ETV Bharat / state

ನನ್ನ ಮಗ ಕದ್ದು ಹೋಗುವವನಲ್ಲ: ಕೃಷ್ಣಗೆ ದೇವೇಗೌಡ ಟಾಂಗ್ - ಮುಖ್ಯಮಂತ್ರಿ

ಮಂಡ್ಯದಲ್ಲಿ ನಿಖಿಲ್ ಕಥೆ ಮುಗೀತು, ದೇವೇಗೌಡರಿಗೆ ಮುಖಭಂಗ ಆಯ್ತು ಅಂತೆಲ್ಲ ಬಿಂಬಿಸುತ್ತಿದ್ದಾರೆ. ಮಂಡ್ಯದಲ್ಲಿ ಆ ರೀತಿ ಆಗೋದುಂಟ? ಎಂದು ಜೆಡಿಎಸ್​ ವರಿಷ್ಠ ಹೆಚ್‌‌.ಡಿ. ದೇವೇಗೌಡ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಾಜಿ ಸಿಎಂ ಎಸ್​ ಎಂ ಕೃಷ್ಣ ಅವರಿಗೂ ಟಾಂಗ್​ ಕೊಟ್ಟಿದ್ದಾರೆ.

ಹೆಚ್.ಡಿ.ದೇವೇಗೌಡ
author img

By

Published : Apr 4, 2019, 10:16 PM IST

ಮೈಸೂರು: ನನ್ನ ಮಗ ಕದ್ದುಮುಚ್ಚಿ ಹೋಗಿ ಮುಖ್ಯಮಂತ್ರಿಯಾಗಿಲ್ಲ ಎಂದು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಹೇಳಿಕೆಗೆ ಮಾಜಿ ಪ್ರಧಾನಿ ಹೆಚ್‌‌.ಡಿ. ದೇವೇಗೌಡ ತಿರುಗೇಟು ನೀಡಿದ್ದಾರೆ.

ಕೆ.ಆರ್. ಪಟ್ಟಣದಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಹಿಂದೆ ಕುಮಾರಸ್ವಾಮಿ ಬಿಜೆಪಿ ಜೊತೆ ಕದ್ದುಮುಚ್ಚಿ ಹೋಗಿ ಸರ್ಕಾರ ರಚನೆ ಮಾಡಿದ್ದರು ಅಂತಾ ಕೃಷ್ಣ ಹೇಳ್ತಾರೆ. ಆದರೆ ನನ್ನ ಮಗ ಹೋಗಲು ಯಾರು ಕಾರಣ ಅಂತ ಜನರಿಗೆ ಗೊತ್ತು ಎಂದು ಕುಟುಕಿದರು.

ಮಂಡ್ಯದಲ್ಲಿ ನಿಖಿಲ್ ಕಥೆ ಮುಗೀತು, ದೇವೇಗೌಡರಿಗೆ ಮುಖಭಂಗ ಆಯ್ತು ಅಂತೆಲ್ಲ ಬಿಂಬಿಸುತ್ತಿದ್ದಾರೆ. ಅದು ಮಂಡ್ಯದಲ್ಲಿ ಆ ರೀತಿ ಆಗೋದುಂಟ? ಪ್ರಧಾನಿಯಾಗಿ, ರಾಜ್ಯದ ಸಿಎಂ ಆಗಿ ತುಂಬಾ ನೋವುಂಡಿದ್ದೇನೆ. ಮಂಡ್ಯ ಜನರ ಭಾವನೆ ನನಗೆ ಗೊತ್ತಿದೆ. ಮಂಡ್ಯ ಮತದಾರರು ತೀರ್ಮಾನ ಮಾಡುತ್ತಾರೆ ಎಂದು ದೇವೇಗೌಡರು ಗುಡಗಿದರು.

