ETV Bharat / state

ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಗುರುಚರಣ್: ಪಕ್ಷಕ್ಕೆ ಸ್ವಾಗತಿಸಿದ ಮಾಜಿ ಸಿಎಂ ಕುಮಾರಸ್ವಾಮಿ

ಕಾಂಗ್ರೆಸ್​ ಟಿಕೆಟ್​ ಕೈ ತಪ್ಪಿದ ಹಿನ್ನೆಲೆ ಎಸ್​ ಗುರುಚರಣ್​ ಅವರು ಕಾಂಗ್ರೆಸ್​ ತೊರೆದು ಜೆಡಿಎಸ್​ ಸೇರಿದ್ದಾರೆ.

Gurucharan left Congress and joined JDS
ಗುರುಚರಣ್ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ ಮಾಜಿ ಸಿಎಂ ಹೆಚ್ಡಿಕೆ
author img

By

Published : Apr 20, 2023, 12:13 PM IST

Updated : Apr 20, 2023, 3:35 PM IST

ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಗುರುಚರಣ್

ಮಂಡ್ಯ: ಮದ್ದೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಅವರ ಸಹೋದರ ಪುತ್ರ ಕೆಪಿಸಿಸಿ ಸದಸ್ಯ ಎಸ್‌ ಗುರುಚರಣ್‌ ಗುರುವಾರ ಕಾಂಗ್ರೆಸ್‌ ತ್ಯಜಿಸಿ ಜೆಡಿಎಸ್‌ ಸೇರ್ಪಡೆಗೊಂಡಿದ್ದಾರೆ. ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಗುರುಚರಣ್‌ ನಿವಾಸಕ್ಕೆ ಗುರುವಾರ ಬೆಳಗ್ಗೆ 9 ಗಂಟೆಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಎಸ್. ಗುರುಚರಣ್‌ ಹಾಗೂ ನೂರಾರು ಬೆಂಬಲಿಗರನ್ನು ಜೆಡಿಎಸ್‌ ಪಕ್ಷಕ್ಕೆ ಸ್ವಾಗತಿಸಿದರು.

ಬಳಿಕ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಗುರುಚರಣ್ ಕುಟುಂಬಕ್ಕೆ ಅವಮಾನ ಆಗಿದೆ. 5 ದಶಕಗಳ ಕಾಲ ಪಕ್ಷಕ್ಕಾಗಿ ದುಡಿದ ಅವರ ಮನೆತನವನ್ನು ಕಾಂಗ್ರೆಸ್ ಪಕ್ಷದ ನಾಯಕರು ಕಡೆಗಣನೆ ಮಾಡಿದ್ದಾರೆ. ಬದಲಾದ ರಾಜಕಾರಣದಿಂದ ಇಂದು ಕೆಪಿಸಿಸಿ ಸದಸ್ಯ ಎಸ್. ಗುರುಚರಣ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗುತ್ತಿದ್ದಾರೆ ಎಂದರು.

ಗುರುಚರಣ್ ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ಚುನಾವಣೆಯಲ್ಲಿ ಶಾಸಕ ಡಿ.ಸಿ. ತಮ್ಮಣ್ಣ ಅವರ ಗೆಲುವಿಗೆ ಮತ್ತಷ್ಟು ಬಲ ಬಂದಂತಾಗಿದೆ. ಮುಂದಿನ ದಿನಗಳಲ್ಲಿ ಗುರುಚರಣ್ ಮತ್ತು ಬೆಂಬಲಿಗರನ್ನು ಎಲ್ಲಾ ರೀತಿಯ ಗೌರವಯುತವಾದ ಸ್ಥಾನ ಮಾನಗಳನ್ನು ನೀಡಿ ನಡೆಸಿಕೊಳ್ಳುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಗುರುಚರಣ್​, ಇದೇ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಅವರು ಎರಡು ವರ್ಷಗಳಿಂದ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಗುರುಚರಣ್​ಗೆ ಟಿಕೆಟ್​ ಎಂದು ಹೇಳುತ್ತಲೇ ಬಂದಿದ್ದರು. ಹಾಗೆಯೇ ನಾವು ಕೂಡ ಪಕ್ಷ ಕೊಟ್ಟ ಎಲ್ಲಾ ಕೆಲಸಗಳನ್ನು ನಿಷ್ಠೆಯಿಂದ ಮಾಡಿಕೊಂಡು ಬಂದಿದ್ದೇವೆ. ಆದರೆ ಈಗ ಪಕ್ಷಕ್ಕಾಗಿ ಏನೂ ಕೆಲಸ ಮಾಡದೇ ಇರುವ ಅವರಿಗೆ ಟಿಕೆಟ್​ ಘೋಷಣೆ ಮಾಡಿದೆ. ಇದು ಕಾಂಗ್ರೆಸ್​ನ ಎಲ್ಲಾ ಕಾರ್ಯಕರ್ತರಿಗೆ ನೋವುಂಟು ಮಾಡಿದೆ ಎಂದು ಹೇಳಿದರು.

