ಮಂಡ್ಯ: ಮೈ ಶುಗರ್ ರಾಜ್ಯದ ಏಕೈಕ ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆ. ಕಳೆದ ಕೆಲವು ವರ್ಷಗಳಿಂದ ರೋಗಗ್ರಸ್ಥಗೊಂಡು ಕಬ್ಬು ಅರವಿಕೆ ನಿಲ್ಲಿಸಿದ್ದು, ಇದೀಗ ಖಾಸಗೀಕರಣ ಮಾಡಲು ಸದ್ದಿಲ್ಲದೇ ತಯಾರಿ ಆರಂಭವಾಗಿದೆ. ಲಾಕ್ ಡೌನ್ ಸಮಯದಲ್ಲಿ 40 ವರ್ಷ ಗುತ್ತಿಗೆ ನೀಡಲು ಸರ್ಕಾರ ಅನುಮೋದನೆ ನೀಡಿದೆ. ಇದಕ್ಕೆ ಕೆಲ ಜನಪ್ರತಿನಿಧಿಗಳೂ ಸೇರಿದಂತೆ ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿದೆ.
ಮಂಡ್ಯದ ಮೈಶುಗರ್ ಕಾರ್ಖಾನೆ ಮೈಸೂರು ರಾಜವಂಶಸ್ಥರ ದೂರದೃಷ್ಠಿ ಫಲವಾಗಿ ನಿರ್ಮಾಣವಾಗಿದ್ದು, ಮಂಡ್ಯ ರೈತರ ಜೀವನಾಡಿಯಾಗಿದೆ. ಆದ್ರೆ ಕೆಲವು ವರ್ಷಗಳಿಂದ ಕಬ್ಬು ಅರೆಯುವಿಕೆ ನಿಲ್ಲಿಸಲಾಗಿದೆ. ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ ಪುನರಾರಂಭಿಸುವಂತೆ ರೈತರು ಹಾಗೂ ರೈತಪರ ಸಂಘಟನೆಗಳು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಹಲವು ಭಾರಿ ಕಾರ್ಖಾನೆ ಪುನಶ್ಚೇತನಗೊಳಿಸುವ ಭರವಸೆ ನೀಡಿದ್ರು. ಇದೀಗ 40 ವರ್ಷ ಖಾಸಗಿಯವರಿಗೆ ಗುತ್ತಿಗೆ ನೀಡಲು ಸರ್ಕಾರ ಮುಂದಾಗಿದೆ.
ಇದನ್ನೂ ಓದಿ: ಕೋವಿಡ್ ರೂಪಾಂತರ ಸ್ವಾಭಾವಿಕ, ಡೆಲ್ಟಾ ಪ್ಲಸ್ ಅಧ್ಯಯನ ನಡೆಯಬೇಕು - ಡಾ.ಮಂಜುನಾಥ್
ಸರ್ಕಾರಿ ಸ್ವಾಧೀನದಲ್ಲಿರುವ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಸರ್ಕಾರ ಹುನ್ನಾರ ನಡೆಸುತ್ತಿದೆ. ಈಗಾಗಲೇ ಒಂದು ಮಿಲ್ ಸುಸ್ಥಿತಿಯಲ್ಲಿದೆ. 15 ಕೋಟಿ ಹಣ ನೀಡಿದ್ರೆ ಕಾರ್ಖಾನೆ ಆರಂಭಿಸಬಹುದು. ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ನೀಡಬಾರದು. ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಆರಂಭಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದ್ರೆ ಕೆಲವು ವರ್ಷಗಳಿಂದ ಆಡಳಿತ ಮಂಡಳಿಗಳು ಅವ್ಯವಹಾರ ನಡೆಸಿರುವ ಫಲವಾಗಿ ಕಾರ್ಖಾನೆಗೆ ನೂರಾರು ಕೋಟಿ ನಷ್ಟವಾಗಿದೆ. ಸರ್ಕಾರವೇ ಕಾರ್ಖಾನೆ ಆರಂಭಿಸಿದರೆ ಮತ್ತೆ ಬೀಗ ಹಾಕುವ ಸ್ಥಿತಿ ನಿರ್ಮಾಣವಾಗಲಿದೆ. ರೈತರ ಹಿತಾದೃಷ್ಠಿಯಿಂದ ಗುತ್ತಿಗೆ ನೀಡುವುದೇ ಉತ್ತಮ ಎಂಬ ಅಭಿಪ್ರಾಯ ಸರ್ಕಾರದ್ದಾಗಿದೆ.
ಇದನ್ನೂ ಓದಿ: ಸೋಮವಾರದಿಂದ ರಾಜ್ಯದ 17 ಜಿಲ್ಲೆಗಳಲ್ಲಿ ಗ್ರಂಥಾಲಯಗಳು ರಿಓಪನ್
ಒಟ್ಟಾರೆ ಮೈಷುಗರ್ ಫ್ಯಾಕ್ಟರಿಯನ್ನು 40 ವರ್ಷಗಳ ಕಾಲ ಗುತ್ತಿಗೆ ನೀಡಲು ಸರ್ಕಾರ ಮುಂದಾಗಿದ್ದು, ಕೆಲವು ಜನಪ್ರತಿನಿಧಿಗಳು ಸೇರಿದಂತೆ ರೈತಪರ ಸಂಘಟನೆಗಳು ವಿರೋಧಿಸುತ್ತಿದ್ದು, ಯಾರ ಕೈ ಮೇಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.