ETV Bharat / state

ಪತ್ನಿ ಸಾವಿಗೀಡಾದ ಮರುದಿನವೇ ಪತಿ ನೇಣಿಗೆ ಶರಣು! - Husband suicide,

ಪತ್ನಿ ಸಾವಿಗೀಡಾದ ಮರುದಿನವೇ ಪತಿ ನೇಣಿಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಪತಿ ನೇಣಿಗೆ ಶರಣು
author img

By

Published : Sep 17, 2019, 1:07 PM IST

ಮಂಡ್ಯ: ಪತ್ನಿ ಸಾವಿಗೀಡಾದ ಮರುದಿನವೇ ಪತಿ ನೇಣಿಗೆ ಶರಣಾಗಿರುವ ಘಟನೆ ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹೆಮ್ಮನಹಳ್ಳಿ ಗ್ರಾಮದ ಪ್ರದೀಪ್ (40) ನೇಣಿಗೆ ಶರಣಾಗಿದ್ದು, ನಿನ್ನೆಯಷ್ಟೆ ಪ್ರದೀಪ್​ನ ಪತ್ನಿ ಕೂಡ ಅನಾರೋಗ್ಯದಿಂದ ಮೃತಪಟ್ಟಿದ್ದರು. ಬೆಂಗಳೂರಿನ ಸುಂಕದಕಟ್ಟೆಯಲ್ಲಿ ವ್ಯವಹಾರ ನಡೆಸಲು‌ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಪ್ರದೀಪ್ ಸಾಲ ಪಡೆದಿದ್ದ. ವ್ಯವಹಾರದಲ್ಲಿ ನಷ್ಟ ಉಂಟಾಗಿದ್ದರಿಂದ ನಾಪತ್ತೆಯಾಗಿದ್ದ ಎಂದು ಹೇಳಲಾಗಿತ್ತು.

ಪತ್ನಿ ಸಾವಿಗೀಡಾದ ಮರುದಿನವೇ ಪತಿ ನೇಣಿಗೆ ಶರಣು

ನಿನ್ನೆ ಪತ್ನಿ ಅನಾರೋಗ್ಯದಿಂದ ಸಾವೀಗೀಡಾಗಿದ್ದರಿಂದ ಪ್ರದೀಪ್​ ಊರಿಗೆ ಬಂದಿದ್ದ. ಈ ವಿಷಯ ತಿಳಿದ ಫೈನಾನ್ಸ್ ಕಂಪನಿಯ ನೌಕರರು ಮನೆಗೆ ಬಂದು ಪ್ರದೀಪ್​ಗೆ ಬೆದರಿಕೆ ಹಾಕಿದರು ಎನ್ನಲಾಗ್ತಿದೆ.

ಬೆಳಗ್ಗೆ ಕಾರಿನಲ್ಲಿ ಮನೆಗೆ ಬಂದು ಹಣ ಮರು ಪಾವತಿಸದಿದ್ದಲ್ಲಿ ಕುಟುಂಬಸ್ಥರೊಡನೆ ನಿನ್ನನ್ನು ಎಳೆದೊಯ್ಯುವುದಾಗಿ ಫೈನಾನ್ಸ್​ ಕಂಪನಿ ಸಿಬ್ಬಂದಿ ಬೆದರಿಕೆ ಹಾಕಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದರಿಂದ ಹೆದರಿ ಪ್ರದೀಪ್ ಮನೆಯ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾನೆ. ಪ್ರದೀಪ್ ಸಾವಿನಿಂದ ಗ್ರಾಮದಲ್ಲಿ ಆತಂಕ ಉಂಟಾಗಿದೆ. ಫೈನಾನ್ಸ್ ಕಂಪನಿಯವರ ಕಿರುಕುಳದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಫೈನಾನ್ಸ್ ಕಡೆಯ ಇಬ್ಬರುನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

ಈ ಘಟನೆ ಕುರಿತು ಕೆಸ್ತೂರು ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:ಮಂಡ್ಯ: ಪತ್ನಿ ಸಾವಿಗೀಡಾದ ಒಂದೇ ದಿನಕ್ಕೆ ಪತಿಯೂ ಖಾಸಗಿ ಫೈನಾನ್ಸ್ ಕಿರುಕುಳಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೆಮ್ಮನಹಳ್ಳಿ ಗ್ರಾಮದ ಪ್ರದೀಪ್(40) ಮೃತ ದುರ್ದೈವಿಯಾಗಿದ್ದು, ನೆನ್ನೆಯಷ್ಟೆ ಪ್ರದೀಪ್ ನ ಪತ್ನಿ ಕೂಡ ಅನಾರೋಗ್ಯದಿಂದ ಮೃತಪಟ್ಟಿದ್ದರು.
ಬೆಂಗಳೂರಿನ ಸುಂಕದಕಟ್ಟೆಯಲ್ಲಿ ವ್ಯವಹಾರ ನಡೆಸಲು‌ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಪ್ರದೀಪ್ ಸಾಲ ಪಡೆದಿದ್ದ. ವ್ಯವಹಾರದಲ್ಲಿ ನಷ್ಟ ಉಂಟಾಗಿದ್ದರಿಂದ ನಾಪತ್ತೆಯಾಗಿದ್ದ ಎಂದು ಹೇಳಲಾಗಿದೆ. ಆದರೆ ನಿನ್ನೆ ಪತ್ನಿ ಅನಾರೋಗ್ಯದಿಂದ ಸಾವೀಗೀಡಾಗಿದ್ದರಿಂದ ಊರಿಗೆ ಬಂದಿದ್ದ. ಪ್ರದೀಪ್ ಊರಿನದಲ್ಲಿರೋ ವಿಷಯ ತಿಳಿದು ಫೈನಾನ್ಸ್ ಕಂಪನಿಯ ನೌಕರರು ಊರಿಗೆ ಬಂದು ನೆನ್ನೆ ಬೆದರಿಕೆ ಹಾಕಿದ್ರು.
ಇಂದು ಸಾಲ ಕೊಡದಿದ್ರೆ ಎಳೆದೊಯ್ಯುವುದಾಗಿ ಬೆದರಿಸಿ ಬೆಳಿಗ್ಗೆ ಕಾರಿನಲ್ಲಿ ಮನೆಗೆ ಬಂದಿದ್ದರು.‌ ಇದ್ರಿಂದ ಹೆದರಿ ಪ್ರದೀಪ್ ಮನೆಯ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾನೆ.
ಪ್ರದೀಪ್ ಸಾವಿನಿಂದ ಗ್ರಾಮದಲ್ಲಿ ಆತಂಕ ಉಂಟಾಗಿದೆ. ಫೈನಾನ್ಸ್ ಕಂಪನಿಯವರ ಕಿರುಕುಳಕ್ಕೆ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಫೈನಾನ್ಸ್ ಕಡೆಯ ಇಬ್ಬರುನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.Body:ಬೈಟ್
೧. ನಿಂಗರಾಜು, ಗ್ರಾಮಸ್ಥ
೨. ಮಂಚೇಗೌಡ, ಗ್ರಾಮಸ್ಥ( ವಯಸ್ಸಾದವರು)

ಯತೀಶ್ ಬಾಬುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.