂಪಾಯಿ ಗೆದ್ದಿದ್ದಾನೆ. ಕೇರಳದ ಪುಥನಾಥಣಿಯಲ್ಲಿನ ಅಂಗಡಿಯಲ್ಲಿ ಖರೀದಿಸಿದ ಭಾಗ್ಯಧರ ಲಾಟರಿಗೆ ಕೋಟಿ ರೂ. ಬಹುಮಾನ ದೊರೆತಿದೆ.
ಇದನ್ನೂ ಓದಿ: ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕುರಿತು ಸಚಿವ ಶ್ರೀರಾಮುಲು ಪ್ರತಿಕ್ರಿಯೆ
ಫೇಸ್ಬುಕ್ ಫ್ರೆಂಡ್ ಭೇಟಿ ಮಾಡಲು ಶನಿವಾರ ಕೇರಳದ ಪುಥನಾಥಣಿಗೆ ಸೋಹನ್ ಬಲರಾಮ್ ತೆರಳಿದ್ದ. ಸ್ನೇಹಿತನನ್ನು ಭೇಟಿ ಮಾಡಿ ವಾಪಸ್ ಬರುವಾಗ 100 ರೂಪಾಯಿ ಕೊಟ್ಟು ಸ್ನೇಹಿತರ ಒತ್ತಾಯದ ಮೇರೆಗೆ ಲಾಟರಿ ಕೊಂಡಿದ್ದ. ಆತ ಖರೀದಿಸಿದ ಲಾಟರಿ ಸಂಖ್ಯೆಗೆ ಒಂದು ಕೋಟಿ ರೂಪಾಯಿ ಬಂಪರ್ ಬಹುಮಾನ ಸಿಕ್ಕಿದೆ.