ಮಂಡ್ಯ: ಪತ್ನಿಯನ್ನ ಕೊಲೆಗೈದು ಮನೆ ಹಿಂಭಾಗದ ಜಮೀನಿನಲ್ಲಿ ಮಣ್ಣು ಮಾಡಿ ಪತಿ ಪರಾರಿಯಾಗಿರುವ ಘಟನೆ ಮಳವಳ್ಳಿ ತಾಲೂಕಿನ ಕಲ್ಲುವೀರನಹಳ್ಳಿಯಲ್ಲಿ ನಡೆದಿದೆ. ರಾಣಿ (30) ಕೊಲೆಯಾದ ಗೃಹಿಣಿ ಎಂದು ತಿಳಿದುಬಂದಿದೆ.
ಪತಿ ಶಿವರಾಜ ಎಂಬಾತ ಪತ್ನಿಯನ್ನ ನಿನ್ನೆ ರಾತ್ರಿ ಕೊಲೆ ಮಾಡಿ ಮನೆಯ ಹಿಂಭಾಗದಲ್ಲಿದ್ದ ಸತೀಶ್ ಎಂಬುವರ ಜಮೀನಲ್ಲಿ ಹೂತುಹಾಕಿ ಪರಾರಿಯಾಗಿದ್ದಾನೆ. ಜಮೀನು ಮಾಲೀಕ ಮುಂಜಾನೆ ಜಮೀನಿಗೆ ಬಂದಾಗ ರಕ್ತದ ಕಲೆ ಜೊತೆಗೆ ಶವ ಮಣ್ಣು ಮಾಡಿರುವ ಗುರುತು ಕಂಡುಬಂದ ಹಿನ್ನೆಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಶವ ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸುಪ್ರೀಂಕೋರ್ಟ್ ಎದುರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಸಾವು