ETV Bharat / state

ಮಂಡ್ಯ ಬಾಲಕಿಗೆ 5 ಲಕ್ಷ ನಗದು ಘೋಷಣೆಯ ಪೋಸ್ಟ್ ವೈರಲ್‌; ವಿದ್ಯಾರ್ಥಿನಿಯ ಪ್ರತಿಕ್ರಿಯೆ ಹೀಗಿತ್ತು - ಹಿಜಾಬ್​ ಮತ್ತು ಕೇಸರಿ ಶಾಲು ವಿವಾದ

ಮಂಡ್ಯದಲ್ಲಿ ನಿನ್ನೆ ನಡೆದ ಹಿಜಾಬ್​ ಮತ್ತು ಕೇಸರಿ ಶಾಲು ವಿವಾದ ಇಂದು ಮಗ್ಗಲು ಬದಲಿಸಿದೆ. ಕೇಸರಿ ಶಾಲು ಧರಿಸಿ ಬಂದಿದ್ದ ನೂರಾರು ವಿದ್ಯಾರ್ಥಿಗಳ ಮುಂದೆ 'ಅಲ್ಲಾಹು ಅಕ್ಬರ್‌' ಎಂದು ಘೋಷಣೆ ಕೂಗಿದ್ದ ಹಿಜಾಬ್‌ಧಾರಿ ವಿದ್ಯಾರ್ಥಿನಿಗೆ ಕೋಮು ಸಂಘಟನೆಯೊಂದು ಬಹುಮಾನ ಘೋಷಿಸಿದೆ.

Jamiat announces Rs 5 lakh reward to Mandya student

author img

By

Published : Feb 9, 2022, 12:33 PM IST

Updated : Feb 9, 2022, 4:38 PM IST

ಮಂಡ್ಯ: ಪಿಇಎಸ್ ಕಾಲೇಜಿನಲ್ಲಿ ಜೈಶ್ರೀರಾಮ್ ಘೋಷಣೆಗೆ ಪ್ರತಿಯಾಗಿ 'ಅಲ್ಲಾಹು ಅಕ್ಬರ್​, ಅಲ್ಲಾಹು ಅಕ್ಬರ್‌..' ಎಂದು ಘೋಷಣೆ ಕೂಗಿದ್ದ ಹಿಜಾಬ್‌ಧಾರಿ ವಿದ್ಯಾರ್ಥಿನಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ ಎನ್ನಲಾದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

Hijab Row News;  Jamiat announces Rs 5 lakh reward to Mandya student
ಜಾಲತಾಣದಲ್ಲಿ ವೈರಲ್ ಆದ ಪೋಸ್ಟ್

'ಈ ಹಣವು ಆದಷ್ಟು ಬೇಗ ಅವಳ ಕುಟುಂಬಕ್ಕೆ ಸೇರಲಿ, ಅದೇ ರೀತಿ ಈ ಹಣವು ಸಹೋದರಿಯ ಉನ್ನತ ಶಿಕ್ಷಣಕ್ಕೆ ಉಪಯೋಗಿಸಲಿ, ಡಾಕ್ಟರ್, ವಕೀಲೆ ಅಥವಾ ಇನ್ನಿತರ ಯಾವುದೇ ಉನ್ನತ ಹುದ್ದೆ ಅಲಂಕರಿಸಲಿ' ಎಂಬ ಬರಹವುಳ್ಳ ಪೋಸ್ಟ್ ಅನ್ನು ಇರ್ಜಾನ್ ಅದ್ದೂರ್ ಎಂಬಾತ ತನ್ನ ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿದ್ದಾನೆ.

ವಿದ್ಯಾರ್ಥಿನಿಯ ಪ್ರತಿಕ್ರಿಯೆ

ಮೌಲಾನ ಮಹಾಮೂದ್ ಮದನಿ ಫೇಸ್‌ಬುಕ್‌ನಲ್ಲೂ ಈ ಬಗ್ಗೆ ಮಾಹಿತಿ ಇದೆ. ಇದು ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ವಿದ್ಯಾರ್ಥಿನಿ ಮುಸ್ಕಾನ್​, ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಅಂತ ಹೇಳಿದ್ದಾಳೆ.

ಇದನ್ನೂ ಓದಿ: ಮಂಡ್ಯ: ನೂರಾರು ಕೇಸರಿ ಶಾಲು ತೊಟ್ಟ ವಿದ್ಯಾರ್ಥಿಗಳ ವಿರುದ್ಧ ಮುಸ್ಲಿಂ ವಿದ್ಯಾರ್ಥಿನಿ ಏಕಾಂಗಿ ಹೋರಾಟ!

Last Updated : Feb 9, 2022, 4:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.