ಮಂಡ್ಯ: ಬರೀ ಸಿದ್ದರಾಮಯ್ಯ ಅವರನ್ನು ನೀವು ಮ್ಯಾನೇಜ್ ಮಾಡಿ ಸಾಕು ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದರು. ಡಿ.ಕೆ.ಶಿವಕುಮಾರ್ಗೆ ತಾಕತ್ತಿದ್ದರೆ ಪಾರ್ಟಿ ಕಟ್ಟಿ ತೋರಿಸಲಿ, ಇಲ್ಲವಾದರೆ ಬರೀ ಸಿದ್ದರಾಮಯ್ಯರನ್ನು ಮ್ಯಾನೇಜ್ ಮಾಡಿ ಸಾಕು ಎಂದು ಅವರು ವ್ಯಂಗ್ಯವಾಡಿದರು.
ಮಂಡ್ಯದಲ್ಲಿ ಮಾತನಾಡಿದ ಅವರು, ವಂಶಪಾರಂಪರ್ಯ ಇರುವವರೆಗೂ ಕಾಂಗ್ರೆಸ್ ಉದ್ದಾರವಾಗುವುದಿಲ್ಲ. ಇದನ್ನು ನಾವು ಹೇಳುತ್ತಿಲ್ಲ ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದಾರೆ. ಡಿಕೆಶಿ ಒಂದು ಕಡೆ, ಸಿದ್ದರಾಮಯ್ಯ ಒಂದು ಕಡೆ ಇರೋದ್ರಿಂದ ಕಾಂಗ್ರೆಸ್ಗೆ ಉಳಿವಿಲ್ಲ.
ಮೋದಿ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ನವರು ನಾಲ್ಕೈದು ರಾಜ್ಯಗಳನ್ನು ಕಳೆದುಕೊಂಡಿದ್ದಾರೆ. ಪಕ್ಷದಲ್ಲಿ ಒಡಕಿಲ್ಲ ಎಂದ ಮೇಲೆ ತನ್ವೀರ್ ಸೇಠ್ ಅವರನ್ನು ಯಾಕೆ ಕರೆಸಿದ್ದಾರೆ?, ಅವರಿಂದ ರಿಪೋರ್ಟ್ ಯಾಕೆ ಕೇಳಿದ್ದಾರೆ ಎಂದು ಶೆಟ್ಟರ್ ಪ್ರಶ್ನಿಸಿದರು.
ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂ ಮೇಲೆ ಯುವಕನ ಜಾಲಿ ರೈಡ್ಗೆ ಸಾಥ್: ಅಧಿಕಾರಿ ಅಮಾನತು