ETV Bharat / state

ಅವರ ಪರ ಇವರು, ಇವರ ಪರ ಅವರು : ಹೆಚ್​ಡಿಕೆ, ಸುಮಲತಾ ಬೆಂಬಲಿಗರಿಂದ ಪ್ರತಿಭಟನೆ - ಶಿವಮೊಗ್ಗ ಪ್ರತಿಭಟನೆ ಸುದ್ದಿ

ಕೆಆರ್​​ಎಸ್ ಡ್ಯಾಂ ಸುರಕ್ಷತಾ ದೃಷ್ಠಿಯಿಂದ ಅಕ್ರಮ ಗಣಿಗಾರಿಕೆ ವಿರುದ್ಧ ಸಂಸದೆ ಸುಮಲತಾ ನೀಡಿದ ಹೇಳಿಕೆಗೆ ಅನವಶ್ಯಕ ಪ್ರತಿ ಹೇಳಿಕೆಗಳನ್ನು ನೀಡುವುದು ಮತ್ತು ರೌಡಿಗಳನ್ನು ಎತ್ತಿಕಟ್ಟುವುದು ಮಾಡುತ್ತಿದ್ದು, ಇದನ್ನು ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಕೂಡಲೇ ಕುಮಾರಸ್ವಾಮಿ ಅವರು ಸುಮಲತಾ ಅವರಲ್ಲಿ ಕ್ಷಮೆಯಾಚಿಸಬೇಕು..

HDK And Sumalatha supporters protest
ಹೆಚ್​ಡಿಕೆ, ಸುಮಲತಾ ಬೆಂಬಲಿಗರಿಂದ ಪ್ರತಿಭಟನೆ
author img

By

Published : Jul 10, 2021, 6:54 PM IST

ಶಿವಮೊಗ್ಗ/ಮಂಡ್ಯ : ಸಂಸದೆ ಸುಮಲತಾ ಅಂಬರೀಶ್‌ ವಿರುದ್ಧ ಕೀಳು ಮಟ್ಟದ ಅಪಪ್ರಚಾರ ನಡೆಸುತ್ತಿರುವ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಕೂಡಲೇ ಕರ್ನಾಟಕದ ಆರೂವರೆ ಕೋಟಿ ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ವತಿಯಿಂದ ನಗರದ ಶಿವಪ್ಪ ನಾಯಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಹೆಚ್​ಡಿಕೆ, ಸುಮಲತಾ ಬೆಂಬಲಿಗರಿಂದ ಪ್ರತಿಭಟನೆ..

ಬಳಿಕ ಮಾತನಾಡಿದ ಕಾರ್ಮಿಕ ರಕ್ಷಣಾ ವೇದಿಕೆ ಅಧ್ಯಕ್ಷ ವಾಟಾಳ್ ಮಂಜುನಾಥ್, ನಟ ಅಂಬರೀಶ್ ಸಂಸದರಾಗಿದ್ದಾಗ ಕಾವೇರಿ ತೀರ್ಪಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ತಮ್ಮ ಮಂತ್ರಿ ಸ್ಥಾನಕ್ಕೆ ಹಾಗೂ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜ್ಯದ ಕೋಟ್ಯಂತರ ಜನರ ಕಣ್ಮಣಿಯಾಗಿದ್ದ ಅವರು ನಿಧನರಾಗಿದ್ದಾಗ ಯಾವುದೇ ಸರ್ಕಾರ ಅಥವಾ ಯಾವುದೇ ಮುಖ್ಯಮಂತ್ರಿ ಇರಲಿ, ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡುವುದು ಅವರ ಕರ್ತವ್ಯ. ಆದರೆ, ಕುಮಾರಸ್ವಾಮಿ ಅವರು ನಾನೇ ಅವರ ಅಂತ್ಯಸಂಸ್ಕಾರ ಮಾಡಿದೆ ಎನ್ನುವ ರೀತಿಯಲ್ಲಿ ಬಿಂಬಿಸಲು ಹೊರಟಿರುವ ಅವರ ನಡೆ ಸರಿಯಲ್ಲ ಎಂದರು.

