ETV Bharat / state

ಪೊಲೀಸರ ಸಹಕಾರವಿಲ್ಲದೆ ಡ್ರಗ್​ ದಂಧೆ ನಡೆಯುವುದಿಲ್ಲ: ಜೆಡಿಎಸ್ ಶಾಸಕ ಡಿ.ಸಿ.ತಮ್ಮಣ್ಣ - JDS mla DC Thammanna statement

ಪೊಲೀಸರ ಇನ್ನೊಂದು ಮುಖ ಯಾರಿಗೂ ಗೊತ್ತಿಲ್ಲ. ಇಡೀ ರಾಜ್ಯದಲ್ಲಿ ಪೊಲೀಸ್​ ಇಲಾಖೆ ಬಂದೋಬಸ್ತ್​ ಮಾಡಿ. ಒಳ್ಳೆಯ ಕೆಲಸ ಮಾಡಿದವರನ್ನು ಹೊಗಳುತ್ತೇವೆ. ಪೊಲೀಸರ ಸಹಕಾರವಿಲ್ಲದೆ ಡ್ರಗ್​ ದಂಧೆ ನಡೆಯುವುದಿಲ್ಲ. ಪ್ರತಿ ತಾಲ್ಲೂಕು, ಜಿಲ್ಲಾಮಟ್ಟ, ಹಳ್ಳಿ-ಹಳ್ಳಿಗೂ ಕೂಡ ಡ್ರಗ್​ ವಿತರಣೆಯಾಗುತ್ತಿದೆ ಶಾಸಕ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.

JDS mla DC Thammanna statement about drug mafiya
ಪೊಲೀಸರ ಸಹಕಾರವಿಲ್ಲದೆ ಡ್ರಗ್​ ದಂಧೆ ನಡೆಯುವುದಿಲ್ಲ: ಜೆಡಿಎಸ್ ಶಾಸಕ ಡಿ.ಸಿ.ತಮ್ಮಣ್ಣ
author img

By

Published : Sep 3, 2020, 8:48 PM IST

ಮಂಡ್ಯ: ಪೊಲೀಸರ ಸಹಕಾರವಿಲ್ಲದೆ ಡ್ರಗ್ಸ್​​ ದಂಧೆ ನಡೆಯುವುದಿಲ್ಲ. ಪ್ರತಿ ತಾಲ್ಲೂಕು, ಜಿಲ್ಲಾಮಟ್ಟ, ಹಳ್ಳಿ-ಹಳ್ಳಿಗೂ ಕೂಡ ಡ್ರಗ್​ ವಿತರಣೆಯಾಗುತ್ತಿದೆ ಎಂದು ಜೆಡಿಎಸ್ ಶಾಸಕ ಡಿ.ಸಿ.ತಮ್ಮಣ್ಣ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಪೊಲೀಸರ ಸಹಕಾರವಿಲ್ಲದೆ ಡ್ರಗ್​ ದಂಧೆ ನಡೆಯುವುದಿಲ್ಲ: ಜೆಡಿಎಸ್ ಶಾಸಕ ಡಿ.ಸಿ.ತಮ್ಮಣ್ಣ

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವಾರದಿಂದ ಮಾಧ್ಯಮದಲ್ಲಿ ಡ್ರಗ್​ ದಂಧೆ ಬಗ್ಗೆ ನೋಡುತ್ತಿದ್ದೇನೆ. ಅದರಲ್ಲಿ ಬರಿ ಸಿನಿಮಾ ತಾರೆಯರು, ರಾಜಕಾರಣಿಗಳ ಬಗ್ಗೆ ಮಾತ್ರ ಬರುತ್ತಿದೆ. ಬೆಂಗಳೂರು, ಮೈಸೂರು, ಬೆಳಗಾವಿ ಇಂತಹ ದೊಡ್ಡ-ದೊಡ್ಡ ನಗರಗಳಲ್ಲಿ ಮಾತ್ರ ಡ್ರಗ್​ ದಂಧೆ ನಡೆಯುತ್ತಿದೆಯಾ. ಇವಾಗ ಮದ್ದೂರು, ಮಂಡ್ಯದಲ್ಲಿಲ್ವಾ? ಡ್ರಗ್ ಮಾಫಿಯಾ ಹಳ್ಳಿ-ಹಳ್ಳಿಯಲ್ಲಿದೆ ಎಂದಿದ್ದಾರೆ.

ಒಂದೆಡೆ ಪೊಲೀಸರನ್ನು ಕೊರೊನಾ ಸಮಯದಲ್ಲಿ ವಾರಿಯರ್ಸ್ ಅಂತ ಸನ್ಮಾನ ಮಾಡಿದ್ದೇವೆ. ಜನತೆ ಅವರಿಗೆ ಹೂಮಳೆ ಸುರಿದು ಗೌರವಿಸಿದ್ದಾರೆ. ಅದೇ ನಾಣ್ಯದ ಪೊಲೀಸರ ಇನ್ನೊಂದು ಮುಖ ಯಾರಿಗೂ ಗೊತ್ತಿಲ್ಲ. ಇಡೀ ರಾಜ್ಯದಲ್ಲಿ ಪೊಲೀಸ್​ ಇಲಾಖೆ ಬಂದೋಬಸ್ತ್​ ಮಾಡಿ. ಒಳ್ಳೆಯ ಕೆಲಸ ಮಾಡಿದವರನ್ನು ಹೊಗಳುತ್ತೇವೆ. ಪೊಲೀಸರ ಸಹಕಾರವಿಲ್ಲದೆ ಡ್ರಗ್​ ದಂಧೆ ನಡೆಯುವುದಿಲ್ಲ.

ಪ್ರತಿ ತಾಲ್ಲೂಕು, ಜಿಲ್ಲಾಮಟ್ಟ, ಹಳ್ಳಿ-ಹಳ್ಳಿಗೂ ಕೂಡ ಡ್ರಗ್​ ವಿತರಣೆಯಾಗುತ್ತಿದೆ. ಇಂತಹ ಕೊಂಡಿಯನ್ನು ಭೇದಿಸಿ. ಜನರನ್ನು ದಾರಿತಪ್ಪಿಸುವ ಸಲುವಾಗಿ ಸಿನಿಮಾ ತಾರೆಯರು, ರಾಜಕಾರಣಿಗಳು ಅಂತ ದಾರಿ ತಪ್ಪಿಸಬೇಡಿ ಎಂದು ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.