ETV Bharat / state

ಅರ್ಚಕರ ಕೊಲೆ ನಂತರ ಶುದ್ಧಿಗೊಂಡ ದೇವಾಲಯ: ಅರ್ಕೇಶ್ವರನ ದರ್ಶನಕ್ಕೆ ‌ಅವಕಾಶ

ಮೂವರು ಅರ್ಚಕರ ಕೊಲೆಯಿಂದಾಗಿ ಮುಚ್ಚಲಾಗಿದ್ದ ಮಂಡ್ಯದ ಅರ್ಕೇಶ್ವರ ದೇವಾಲಯವನ್ನು ಶುದ್ದೀಕರಣಗೊಳಿಸಲಾಗಿದ್ದು ಇಂದಿನಿಂದ ಭಕ್ತ ಪೂಜೆಗೆ ಅವಕಾಶ ನೀಡಲಾಗಿದೆ. ಅಲ್ಲದೆ ಮುಂಜಾಗೃತ ಕ್ರಮವಾಗಿ ದೇವಾಲಯದಲ್ಲಿ 360 ಡಿಗ್ರಿ ಕ್ಯಾಮರಾ ಮತ್ತು ಗನ್​ಮ್ಯಾನಗಳನ್ನು ನಿಯೋಜಿಸಲಾಗಿದೆ.

mandya arkeshwara temple opened again
ಮಂಡ್ಯ ಅರ್ಕೇಶ್ವರ ದೇವಾಲಯ
author img

By

Published : Oct 12, 2020, 7:09 PM IST

ಮಂಡ್ಯ: ಮೂವರು ಅರ್ಚಕರ ಹತ್ಯೆ ಹಿನ್ನೆಲೆ ಒಂದು ತಿಂಗಳ ಕಾಲ ಬಂದ್ ಆಗಿದ್ದ ಅರ್ಕೇಶ್ವರ ದೇವಾಲಯದಲ್ಲಿ ಇಂದಿನಿಂದ ಭಕ್ತರಿಗೆ ಪೂಜೆಗೆ ಅವಕಾಶ ಮಾಡಿಕೊಡಲಾಗಿದೆ.

ಜಿಲ್ಲಾಡಳಿತ ಮತ್ತು ಮುಜರಾತಿ ಇಲಾಖೆ ವತಿಯಿದಿಂದ ದೇವಾಲಯಕ್ಕೆ ಸುಣ್ಣಬಣ್ಣ ಬಳಿದು, ಶುದ್ಧೀಕರಣ ನಡೆದಿದ್ದು, ಕಳೆದ 3 ದಿನದಿಂದ ಹೋಮ ಹವನ ನೆರವೇರಿಸಿ ಇಂದು ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಯಿತು.

ಅರ್ಚಕರ ಕೊಲೆ ನಂತರ ಶುದ್ಧಿಗೊಂಡ ದೇವಾಲಯ

ಸೆಪ್ಟೆಂಬರ್ 10ರ ಮಧ್ಯರಾತ್ರಿ ಮೂವರು ಅರ್ಚಕರ ಕೊಲೆ ನಡೆದಿತ್ತು. ಮೃತದೇಹ ಬಿದ್ದಿದ್ದ ಜಾಗದಲ್ಲಿ 4 ಅಡಿ ಮಣ್ಣು ತೆಗೆದು ನಾರಾಯಣ ಬಲಿ ಪೂಜೆ ಸೇರಿದಂತೆ ಹಲವು ಹೋಮ ಹವನ ನೆರವೇರಿಸಲಾಗಿದೆ.

ಕೊಲೆ ನಡೆದ ಬಳಿಕ ಎಚ್ಚೆತ್ತುಕೊಂಡ ಮುಜರಾಯಿ ಇಲಾಖೆ: ದೇವಾಲಯದಲ್ಲಿ 360 ಡಿಗ್ರಿ ಚಿತ್ರೀಕರಿಸುವ ಸಿಸಿಟಿವಿ ಅಳವಡಿಸಲಾಗಿದೆ. ಇದನ್ನು ವೇಬ್ ಕ್ಯಾಮರ ಸಿಸ್ಟಮ್​ಗೆ ಸಂಪರ್ಕಿಸಲಾಗಿದೆ.
ದೇವಾಲಯದ ರಕ್ಷಣೆಗಾಗಿ 6 ಮಂದಿ ಗನ್ ಮ್ಯಾನ್ ನೇಮಕ ಹಾಗೂ ಮೃತ ಅರ್ಚಕರ ಕುಟುಂಬದ ತಲಾ ಒಬ್ಬರಿಗೆ ಕೆಲಸ ನೀಡಲು ಚಿಂತನೆ ಮಾಡಲಾಗಿದೆ.

ಕೊವಿಡ್ ಮುಂಜಾಗ್ರತಾ ಕ್ರಮದೊಂದಿಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಕೊರೊನಾ ನಿಯಮಾವಳಿಯಂತೆಯೇ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದು, ಭಕ್ತರು ತಿಂಗಳ ನಂತರ ದೇವಾಲಯದ‌ ಕಡೆ ಮುಖ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.