ಕೆಆರ್​​ಎಸ್ ಡ್ಯಾಂ ಸುರಕ್ಷತಾ ದೃಷ್ಠಿಯಿಂದ ಅಕ್ರಮ ಗಣಿಗಾರಿಕೆ ವಿರುದ್ಧ ಸಂಸದೆ ಸುಮಲತಾ ಅವರು ನೀಡಿದ ಹೇಳಿಕೆಗೆ ಅನವಶ್ಯಕ ಪ್ರತಿ ಹೇಳಿಕೆಗಳನ್ನು ನೀಡುವುದು ಮತ್ತು ರೌಡಿಗಳನ್ನು ಎತ್ತಿಕಟ್ಟುವುದು ಮಾಡುತ್ತಿದ್ದು, ಇದನ್ನು ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಕೂಡಲೇ ಕುಮಾರಸ್ವಾಮಿ ಅವರು ಸುಮಲತಾ ಅವರಲ್ಲಿ ಕ್ಷಮೆಯಾಚಿಸಬೇಕು. ಹಾಗೂ ರಾಜ್ಯದ ಜನರ ಬಳಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೆಚ್​​ಡಿಕೆ ವಿರುದ್ಧ ಕನ್ನಡ ಪರ ಸಂಘಟನೆಗಳಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮಂಡ್ಯದಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಪ್ರತಿಭಟನೆ : ಮಂಡ್ಯದಲ್ಲಿ ಸಂಸದೆ ಸುಮಲತಾ ಹಾಗೂ ರಾಕ್ಲೈನ್ ವೆಂಕಟೇಶ್​​ ವಿರುದ್ಧ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಗೌರೀಶ್ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಮಂಡ್ಯ ಜೆಡಿಎಸ್ ಘಟಕ ಹಾಗೂ ಹೆಚ್​​ಡಿಕೆ ಅಭಿಮಾನಿಗಳು, ಕೆಆರ್​ಎಸ್​​ ಡ್ಯಾಂ ಬಿರುಕು ಎಂದು ಸುಳ್ಳು ಹೇಳಿಕೆ ನೀಡಿ ಜಿಲ್ಲೆಯ ರೈತರಲ್ಲಿ ಆತಂಕವನ್ನುಂಟು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು‌.

ಸಂಸದೆ ಸುಮಲತಾ ಹಾಗೂ ರಾಕ್‌ಲೈನ್ ವೆಂಕಟೇಶ್‌ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಪ್ರಚಾರಕ್ಕಾಗಿ ಸಂಸದೆ ಸುಮಲತಾ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಮಂಡ್ಯ ಜಿಲ್ಲೆಗೆ ನಿಮ್ಮ ಕೊಡುಗೆ ಏನು? ಎಂದು ಪ್ರಶ್ನಿಸಿದರು.

420 ರಾಕ್‌ಲೈನ್ ಇಟ್ಟುಕೊಂಡು ಮಾತನಾಡ್ತಿರಲ್ಲ. ಜಿಲ್ಲೆಯ ಜನರು ಹಾಗೂ ಕೆಆರ್​​ಎಸ್​​ ಡ್ಯಾಂ ಬಗ್ಗೆ ಗೌರವ ಇರಲಿ. ನಮಗೆ ಅಂಬರೀಶಣ್ಣ ಬಗ್ಗೆ ಜಿಲ್ಲೆಯಲ್ಲಿ ಗೌರವ ಇದೆ‌‌. ಅವರ ಹೆಸರು ಇಟ್ಟುಕೊಂಡು ಗೆದ್ದಿದ್ದಿರಾ.. ಅದನ್ನ ಉಳಿಸಿಕೊಳ್ಳಿ ಎಂದು ಸಲಹೆ ನೀಡಿದರು. ಜತೆಗೆ ನಿಮ್ಮಂತವರ ಕೈಯಲ್ಲಿ ಹೇಳಿಸಿಕೊಳ್ಳುವ ಅವಶ್ಯಕತೆ ನಮ್ಮ ಕುಮಾರಸ್ವಾಮಿ ಅವರಿಗೆ ಇಲ್ಲ. ನೀವು ಗೌರವದಿಂದ ಇರುವುದನ್ನ ಕಲಿಯಿರಿ‌ ಎಂದು ಕಾರ್ಯಕರ್ತರು ಸಲಹೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.