ಎಸ್.ಎಂ.ಕೃಷ್ಣಗೆ ಹೆಚ್.ಡಿ.ದೇವೇಗೌಡ ಟಾಂಗ್

ದೇಶದಲ್ಲಿ ಎಲ್ಲಿ ನೋಡಿದರು ಮೋದಿ, ಶಾ, ಅಂತಾರೆ,. ಈ ಭಾರತಾಂಬೆ ನಿಮ್ಮನ್ನು ಎದುರಿಸುವ ವ್ಯಕ್ತಿಯನ್ನು ಹುಟ್ಟಿಸಿದ್ದಾಳೆ. ಮೋದಿ ೬ ಸಾವಿರ ರೈತರ ಖಾತೆಗೆ ಕೊಡ್ತೀವಿ ಅಂತಾರೆ, ಚುನಾವಣೆ ಮುಗಿದ ಮೇಲೆ ಇದು ಎಲ್ಲಿಗೆ ತಲುಪುತ್ತೆ ನೋಡೋಣವೆಂದು ಸವಾಲು ಹಾಕಿದರು. ಬೋಗಿಬೆಲ್ ಸೇತುವೆಗೆ ನಾನು ಅಡಿಪಾಯ ಹಾಕಿ ಕಟ್ಟಿಸಿದ್ದೆ. ಆದರೀಗ ಉದ್ಘಾಟನೆ ಮಾಡಿ ತಾವೇ ಕಟ್ಟಿಸಿದ್ದೇವೆ ಎಂದು ಮೋದಿ ಹೇಳಿಕೊಳ್ಳುತ್ತಾರೆ ಎಂದು ದೇವೇಗೌಡರು ವಾಗ್ದಾಳಿ ನಡೆಸಿದ್ರು.

ಸಿನೆಮಾ ನಟರಿಗೆ ಆಕರ್ಷಿಸುವ ಶಕ್ತಿಯಿದೆ. ಕೈ ಮುಗಿಯುತ್ತೇನೆ ನಾನು ಯಾರನ್ನು ನಿಂದಿಸಲ್ಲ. ಡಾ.ರಾಜ್ ಕುಮಾರ್ ಅಂತಹ ಮೇರುವ್ಯಕ್ತಿತ್ವ ಯಾರಿಗೂ ಬರಲ್ಲ. ಚಿಕ್ಕಮಗಳೂರಿನಲ್ಲಿ ಇಂದಿರಾಗಾಂಧಿ ವಿರುದ್ಧ ಸ್ಪರ್ಧಿಸುವಂತೆ ರಾಜ್​ಕುಮಾರ್​ ಅವರನ್ನ ಕೇಳಿಕೊಂಡಿದ್ದೆ. ಆದ್ರೆ ಅವರು ಒಪ್ಪಿರಲಿಲ್ಲ. ಅವರ ವ್ಯಕ್ತಿತ್ವನೇ ಬೇರೆ, ಈಗಿನ ನಟರ ವ್ಯಕ್ತಿತ್ವನೇ ಬೇರೆ ಎಂದು ನಟರ ಹೆಸರೇಳದೆ ದೇವೇಗೌಡ ಚಾಟಿ ಬೀಸಿದರು.

