ಮಂಡ್ಯ: ಕಾವೇರಿ ಕಣಿವೆ ಪ್ರದೇಶದಲ್ಲಿ ಸತತ ಮಳೆ ಬಿದ್ದ ಪರಿಣಾಮ ಕೃಷ್ಣರಾಜ ಸಾಗರ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾಗಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿಗಳಿದ್ದು, ಪ್ರಸ್ತುತ 94.88 ಅಡಿ ನೀರು ಏರಿಕೆಯಾಗಿದೆ.
ಈಗ ಜಲಾಶಯದ ಒಳ ಹರಿವು 21,796 ಕ್ಯೂಸೆಕ್ ಇದ್ದು, ಹೊರಹರಿವು 2,324 ಕ್ಯೂಸೆಕ್ ಆಗಿದೆ. ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣ 18.841 ಟಿಎಂಸಿ. ಕೊಡಗು ಪ್ರದೇಶದಲ್ಲಿ ಉತ್ತಮ ಮಳೆ ಬೀಳಲಾರಂಭಿಸಿದ್ದು, ಜಲಾಶಯಕ್ಕೆ ನೀರು ಹರಿದು ಬರುತ್ತಿದೆ.
ಕೊಡಗು-ಕೇರಳ ಭಾಗಗಳ ಪ್ರದೇಶದಲ್ಲಿ ಉತ್ತಮ ಮಳೆ ಬಿದ್ದರೆ, ಕೆಆರ್‌ಎಸ್ ಜಲಾಶಯದ ಮೇಲ್ಭಾಗದ ಹೇಮಾವತಿ ಹಾಗೂ ಲಕ್ಷ್ಮಣ ತೀರ್ಥ ನದಿಗಳ ಮೂಲಕ ಒಳ ಹರಿವು ಪ್ರಮಾಣ ಹೆಚ್ಚಾಗಿ ಕೆಆರ್‌ಎಸ್ ಜಲಾಶಯಕ್ಕೆ ಹರಿದು ಬರುತ್ತದೆ. ಈ ಮೂಲಕ ಒಳ ಹರಿವಿನ ಪ್ರಮಾಣವೂ ಹೆಚ್ಚಾಗಿ, ಈ ಬಾರಿ ಜಲಾಶಯ ತುಂಬುವುದರಲ್ಲಿ ಸಂಶಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಇದರಿಂದಾಗಿ ಜಲಾಶಯದ ಕೆಳಭಾಗದ ರೈತರಲ್ಲಿ ಮತ್ತೊಂದು ಬೆಳೆ ಬೆಳೆಯಲು ನೀರು ದೊರಕುತ್ತದೆ ಎಂಬ ಆಶಾಭಾವನೆ ಮೂಡಿದೆ.
ಜಲಾಯಶದ ಗರಿಷ್ಠ ಮಟ್ಟ: 124.80 ಅಡಿ
ಇಂದಿನ ನೀರಿನ ಮಟ್ಟ: 94.88 ಅಡಿ
ಒಳ ಹರಿವು: 21,796 ಕ್ಯೂಸೆಕ್
ಹೊರ ಹರಿವು: 2,324 ಕ್ಯೂಸೆಕ್
ನೀರಿನ ಪ್ರಮಾಣ: 18.841 ಟಿಎಂಸಿ
ಇದನ್ನೂ ಓದಿ: ಹೊಸಪೇಟೆ RTI ಕಾರ್ಯಕರ್ತನ ಕೊಲೆ ಪ್ರಕರಣದ ಜಾಡು ಹಿಡಿಯಲು 3 ತಂಡ ರಚನೆ