ಕೊನೇ ಪಕ್ಷ ಅವರು ನಮ್ಮ ಕಾಂಗ್ರೆಸ್​ ಕಾರ್ಯಕರ್ತನ ಚುನಾವಣೆ, ಅಥವಾ ಪಕ್ಷದ ಇತರ ಯಾವುದೇ ಒಂದು ಕೆಲಸದಲ್ಲಾದರೂ ಭಾಗಿಯಾಗಿರುತ್ತಿದ್ದರೆ, ಇಲ್ಲಂದ್ರೆ ಅವರು ಜಯಚಾಮರಾಜೇಂದ್ರ ಒಡೆಯರ್​ ಕುಟುಂಬ ಅಥವಾ ಹೆಚ್​ ಕೆ ವೀರಣ್ಣ ಗೌಡರ ಕುಟುಂಬ ಅಥವಾ ಮಂಚೇಗೌಡರ ಕುಟುಂಬದವರೋ ಆಗಿರುತ್ತಿದ್ದರೆ, ಅಥವಾ ಸಮಾಜಕ್ಕೆ ಯಾವುದಾದರೊಂದು ಸೇವೆ ಮಾಡಿದವರಾಗಿರುತ್ತಿದ್ದರೆ, ಸರಿ ಅವರಿಗೆ ಟಿಕೆಟ್​ ಘೋಷಣೆ ಮಾಡಿದ್ದನ್ನು ಒಪ್ಪಿಕೊಳ್ಳಬಹುದಿತ್ತು. ಆದರೆ ಕಾಂಗ್ರೆಸ್​ನವರು ಅವರ ಬಳಿ ಹಣದ ಬಲ ಇದೆ ಎಂದು ಟಿಕೆಟ್​ ನೀಡಿದ್ದಾರೆ. ನಮ್ಮ, ಹಾಗೂ ಕಾರ್ಯಕರ್ತರ ಕಥೆ ಏನಾಗ್ಬೇಕು. ನಮ್ಮ ಕಡೆಯಿಂದಾದ ತಪ್ಪಾದರೂ ಏನು ಎಂದು ನಾನು ಕಾಂಗ್ರೆಸ್​ ಅನ್ನು ಕೇಳುತ್ತೇನೆ. ಕಾಂಗ್ರೆಸ್​ ಹೇಳಿದ್ದಕ್ಕೆ ಎಲ್ಲಾದಕ್ಕೂ ಒಪ್ಪಿಕೊಂಡಾದ ಮೇಲೂ ನಮಗೆ ಟಿಕೆಟ್​ ತಪ್ಪಿಸಿದ್ದು ಯಾಕೆ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಈಶ್ವರಪ್ಪ ಪುತ್ರನ ಕೈ ತಪ್ಪಿದ ಟಿಕೆಟ್: ಶಿವಮೊಗ್ಗಕ್ಕೆ ಚನ್ನಬಸಪ್ಪ, ಮಾನ್ವಿಗೆ ಬಿವಿ ನಾಯಕ್ ಹೆಸರು ಪ್ರಕಟ

Last Updated : Apr 20, 2023, 3:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.