ಮಂಡ್ಯ : ಮಗು ಅಮ್ಮ ಎಂದು ನಮ್ಮ ಮಾತೃಭಾಷೆಯಲ್ಲೇ ಕರೆಯುತ್ತದೆ. ಹಾಗಾಗಿ, ಎಲ್ಲಾ ಭಾಷೆಗಿಂತ ನಮ್ಮ ಮಾತೃ ಭಾಷೆ ನಮಗೆ ಅತೀ ಮುಖ್ಯ ಎಂದು ಶಾಸಕ ಡಿ.ಸಿ. ತಮ್ಮಣ್ಣ ಹೇಳಿದರು.
ಮದ್ದೂರು ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಷ್ಟು ಭಾಷೆ ಬೇಕಾದರೂ ಕಲಿಯಿರಿ, ನಮ್ಮ ಮಾತೃ ಭಾಷೆ ಕನ್ನಡ ಮಾತ್ರ ಮರೆಯಬೇಡಿ. ಈ ದೇಶ ಕಂಡ ಮಹಾನ್ ವಿಜ್ಞಾನಿ ಅಬ್ದುಲ್ ಕಲಾಂರವರು ಕೂಡ ಮಾತೃಭಾಷೆ ತಮಿಳಿನಲ್ಲಿ ಓದಿದ್ದು. ಹಾಗಾಗಿ, ಎಲ್ಲರೂ ಕೂಡ ನಮ್ಮ ಮಾತೃಭಾಷೆ ಕನ್ನಡವನ್ನು ಉಳಿಸಿ ಬೆಳೆಸಿ ಎಂದು ಹೇಳಿದರು.
ಓದಿ : ಪ್ರತಾಪ್ ಸಿಂಹ ಮನೋರೋಗಕ್ಕೆ ತುತ್ತಾಗಿದ್ದಾರಾ?- ಮಾಜಿ ಶಾಸಕ ಜೆ ಆರ್ ಲೋಬೋ ಪ್ರಶ್ನೆ
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡದಲ್ಲಿ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ, ಸಮ್ಮೇಳನದ ಅಧ್ಯಕ್ಷ ಸ್ವಾಮಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.