Intro:ಎಚ್.ಡಿ.ದೇವೇಗೌಡ ಸುದ್ದಿ

Body:ಎಚ್.ಡಿ.ದೇವೇಗೌಡ ಸುದ್ದಿ

Conclusion:ನನ್ನ ಮಗ ಕದ್ದು ಹೋಗುವವನಲ್ಲ,ಎಸ್.ಎಂ.ಕೃಷ್ಣರಿಗೆ ಟಾಂಗ್ ಎಚ್.ಡಿ.ದೇವೇಗೌಡ
ಮೈಯ: ನನ್ನ‌ ಮಗ ಕದ್ದು ಹೋಗಿ ಮುಖ್ಯಮಂತ್ರಿಯಾಗಿಲ್ಲ ಎಂದು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಹೇಳಿಕೆಗೆ ಎಚ್‌‌.ಡಿ.ದೇವೇಗೌಡ ತಿರುಗೇಟು ನೀಡಿದರು.
ಕೆ.ಆರ್.ಪಟ್ಟಣದಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಮಗ ಬಿಜೆಪಿ ಜೊತೆ ಕದ್ದು ಹೋಗಿ ಸರ್ಕಾರ ರಚನೆ ಮಾಡಿದರು ಅಂತಾ ಕೃಷ್ಣ ಹೇಳ್ತಾರೆ, ಆದರೆ ನನ್ನ ಹೋಗಲು ಯಾರು ಕಾರಣ ಅಂತ ಜನರಿಗೆ ಗೊತ್ತು ಎಂದು ಕುಟುಕಿದರು.
ಮಂಡ್ಯದಲ್ಲಿ ನಿಖಿಲ್ ಕಥೆ ಮುಗೀತು, ದೇವೇಗೌಡರಿಗೆ ಮುಖಭಂಗ ಆಯ್ತು ಅಂತಾ ಬಿಂಬಿಸುತ್ತಿದ್ದಾರೆ.ಅದು ಮಂಡ್ಯದಲ್ಲಿ ಆ ರೀತಿ ಆಗೋದುಂಟ?, ಹತ್ತೂವರೆ ತಿಂಗಳು ಪ್ರಧಾನಿಯಾಗಿ , ೧೫ ತಿಂಗಳಿ ಸಿಎಂ ಆಗಿ ತುಂಬಾ ನೋವುಂಡಿದ್ದಿನಿ.ಮಂಡ್ಯ ಜನರ ಭಾವನೆ ನನಗೆ ಗೊತ್ತಿದೆ.
ಮಂಡ್ಯ ಮತದಾರರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ರು,
ದೇಶದಲ್ಲಿ ಎಲ್ಲಿ ನೋಡಿದ್ದಾರೆ.ಮೋದಿ, ಶಾ, ಅಂತಾರೆ, ಈ ಭಾರತಾಂಬೆ ನಿಮ್ಮನ್ನು ಎದುರಿಸುವ ವ್ಯಕ್ತಿಯನ್ನು ಹುಟ್ಟಿಸಿದ್ದಾಳೆ. ಮೋದಿ ೬ ಸಾವಿರ ರೈತರ ಖಾತೆ ಕೊಡ್ತಿವಿ ಅಂತಾರೆ, ಚುನಾವಣೆ ತಲುಪಿದ ಮೇಲೆ ಎಲ್ಲಿಗೆ ತಲುಪುತ್ತೇ ನೋಡೋಣವೆಂದು ಸವಾಲು ಹಾಕಿದರು.
ಬೋಗಿಬೆಲ್ ಸೇತುವೆಗೆ ನಾನು ಅಡಿಪಾಯ ಹಾಕಿ ಕಟ್ಟಿಸಿದೆ.ಆದರೀಗ ಉದ್ಘಾಟನೆ ಮಾಡಿ ನಾನು ಕಟ್ಟಿಸಿದೆ ಎಂದು ಮೋದಿ ಕೇಳಿಕೊಳ್ಳುತ್ತಾರೆ‌.ನಮ್ಮದು ಕುಟುಂಬ ರಾಜಕಾರಣ ಅಂತಾರೆ, ಯಾರು ಚರ್ಚೆಗೆ ಬರೋತ್ತರೀ ಬರಲಿ ಎಂದ್ರು.
ಸಿನೆಮಾ ನಟರಿಗೆ ಆಕರ್ಷಿಸುವ ಶಕ್ತಿಯಿದೆ.ಕೈ ಮುಗಿಯುತ್ತಿನಿ ನಾನು ಯಾರನ್ನು ನಿಂದನೆ ಮಾಡಲ್ಲ.ಡಾ.ರಾಜ್ ಕುಮಾರ್ ಅಂತಹ ಮೇರುವ್ಯಕ್ತಿತ್ವ ಯಾರಿಗೂ ಬರಲ್ಲ, ಚಿಕ್ಕಮಗಳೂರಿನಲ್ಲಿ ಇಂದಿರಾಗಾಂಧಿ ವಿರುದ್ಧ ಸ್ಪರ್ಧೆ ಮಾಡುವಂತೆ ಕೇಳಿಕೊಂಡೆ ಅವರು ಒಪ್ಪಲಿಲ್ಲ‌.ಅವರ ವ್ಯಕ್ತಿತ್ವನೇ ಬೇರೆ ಈಗಿನ ನಟರ ವ್ಯಕ್ತಿತ್ವನೇ ಬೇರೆ ಎಂದು ನಟರ ಹೆಸರೇಳದೆ ಚಾಟಿ ಬೀಸಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.