ಮಂಡ್ಯ: ಇಬ್ಬರು ರೈತರು ಸೇರಿ 7 ವರ್ಷದ ಮಗು ಮೇಲೆ ಚಿರತೆ ದಾಳಿ ನಡೆಸಿದ್ದು, ಎಲ್ಲರೂ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೇಲುಕೋಟೆ ತೊಟ್ಟಿಲುಮಡು ಪ್ರದೇಶದಲ್ಲಿ ಹಾಡು ಹಗಲೇ ಈ ಘಟನೆ ನಡೆದಿದೆ.
ರೈತರು ಜಮೀನಿನಲ್ಲಿ ವ್ಯವಸಾಯ ಮಾಡುವಾಗ ಆಹಾರ ಅರಸಿ ಬಂದ ಚಿರತೆ ರೈತರನ್ನು ಅಟ್ಟಿಸಿಕೊಂಡು ಹೋಗಿದೆ. ಭಯಭೀತರಾದ ಜನ ತಪ್ಪಿಸಿಕೊಳ್ಳಲು ಯತ್ನಿಸುವಾಗ ಕಲ್ಲು ಬಂಡೆಗಳ ಮೇಲೆ ಬಿದ್ದು ಗಾಯಗಳಾಗಿವೆ ಎನ್ನಲಾಗಿದೆ.
ಜಮೀನಿನ ಕೆಲಸ ಮಾಡುತ್ತಿದ್ದ ಪಿ.ಹೊಸಹಳ್ಳಿ ಗ್ರಾಮದ ರೈತ ಜಯರಾಮು, ಅದೇ ಗ್ರಾಮದ ಮಹೇಶ ಮತ್ತು ಅವರ 7 ವರ್ಷದ ಮಗು ವಿಕಾಸ್ ಎಂಬ ಮಗುವಿಗೂ ಗಾಯಗಳಾಗಿದ್ದು, ಮೇಲುಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಓದಿ : ಶಿಕ್ಷಕರನ್ನು ಕರೆದೊಯ್ಯುತ್ತಿದ್ದ ಬಸ್ಗೆ ಅಪಘಾತ: 10 ಮಂದಿ ಸಾವು, 25 ಜನರಿಗೆ ಗಾಯ